ಮಣ್ಣಿನ ಫಲವತ್ತತೆಗೆ ಐದು ಪ್ರಮುಖ ವಿಷಯಗಳತ್ತ ಗಮನ ಹರಿಸಿದೆ: ಪ್ರಧಾನಿ ನರೇಂದ್ರ ಮೋದಿ.

 

ದೆಹಲಿ:  ಹವಾಮಾನ ಬದಲಾವಣೆಯಲ್ಲಿ ಭಾರತದ ಪಾತ್ರ ನಗಣ್ಯವಾದರೂ ದೇಶದಲ್ಲಿ ಮಣ್ಣಿನ ಆರೋಗ್ಯ ಮತ್ತು ಪರಿಸರ ಕಾಪಾಡಲು ಕೇಂದ್ರ ಸರ್ಕಾರ ಆದ್ಯತೆ ನೀಡದ್ದೇವೆ  ಎಂದು  ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ಮಣ್ಣಿನ ಫಲವತ್ತತೆಗೆ ಐದು ಪ್ರಮುಖ ವಿಷಯಗಳತ್ತ ಗಮನ ಹರಿಸಿದೆ. ಪ್ರಮುಖ ೫ ಅಂಶಗಳಿಂದರೆ ಮಣ್ಣನ್ನು ರಾಸಾಯನಿಕ ಮುಕ್ತವನ್ನಾಗಿ ಮಾಡುವುದು, ಭೂಮಿಯಲ್ಲಿ ವಾಸಿಸುವ ಜೀವಿಗಳನ್ನು ತಾಂತ್ರಿಕ ಭಾಷೆಯಲ್ಲಿ ಹೇಗೆ ಉಳಿಸುವುದು ಎನ್ನುವುದರ ಕಡೆಗೆ  ಒತ್ತು,ಮಣ್ಣಿನ ತೇವಾಂಶ ಕಾಪಾಡಿಕೊಳ್ಳುವುದು, ನೀರಿನ ಲಭ್ಯತೆ ಹೆಚ್ಚಿಸುವುದು,ಕಡಿಮೆ ಅಂತರ್ಜಲದಿಂದ ಮಣ್ಣಿಗೆ ಆಗುತ್ತಿರುವ ಹಾನಿ ತಡೆಯುವುದು ಹಾಗೂ ಅರಣ್ಯ ಪ್ರದೇಶವನ್ನು ಕಡಿಮೆಗೊಳಿಸುವುದರಿಂದ ಮಣ್ಣಿನ ನಿರಂತರ ಸವೆತವನ್ನು ಹೇಗೆ ನಿಲ್ಲಿಸುವುದು ಎನ್ನುವ ಕಡೆಗೆ ಗಮನ ಹರಿಸಲಾಗಿದೆ ಎಂದರು.

ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಇಶಾ ಪ್ರತಿಷ್ಠಾನ ಹಮ್ಮಿಕೊಂಡಿದ್ದ “ಮಣ್ಣು ಉಳಿಸಿ ಅಭಿಯಾನ” ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು ದೇಶದಲ್ಲಿ ೨೨ ಕೋಟಿಗೂ ಹೆಚ್ಚು ಮಣ್ಣಿನ ಆರೋಗ್ಯ ಕಾರ್ಡ್‌ಗಳನ್ನು ರೈತರಿಗೆ ನೀಡಲಾಗಿದೆ, ಇದು ಮಣ್ಣಿನ ಆರೋಗ್ಯ ಗುಣಮಟ್ಟ ಸುಧಾರಿಸಲು ಸಹಾಯ ಮಾಡಿದೆ ಮತ್ತು ಪರಿಣಾಮವಾಗಿ ಧಾನ್ಯಗಳು ಮತ್ತು ಆಹಾರದ ಗುಣಮಟ್ಟವನ್ನು ಸುಧಾರಿಸಿದೆ.”ಪ್ರತಿ ಹನಿ ಹೆಚ್ಚು ಬೆಳೆ’ ಎಂದು ಬೆಳೆಗಳಿಗೆ ಸಾಕಷ್ಟು ನೀರು ಒದಗಿಸುವ ಅಗತ್ಯವನ್ನು ಉಲ್ಲೇಖಿಸಿದೆ ಎಂದು ಅವರು ಹೇಳಿದರು.ಕೇಂದ್ರ ಸರ್ಕಾರದ ಹಲವು ಯೋಜನೆಗಳು ಪರಿಸರ ಸಂರಕ್ಷಣೆಯ ಸಂದೇಶವನ್ನು ಸಾರುತ್ತವೆ. ಅದರಲ್ಲಿ ಪ್ರಮುಖವಾಗಿ ಸ್ವಚ್ಛ ಭಾರತ್ ಮಿಷನ್ , ನಮಾಮಿ ಗಂಗೆಯಾಗಿರಲಿ ಅಥವಾ ಒಂದು ಸೂರ್ಯ, ಒಂದು ಗ್ರಿಡ್ ಆಗಿರಲಿ ಸೇರಿದಂತೆ ಹಲವು ಪ್ರಯತ್ನಗಳು ಬಹುಮುಖವಾಗಿವೆ ಎಂದು  ಜನರಿಗೆ ತಿಳಿಸಿದರು.

 

[t4b-ticker]

You May Also Like

More From Author

+ There are no comments

Add yours