ಹೊಸ ವರ್ಷಕ್ಕೆ ಕೇಂದ್ರ ಸರ್ಕಾರ ಸಿಲಿಂಡರ್ ಬೆಲೆ ಏರಿಕೆಯ ಕಹಿ

 

ನವದೆಹಲಿ: ಹೊಸ ವರ್ಷದ (New Year) ಸಂಭ್ರಮದಲ್ಲಿರುವಾಗಲೇ ತೈಲ ಮಾರುಕಟ್ಟೆ ಕಂಪನಿಗಳು (Oil Marketing Companies) ದೇಶದ ಜನತೆಗೆ ಶಾಕ್‌ ನೀಡಿವೆ. ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯಲ್ಲಿ (Commercial LPG Cylinder Price) 25 ರೂ. ಏರಿಕೆಯಾಗಿದೆ.

ಆದರೆ, ಸಾಮಾನ್ಯ ಜನರು (Common People) ಬಳಸುವ ಗೃಹೋಪಯೋಗಿ ಸಿಲಿಂಡರ್‌ಗಳ ಬೆಲೆಯಲ್ಲಿ (Domestic LPG Cylinder Price) ಯಾವುದೇ ವ್ಯತ್ಯಾಸವಾಗಿಲ್ಲ ಹಾಗೂ ಅವುಗಳನ್ನು ಪ್ರಸ್ತುತ ಇರುವ ಬೆಲೆಯಲ್ಲೇ ಮಾರಾಟ ಮಾಡಲಾಗುತ್ತದೆ ಎಂದು ತಿಳಿದುಬಂದಿದೆ. ಆದರೆ, ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯಲ್ಲಿ ಮಾತ್ರ ದೇಶಾದ್ಯಂತ ಹೆಚ್ಚಳವಾಗಿದೆ.

ಈ ಹಿನ್ನೆಲೆ 19 ಕೆಜಿ ತೂಕದ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ಪರಿಷ್ಕೃತ ದರ ಹೀಗಿದೆ ನೋಡಿ.. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 1,768 ರೂ.ಗೆ, ಮುಂಬೈನಲ್ಲಿ 1,721 ರೂ. ಗೆ, ಕೋಲ್ಕತ್ತದಲ್ಲಿ 1,870 ರೂ. ಗೆ ಹಾಗೂ ಚೆನ್ನೈನಲ್ಲಿ 1,971 ರೂ. ಗೆ ಮಾರಾಟ ಮಾಡಲಾಗುತ್ತದೆ ಎಂದು ವರದಿಯಾಗಿದೆ.

ಇದರಿಂದ ಈಗಾಗಲೇ ಬೆಲೆ ಏರಿಕೆಯ ಶಾಕ್‌ನಲ್ಲಿರುವ ಜನತೆ ಹೋಟೆಲ್‌, ರೆಸ್ಟೋರೆಂಟ್‌ಗಳಲ್ಲಿ ತಿಂಡಿ, ಊಟ ಮಾಡಲು ಹೆಚ್ಚು ದರ ನೀಡಬೇಕಾಗಬಹುದು ಎಂದು ಹೇಳಲಾಗುತ್ತಿದೆ. ಆದರೂ, ಗೃಹೋಪಯೋಗಿ ಸಿಲಿಂಡರ್‌ಗಳ ಬೆಲೆ ಯಥಾಸ್ಥಿತಿ ಕಾಯ್ದುಕೊಂಡಿದ್ದು, ಪ್ರಸ್ತುತ ದರದಲ್ಲೇ ಮಾರಾಟ ಮಾಡಲಾಗುತ್ತದೆ.

ಗೃಹೋಪಯೋಗಿ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆ
ಮುಂಬೈ – ಪ್ರತಿ ಸಿಲಿಂಡರ್‌ಗೆ 1,052.5 ರೂ.
ದೆಹಲಿ – ಪ್ರತಿ ಸಿಲಿಂಡರ್‌ಗೆ 1,053 ರೂ.
ಕೋಲ್ಕತ್ತ – ಪ್ರತಿ ಸಿಲಿಂಡರ್‌ಗೆ 1079 ರೂ.
ಚೆನ್ನೈ – ಪ್ರತಿ ಸಿಲಿಂಡರ್‌ಗೆ 1,068.5 ರೂ.

[t4b-ticker]

You May Also Like

More From Author

+ There are no comments

Add yours