ಮಕ್ಕಳ ಮಾನಸಿಕ ಮತ್ತು ದೈಹಿಕ ಅಭಿವೃದ್ಧಿಗೆ ಕ್ರೀಡೆಗಳು ಪೂರಕ:ಬಿಇಓ ಜಯಲಕ್ಷ್ಮಿ 

 

ವರದಿ:  ತುಮಕೂರ್ಲಹಳ್ಳಿ ಗೋವಿಂದಪ್ಪ 
ಮೊಳಕಾಲ್ಮುರು:( Molaklamuru) ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಕ್ರೀಡೆಗಳು ಅವಶ್ಯಕವಾಗಿದ್ದು ದೈಹಿಕ ಮತ್ತು ಮಾನಸಿಕ ಅಭಿವೃದ್ಧಿಗೆ  ಕ್ರೀಡಾಕೂಟಗಳು ಬಹಳ ಉಪಯುಕ್ತವಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಜಯಲಕ್ಷ್ಮಿ  ಕಾರ್ಯಕ್ರಮದಲ್ಲಿ ತ್ರೋ ಬಾಲ್ ಎಸೆಯುವ ಮೂಲಕ ಉದ್ಘಾಟನೆ ಮಾಡಿ ಮಾತನಾಡಿದರು.
ತಾಲ್ಲೂಕಿನ ಸಿದ್ದಾಪುರ ಗ್ರಾಮ ಪಂಚಾಯತಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಜಿಲ್ಲಾ ಪಂಚಾಯತಿ, ತಾಲ್ಲೂಕು ಪಂಚಾಯತಿ, ಸರ್ವ ಶಿಕ್ಷಣ ಇಲಾಖೆ, ಕ್ಷೇತ್ರ ಸಮನ್ವಯಾಧಿಕಾರಿಗಳ ಕಚೇರಿ, ಸಾಕ್ಷರತ ಇಲಾಖೆ ಮೊಳಕಾಲ್ಮುರು ಹಾಗೂ ಸಿದ್ದಾಪುರ ಗ್ರಾಮ ಪಂಚಾಯತಿ ಇವರ ಸಹಯೋಗದಲ್ಲಿ ಇಂದು ನಾಗಸಮುದ್ರ ವಲಯ ಮಟ್ಟದ ಕ್ರೀಡಾಕೂಟವನ್ನು ಉದ್ದೇಶಿಸಿ ಇವರು ತಮ್ಮ ಹರ್ಷವನ್ನು ವ್ಯಕ್ತ ಪಡಿಸಿದರು.
ಒಂದು ಮಗು ಉತ್ತಮ ಪ್ರಜೆಯಾಗಲು ಇಂತಹ ಕ್ರೀಡಾಕೂಟಗಳಲ್ಲಿ ಭಾಗವಹಿಸಬೇಕು. ಒಂದು ಮಗು ದೈಹಿಕವಾಗಿ ಮಾನಸಿಕವಾಗಿ ಸದೃಢವಾಗಿ ಬೆಳೆದು ತಮ್ಮ ಅರೋಗ್ಯವನ್ನು ಕಾಪಾಡಿಕೊಳ್ಳುವಲ್ಲಿ ಕ್ರೀಡಾಕೂಟಗಳ ಪಾತ್ರ ಬಹಳ ಮುಖ್ಯವಾಗಿದೆ. ಪೋಷಕರು ಯಾವುದೇ ಕಾರಣಕ್ಕೂ ತಮ್ಮ ಮಕ್ಕಳನ್ನು ಶಾಲೆಯಿಂದ ಬಿಡಿಸಬೇಡಿ. ನಮಗೆ ಯಾವುದೇ ಕಷ್ಟ ಬರಲಿ ಮಕ್ಕಳನ್ನು ಮಾತ್ರ ಶಾಲೆಗೆ ಕಳಿಸುವುದನ್ನು ಮರೆಯಬಾರದು . ಒಬ್ಬ ಮಗು ಸತ್ ಪ್ರಜೆಯಾಗಲು ಶಾಲೆಯ ಶಿಕ್ಷಣ ಮತ್ತು ಮಾರ್ಗದರ್ಶನ ಬಹು ಮುಖ್ಯ ವಾಗಿರುತ್ತದೆ. ಈ ಕ್ರೀಡಾಕೂಟದಲ್ಲಿ 15ಶಾಲೆಗಳ ಸುಮಾರು 500ವಿದ್ಯಾರ್ಥಿ ವಿದ್ಯಾರ್ಥಿನಿಯರು ಭಾಗವಹಿಸಿ ತಮ್ಮ ಶಾಲೆಗೆ ಕೀರ್ತಿತರಲು ನಾ ಮುಂದು ತಾ ಮುಂದು ಎಂದು ಭಾಗವಸುವುದನ್ನು ನೋಡಿದರೆ ಹೆಮ್ಮೆ ಆಗುತ್ತದೆ. ಒಟ್ಟಿನಲ್ಲಿ ಮಕ್ಕಳು ಈ ಕ್ರೀಡಾಕೂಟದಲ್ಲಿ ಒಂದು ಸಕರಾತ್ಮಕವಾಗಿ ಭಾಗವಹಿಸಿ, ಯಾವುದೇ ತೊಂದರೆಗೆ ಅವಕಾಶ ಕೊಡದೇ ಕ್ರೀಡಾಕೂಟದ ಸೋಲು ಗೆಲುವವನ್ನು ಸಮಾನವಾಗಿ ಸ್ವೀಕರಿಸಬೇಕು. ಸೋಲು ಗೆಲುವು ಸಾಮಾನ್ಯ ಆದರೆ ಅದನ್ನು ನಕಾರಾತ್ಮಕವಾಗಿ ತೆಗೆದು ಕೊಳ್ಳದೇ ಸಾಧನೆ ಮಾಡಿ ಶಾಲೆಗೆ ಕೀರ್ತಿ ತರಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ವಕೀಲರಾದ ರಾಜಶೇಖರ್ ನಾಯಕ   ಮಾತನಾಡಿ ಕ್ರೀಡಾಕೂಟಗಳು ಪುರಾತನ ರಾಜರ ಕಾಲದಿಂದಲೂ ನಡೆದು ಕೊಂಡು ಬಂದಿವೆ ಆದರೆ ಇಂದಿನ ಕಾಲದಲ್ಲಿ ದೇಶಿಯ ಕ್ರೀಡೆಗಳು ನಶಿಸಿ ಹೋಗುತ್ತಿರುವುದು ದುರದೃಷ್ಟಕರ. ಈ ಕ್ರೀಡಾಕೂಟವು ಯಶಸ್ವಿಯಾಗಿ ನಡೆದು ತಾಲ್ಲೂಕು ಮಟ್ಟದ ಕ್ರೀಡಾಕೂಟ ನಡೆದರೂ ಇಲ್ಲಿನ ಅಧಿಕಾರಿವರ್ಗ ನಡೆಸಿ ಕೊಡುತ್ತದೆ. ಪ್ರಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಜಯಲಕ್ಷ್ಮಿಯವರು ಬಹಳ ಶ್ರಮವಹಿಸಿ ಕೆಲಸ ಮಾಡಿದ್ದಾರೆ ಎಂದರೆ ತಪ್ಪಾಗಲಾರದು ಎಂದು ತಿಳಿಸಿದರು.
ನಾಗಸಮುದ್ರ ವಲಯ ಮಟ್ಟದ ಕ್ರೀಡಾಕೂಟದಲ್ಲಿ ಸಿದ್ದಾಪುರ ಗ್ರಾಮ ಪಂಚಾಯತಿ ಅಧ್ಯಕ್ಷರು ಎಚ್ ಎನ್ ಹಂಪಮ್ಮ ನಿಂಗಾರೆಡ್ಡಿ,  ಉಪಾಧ್ಯಕ್ಷರು ಗಂಗಾಧರ್,  ಸದಸ್ಯರಾದ ತಿಪ್ಪೇಸ್ವಾಮಿ, ನೌಕರರ ಸಂಘದ ಅಧ್ಯಕ್ಷರು ಈರಣ್ಣ ಉಪಾಧ್ಯಕ್ಷರು ಕರಿಬಸಪ್ಪ,  ಕಾರ್ಯದರ್ಶಿ ಪ್ರದೀಪ್, ಗೌರವ ಅಧ್ಯಕ್ಷರು ಸಣ್ಣ ಯಲ್ಲಪ್ಪ, ಸಿದ್ದಾಪುರ ಗ್ರಾಮ ಮುಖಂಡರು ಶೇಷಪ್ಪ  ವೀರಭದ್ರ ಶಾಸ್ತ್ರಿ ನಾಗರಾಜ್, ಓಂಕಾರಮ್ಮ, ಲಕ್ಷ್ಮಿ ಪತಿ, ಬಿಆರ್ ಸಿ  ತಿಪ್ಪೇಸ್ವಾಮಿ, ಈ ಸಿ ಒ ಓಂಕಾರಪ್ಪ, ಮೋಹನ್ ಕುಮಾರ್, ಸಿದ್ದಾಪುರ ಗ್ರಾ ಪ ಪಿಡಿ ಒ ಮಾರಣ್ಣ ವಿವಿಧ ಶಾಲೆಗಳ ದೈಹಿಕ ಶಿಕ್ಷಕರು, ನಾಗಸಮುದ್ರ , ಚಿಕ್ಕೇರಹಳ್ಳಿ ಬೈರಾಪುರ ಕೊಮ್ಮಾನಪಟ್ಟಿ ಹಾನಗಲ್, ಸಿದ್ದಾಪುರ, ಅಮಕುಂದಿ, ಭಟ್ರಹಳ್ಳಿ, ಗೌರಸಮುದ್ರ, ಮಾಚೇನಹಳ್ಳಿ, ಹಿರೇಕೆರೆ ಹಳ್ಳಿ ರಾಮಸಾಗರ, ಕಾಟನಾಯಕ ಹಟ್ಟಿ,ಹಾಗೂ ಅಶೋಕ ಸಿದ್ದಾಪುರ ಶಾಲೆಗಳ ಒಟ್ಟು 15 ಶಾಲೆಗಳು ಹಾಗೂ 500 ವಿದ್ಯಾರ್ಥಿ ವಿದ್ಯಾರ್ಥಿನಿಯರು ಊರುಗಳ ಸಾರ್ವಜನಿಕರು, ಆಶಾ ಕಾರ್ಯಕರ್ತರು, ಕ್ರೀಡಾ ಕೂಟದಲ್ಲಿ ಭಾಗವಹಿಸಿದ್ದರು.
[t4b-ticker]

You May Also Like

More From Author

+ There are no comments

Add yours