ಅಧ್ಯಾತ್ಮಿಕ ಪ್ರೀತಿಯು ಸತ್ಯ ಹಾಗೂ ಸಮೃದ್ಧಿ ಜಗತ್ತನ್ನು ಸೃಷ್ಠಿಸುವ ಮಹನ್ ಶಕ್ತಿ ಸ್ವರೂಪ: ಬಿ.ಕೆ.ಸುಮಿತ್ರಕ್ಕ

 

ಹೊಳಲ್ಕೆರೆ : ಅಧ್ಯಾತ್ಮಿಕ ಪ್ರೀತಿಯು ಸತ್ಯ ಹಾಗೂ ಸಮೃದ್ಧಿ ಜಗತ್ತನ್ನು ಸೃಷ್ಠಿಸುವ ಮಹನ್ ಶಕ್ತಿ ಸ್ವರೂಪ. ಹಾಗಾಗಿ ಮನಸ್ಸಿನ ಶಾಂತಿಗಾಗಿ ಅಧ್ಯಾತ್ಮಿಕ ಚಿಂತನೆ ಅಗತ್ಯವಿದೆ ಎಂದು ಪ್ರಜಾಪಿತ ಬ್ರಹ್ಮಕುಮಾರೀಸ್ ಈಶ್ವರೀಯ ವಿಶ್ವ ವಿದ್ಯಾನಿಲಯದ ಸಂಚಾಲಕರಾದ ಬಿ.ಕೆ.ಸುಮಿತ್ರಕ್ಕ ತಿಳಿಸಿದರು.

ಅವರು ಪಟ್ಟಣದ ಪ್ರಜಾಪಿತ ಬ್ರಹ್ಮಕುಮಾರೀಸ್ ಈಶ್ವರೀಯ ವಿಶ್ವ ವಿದ್ಯಾನಿಲಯದ ಆವರಣದಲ್ಲಿ ಹಮ್ಮಿಕೊಂಡಿದ್ದ ಅಧ್ಯಾತ್ಮಿಕ ಚಿಂತನೆ ಹಾಗೂ ೨೦೨೩ ವರ್ಷಚಾರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಅಧ್ಯಾತ್ಮಿಕ ಚಿಂತನೆ ಯಿಂದ ಸಾಮಾಜಿಕ ಪರಿವರ್ತನೆ ಸಾಧ್ಯ. ಅಶಾಂತಿ ಸರಪಳಿಯಲ್ಲಿ ಸಿಲುಕಿ ಸಂಕಷ್ಟದಲ್ಲಿರುವ ಮನುಕುಲಕ್ಕೆ ಶಾಂತಿ ಸಂಧೇಶಗಳನ್ನು ಭಿತ್ತರಿಸಬೇಕು. ಸತ್ಯದ ಮಾರ್ಗದಲ್ಲಿ ಬದುಕು ಕಟ್ಟಿಕೊಳ್ಳಲು ಧಾರ್ಮಿಕ ಅವಲೋಕನ ಬೇಕು. ಧರ್ಮ ಮತ್ತು ಅಧ್ಯಾತ್ಮಿಕ ಶಕ್ತಿಯನ್ನು ಮನನ ಮಾಡಿಕೊಳ್ಳುವುದರ ಮೂಲಕ ಸಮಚಿತ್ತ ಸಮಾಜ ಕಟ್ಟಲು ಸಾಧ್ಯ ಎಂದರು.
ಸನ್ಮಾನ ಸ್ವೀಕರಿಸಿದ ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಕೆ.ಎಂ.ಶಿವಕುಮಾರ್ ಮಾತನಾಡಿ, ಬದುಕಿನಲ್ಲಿ ಜಂಜಾಟಗಳು ಹೆಚ್ಚಾಗಿ ನಮ್ಮಲ್ಲಿರುವ ಅಧ್ಯಾತ್ಮಿಕ ಚೈತನ್ಯವನ್ನು ನಿರ್ಲಷ್ಯ ಮಾಡಿದ್ದೇವೆ. ಹಾಗಾಗಿ ಅಧ್ಯಾತ್ಮಿಕ ಚಿಂತನೆಯನ್ನು ಮೈಗೂಡಿಸಿಕೊಂಡಾಗ ಸತ್ಯ ಸಂಧೇಶವನ್ನು ಸಮಾಜಕ್ಕೆ ತಿಳಿಸಲು ಸಹಕಾರಿಯಾಗಲಿದೆ ಎಂದರು.
ರಾಜ್ಯ ಸಹಾಕಾರಿ ರತ್ನ ಪ್ರಶಸ್ತಿ ಪುರಸ್ಕೃತರಾದ ಶಿವಗಂಗದ ಎಸ್.ಆರ್.ಗಿರೀಶ್ ಮಾತನಾಡಿ, ಕಳೆದ ೨೦ ವರ್ಷಗಳಿಂದ ತಾಲೂಕಿನಲ್ಲಿ ಈಶ್ವರಿಯ ಚಿಂತನೆಗಳನ್ನು ಜನರಿಗೆ ತಿಳಿಸುವ ಮೂಲಕ ಮಾನವೀಯ ಸಂಧೇಶಗಳನ್ನು ಬಿತ್ತರಿಸಲಾಗಿತ್ತಿದೆ. ಇದರಿಂದ ತಾಲೂಕಿನಲ್ಲಿ ಸದ್ಬವನೆ ಸೃಷ್ಟಿಸಲಾಗಿದೆ ಎಂದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಖ್ಯಾತ ವಕೀಲರಾದ ಮಲ್ಲಾಡಿಹಳ್ಳಿ ಸತ್ಯನಾರಾಯಣ ಮಾತನಾಡಿ, ಪ್ರಜಾಪೀತ ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾನಿಲಯದಲ್ಲಿ ಒಂದು ಶಕ್ತಿ ಅಡಗಿದೆ. ಇಲ್ಲಿಗೆ ಬಂದು ಪ್ರಾರ್ಥಿಸಿದಾಗ ಇಲ್ಲಿನ ಮಹತ್ವ ನಮಗೆ ಅರಿವಿಗೆ ಬರಲಿದೆ ಎಂದರು.
ಮಕ್ಕಳ ತಜ್ಞಾನ ವೈದ್ಯರಾದ ಡಾ. ಮಂಜುನಾಥ ಸನ್ಮಾನ ಸ್ವೀಕರಿಸಿ ಮಾತನಾಡಿ, ಕೋವಿಡ್ ಬಗ್ಗೆ ಯಾರಿಗೂ ಭಯ ಬೇಡ. ಸರಕಾರ ಮತ್ತು ವೈದ್ಯರುಗಳು ಕೋವಿಡ್ ನಿಮೂರ್ಲನೆ ಬಗ್ಗೆ ಸಾಕಷ್ಟು ಕ್ರಮ ಕೈಗೊಂಡಿದ್ದು, ಯಾವುದೇ ತೊಂದರೆ ಈಗೀಲ್ಲ ಎಂದರು.
ತಾ.ಪಂ.ಮಾಜಿ ಅಧ್ಯಕ್ಷ ಶರತಕುಮಾರ್ ಪಾಟೀಲ್, ಎಸ್.ಆರ್.ಮೋಹನ್ ನಾಗರಾಜ್, ವಕೀಲರಾದ ಎಸ್.ವೇದಮೂರ್ತಿ ಮಾತನಾಡಿದರು.
ಪ್ರಮುಖರಾದ ಎಂ.ಎಲ್.ನಾಗರಾಜ್ ಶೆಟ್ಟಿ, ಜಯಣ್ಣ, ನಿವೃತ್ತ ತಹಸೀಲ್ದಾರ್ ಗಂಗಮ್ಮಕ್ಕ, ನಿಂಗಪ್ಪ ಸೇರಿದಂತೆ ಹಲವಾರು ಜನರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಪೋಟೋ : ೧ಹೆಚ್.ಎಲ್.ಕೆ.೧ ಹೊಳಲ್ಕೆರೆಯÀ ಪ್ರಜಾಪೀತ ಬ್ರಹ್ಮಕುಮಾರೀಸ್ ಈಶ್ವರೀಯ ವಿಶ್ವ ವಿದ್ಯಾನಿಲಯದ ಆವರಣದಲ್ಲಿ ಹಮ್ಮಿಕೊಂಡಿದ್ದ ಅಧ್ಯಾತ್ಮಿಕ ಚಿಂತನೆ ಹಾಗೂ ೨೦೨೩ ವರ್ಷಚಾರಣೆ ಕಾರ್ಯಕ್ರಮದಲ್ಲಿ ಗಣ್ಯರಿಗೆ ಸನ್ಮಾನ.

[t4b-ticker]

You May Also Like

More From Author

+ There are no comments

Add yours