ನೆಲಸಂಸ್ಕøತಿ ಉಳಿಸಿ ಬೆಳೆಸುವಂತಾಗಬೇಕು: ಡಾ.ಎಂ.ಯು.ಲೋಕೇಶ್

 

 ಯುವ ಸೌರಭ ಕಾರ್ಯಕ್ರಮದಲ್ಲಿ ಜಿ.ಆರ್.ಹಳ್ಳಿ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಸಂಯೋಜನಾಧಿಕಾರಿ ಡಾ.ಎಂ.ಯು.ಲೋಕೇಶ್

ಚಿತ್ರದುರ್ಗ(ಕರ್ನಾಟಕ ವಾರ್ತೆ)ಮಾ.01:
ಪ್ರಸ್ತುತ ದಿನಗಳಲ್ಲಿ ಬೇರೆ ಬೇರೆ ಮಾಧ್ಯಮಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಿರುವುದರಿಂದ ನೆಲಸಂಸ್ಕøತಿ ಪ್ರದರ್ಶಿಸಲು ವೇದಿಕೆಯ ಅವಕಾಶಗಳು ಕಡಿಮೆಯಾಗುತ್ತಿವೆ, ಹೀಗಾಗಿ ನೆಲಸಂಸ್ಕøತಿಯನ್ನು ಉಳಿಸಿ ಬೆಳೆಸುವುದು ಇಂದಿನ ಅಗತ್ಯಗಳಲ್ಲೊಂದಾಗಿದೆ ಎಂದು ದಾವಣಗೆರೆ ವಿಶ್ವವಿದ್ಯಾನಿಲಯ ಚಿತ್ರದುರ್ಗ ಸ್ನಾತಕೋತ್ತರ ಅಧ್ಯಯನ ಕೇಂದ್ರ ಸಂಯೋಜನಾಧಿಕಾರಿ ಡಾ.ಎಂ.ಯು.ಲೋಕೇಶ್  ಹೇಳಿದರು.
ಚಿತ್ರದುರ್ಗ ತಾಲ್ಲೂಕಿನ ಗುಡ್ಡದರಂಗವ್ವನಹಳ್ಳಿಯ ದಾವಣಗೆರೆ ವಿಶ್ವವಿದ್ಯಾನಿಲಯ ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ಶುಕ್ರವಾರ ಕನ್ನಡ ಮತ್ತು ಸಂಸ್ಕøತಿ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ಯುವ ಸೌರಭ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಮುಂದಿನ ದಿನಗಳಲ್ಲಿ ಯುವ ಜನತೆ, ಕನ್ನಡ ನೆಲಮೂಲ ಸಂಸ್ಕøತಿಯನ್ನು ಬಿತ್ತರಿಸಲು ಸಿಗುವ ವೇದಿಕೆಗಳನ್ನು ಸದುಪಯೋಗಪಡಿಸಿಕೊಳ್ಳಬೇಕು. ಯುವ ಸೌರಭ ಕೇವಲ ಒಂದು ದಿನಕ್ಕೆ ಸೀಮಿತವಾಗಿರಬಾರದು. ಯುವಕ-ಯುವತಿಯರು ಇಂತಹ ವೇದಿಕೆಗಳನ್ನು ಬಳಸಿಕೊಂಡು ತಮ್ಮ ಪ್ರತಿಭೆ ಅನಾವರಣಗೊಳಿಸಬೇಕು. ನಮ್ಮ ಸಂಸ್ಕøತಿ ಬಿತ್ತರಗೊಳಿಸಲು ಯುವ ಸೌರಭ ಉತ್ತಮ ವೇದಿಕೆಯಾಗಿದೆ ಎಂದು ಅಭಿಪ್ರಾಯಪಟ್ಟರು.
ಪ್ರಪಂಚದಲ್ಲಿಯೇ ಭಾರತ ದೇಶ ಹೆಚ್ಚು ಯುವಶಕ್ತಿ ಹೊಂದಿದೆ. ಹಾಗೆಯೇ ಭಾರತದ ನೆಲಮೂಲ ಸಂಸ್ಕøತಿಯಾಗಿ ಪ್ರತಿಯೊಂದು ರಾಜ್ಯದ, ಪ್ರತಿಯೊಂದು ಭಾಗದ ಸಂಸ್ಕøತಿ ಬಿಂಬಿಸಲು ಕಲಾಪ್ರದರ್ಶನ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಕನ್ನಡದ ನೆಲ ಸಂಸ್ಕøತಿಯನ್ನು ಪ್ರದರ್ಶಿಸಲು ಹಾಗೂ ಮನೋರಂಜನೆ ನೀಡಲು ಯುವ ಸೌರಭ ಕಾರ್ಯಕ್ರಮ ಅಚ್ಚುಕಟ್ಟಾಗಿ ಆಯೋಜಿತಗೊಂಡಿದೆ ಎಂದು ಹೇಳಿದರು.
ಕನ್ನಡ ಅಧ್ಯಯನ ವಿಭಾಗ ವಿಷಯ ಸಂಯೋಜಕ ಡಾ.ಹೆಚ್.ಜಿ.ವಿಜಯಕುಮಾರ್ ಮಾತನಾಡಿ, ಕಲಾ ತಂಡಗಳು ಹಾಗೂ ಕಲಾವಿದರಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಕನ್ನಡ ಮತ್ತು ಸಂಸ್ಕøತಿ ಇಲಾಖೆಯು ಕಾರ್ಯನಿರ್ವಹಿಸುತ್ತಿದೆ. ಯುವ ಜನತೆಯನ್ನು ಕಲೆಗಳ ಕಡೆಗೆ ಸೆಳೆಯುವ ಪ್ರಯತ್ನ ಆಶಾದಾಯಕವಾಗಿದ್ದು, ಯುವ ಜನತೆ ಸಾಂಸ್ಕøತಿಕ ಕಲೆಗಳನ್ನು ಉಳಿಸಿ ಬೆಳೆಸುವ ಕೆಲಸವಾಗಬೇಕು ಎಂದು ಆಶಯ ವ್ಯಕ್ತಪಡಿಸಿದರು.
ವಿದ್ಯಾರ್ಥಿಗಳ ಮುದಗೊಳಿಸಿದ ಯುವ ಸೌರಭ:
*********ಯುವ ಸೌರಭ ಕಾರ್ಯಕ್ರಮದ ಅಂಗವಾಗಿ ಹಮ್ಮಿಕೊಂಡಿದ್ದ ಸಾಂಸ್ಕøತಿಕ ಕಾರ್ಯಕ್ರಮಗಳು ಸ್ನಾತಕೋತ್ತರ ಕೇಂದ್ರದ ವಿದ್ಯಾರ್ಥಿಗಳ ಮನಸೂರೆಗೊಂಡಿತು.
ಚಿತ್ರದುರ್ಗ ಮೈಲಾರಿ ಮತ್ತು ತಂಡದವರ ಜನಪದ ಗೀತೆಗಳು, ಹಿರಿಯೂರಿನ ನಾಗಶ್ರೀ ಭಟ್ ಅವರ ಸಮೂಹ ನೃತ್ಯ, ಚಿತ್ರದುರ್ಗದ ಅಫ್ರೀನ್ ಕೌಸರ್ ಮತ್ತು ಸಂಗಡಿಗರ ಸುಗಮ ಸಂಗೀತ, ಚಿತ್ರಹಳ್ಳಿಯ ಎನ್.ಹನುಮಂತ ಮತ್ತು ತಂಡದಿದವರ ನಾಸಿಕ್ ಡೋಲು, ಎಂ.ಕೆ.ಹಟ್ಟಿಯ ಕೆ.ಮನು ಮತ್ತು ತಂಡದವರ ಕಹಳೆ ವಾಹನ ಹಾಗೂ ಗೋನೂರಿನ ಆಕಾಶ್ ಮತ್ತು ತಂಡದವರಿಂದ “ಕೋಟು”  ಹಾಸ್ಯ ನಾಟಕ ಪ್ರದರ್ಶನ ನಡೆಯಿತು.
ಸಂವಿಧಾನ ಜಾಗೃತಿ ಜಾಥಾ:
*********ದಾವಣಗೆರೆ ವಿಶ್ವವಿದ್ಯಾನಿಲಯ ಜಿ.ಆರ್.ಹಳ್ಳಿ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಮುಖ್ಯದ್ವಾರದಲ್ಲಿ ಸಂವಿಧಾನ ಜಾಗೃತಿ ಜಾಥಾ ಹಾಗೂ ಯುವ ಸೌರಭ ಕಾರ್ಯಕ್ರಮಕ್ಕೆ ದಾವಣಗೆರೆ ವಿಶ್ವವಿದ್ಯಾನಿಲಯ ಚಿತ್ರದುರ್ಗ ಸ್ನಾತಕೋತ್ತರ ಅಧ್ಯಯನ ಕೇಂದ್ರ ಸಂಯೋಜನಾಧಿಕಾರಿ ಡಾ.ಎಂ.ಯು.ಲೋಕೇಶ್ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಎಸ್.ಕೆ.ಮಲ್ಲಿಕಾರ್ಜುನ ಅವರು ಇದೇ ಸಂದರ್ಭದಲ್ಲಿ ಚಾಲನೆ ನೀಡಿದರು.
ಜಿ.ಆರ್.ಹಳ್ಳಿ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಮುಖ್ಯದ್ವಾರದಿಂದ ಪ್ರಾರಂಭವಾದ ಮೆರವಣಿಗೆಯು ವೇದಿಕೆ ಕಾರ್ಯಕ್ರಮ ನಡೆಯುವ ಸಭಾಂಗಣದವರೆಗೆ ಮೆರವಣಿಗೆ ನಡೆಯಿತು. ವಿವಿಧ ಜಾನಪದ ಕಲಾಪ್ರಕಾರಗಳು ಮೆರವಣಿಗೆಗೆ ಮೆರಗು ನೀಡಿತು.
ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಎಸ್.ಕೆ.ಮಲ್ಲಿಕಾರ್ಜುನ, ದಾವಣಗೆರೆ ವಿಶ್ವವಿದ್ಯಾಲಯ ಜಿ.ಆರ್.ಹಳ್ಳಿ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಪ್ರಾಧ್ಯಾಪಕರಾದ ರೂಪೇಶ್ ಕುಮಾರ್, ಡಾ.ಭೀಮಾಶಂಕರ್, ಡಾ.ಗಿರೀಶ್, ಬಿ.ಟಿ.ನಿವೇದಿತಾ, ಶೌಕತ್ ಅಲಿ, ಅರುಣ್ ಕುಮಾರ್, ಎನ್‍ಎಸ್‍ಎಸ್ ಅಧಿಕಾರಿ ಸುಂದರಂ, ರಂಗನಿರ್ದೇಶಕ ಕೆಪಿಎಂ ಗಣೇಶಯ್ಯ ಸೇರಿದಂತೆ ಸ್ನಾತಕೋತ್ತರ ಅಧ್ಯಯನ ಕೇಂದ್ರದ ವಿದ್ಯಾರ್ಥಿಗಳು ಇದ್ದರು.

[t4b-ticker]

You May Also Like

More From Author

+ There are no comments

Add yours