ಹೆಣ್ಣಿನ ಹಸ್ತಕ್ಷೇಪದಿಂದ ರಾಜ್ಯ ರಾಜಕೀಯ ಏರುಪೇರು

 

ಹೆಣ್ಣಿನ ಹಸ್ತಕ್ಷೇಪದಿಂದ ರಾಜ್ಯ ರಾಜಕೀಯ ಏರುಪೇರಾಗುವ ಸಾಧ್ಯತೆ ಕಾರ್ಣಿಕಾ ನುಡಿದ ಗೊರವಯ್ಯ 
 

ಹಾವೇರಿ: ‘ಮುಕ್ಕೋಟಿ ಚೆಲ್ಲಿತಲೇ ಕಲ್ಯಾಣ ಕಟ್ಟಿತಲೇ ಪರಾಕ್’ ಎಂದು ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಸುಕ್ಷೇತ್ರ ದೇವರಗುಡ್ಡದ ಮಾಲತೇಶ ದೇವರ ಕಾರ್ಣಿಕ ಭವಿಷ್ಯ (karnika Bhaviṣya)
 ನುಡಿಯಲಾಗಿದೆ. ನಾಗಪ್ಪಜ್ಜ ಉರ್ಮಿ ಗೊರವಯ್ಯಾ ನುಡಿದ ಕಾರ್ಣಿಕವನ್ನು ಬಳಿಕ ದೇಗುಲದ ಪ್ರಧಾ‌ನ ಅರ್ಚಕ ಸಂತೋಷ ಭಟ್​ ವಿಶ್ಲೇಷಿಸಿದ್ದು, ಮುಕ್ಕೋಟಿ ಚಲ್ಲಿತಲೇ ಅಂದರೆ ರೈತರು ಕೋಟ್ಯಂತರ ರೂ. ಭೂಮಿಗೆ ಹಾಕುತ್ತಾರೆ. ರೈತರಿಗೆ ಲಾಭವಾಗುವ ನಿರೀಕ್ಷೆಗಳು ಕಡಿಮೆ. ಕಲ್ಯಾಣಿ ಕಕ್ಕಿತಲೆ ಅಂದರೆ ರಾಜ್ಯ ಸರ್ಕಾರಕ್ಕೆ ಆಪತ್ತು ಬರುವ ಸಾಧ್ಯತೆ.

ಒಂದು ಹೆಣ್ಣಿನ ಹಸ್ತಕ್ಷೇಪದಿಂದ ರಾಜ್ಯ ರಾಜಕೀಯ (State politics)ಏರುಪೇರಾಗುವ ಸಾಧ್ಯತೆ ಎಂದು ಕಾರ್ಣಿಕ ವಿಶ್ಲೇಷಿಸಿದ್ದಾರೆ. ಪ್ರತಿ ವರ್ಷ ದಸರಾ ಹಬ್ಬದ ಆಯುಧ ಪೂಜೆಯಂದು ಕಾರ್ಣಿಕ ನುಡಿಯಲಾಗುತ್ತದೆ. ಒಂಬತ್ತು ದಿನ ಉಪವಾಸವಿದ್ದು ಗೊರವಯ್ಯಾ ಕಾರ್ಣಿಕ ನುಡಿಯುತ್ತಾರೆ. ಬಿಲ್ಲನ್ನೇರಿ ಪ್ರಸಕ್ತ ವರ್ಷದ ಕಾರ್ಣಿಕವನ್ನು ಗೊರವಪ್ಪ ನುಡಿದಿದ್ದಾರೆ. ಮಾಲತೇಶ ದೇವರ ಕಾರ್ಣಿಕೋತ್ಸವದಲ್ಲಿ ಸಾವಿರಾರು ಭಕ್ತರು ಭಾಗಿ ಆಗಿದ್ದರು.
[t4b-ticker]

You May Also Like

More From Author

+ There are no comments

Add yours