ಸಿದ್ದು ಲೆಕ್ಕ ಬಜೆಟ್ ನಲ್ಲಿ ಯಾವ ಯೋಜನೆ ಎಷ್ಟು ಹಣ ನೋಡಿ

 

ಬೆಂಗಳೂರು,ಜು.7:ಕಾಂಗ್ರೆಸ್‌ನ 5  ಗ್ಯಾರಂಟಿ ಯೋಜನೆಗಳಾದ ಅನ್ನಭಾಗ್ಯ, ಗೃಹಲಕ್ಷ್ಮಿ, ಗೃಹಜ್ಯೋತಿ, ಶಕ್ತಿ, ಯುವನಿಧಿ ಯೋಜನೆಗಳ ಜಾರಿಯನ್ನು ಬಜೆಟ್‌ನಲ್ಲಿ ಘೋಷಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯರವರು ಎಣ್ಣೆ  ಮೇಲಿನ ಅಬಕಾರಿ ಶುಲ್ಕವನ್ನು ಹೆಚ್ಚಿಸಿ ಸಂಪನ್ಮೂಲ ಕ್ರೋಢೀಕರಣಕ್ಕೆ ಮುಂದಾಗಿದ್ದು, ಉಳಿದಂತೆ ಯಾವುದೇ ತೆರಿಗೆ ಹೊರೆಯನ್ನು ಜನಸಾಮಾನ್ಯರ ಮೇಲೆ ವಿಧಿಸದೆ ರಾಜ್ಯದ ಸರ್ವಾಂಗೀಣ ಅಭಿವೃದ್ಧಿಗೆ ಪೂರಕವಾದ ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ಎಂಬ ತತ್ವವನ್ನು  ಒಳಗೊಂಡಿರುವ ಬಜೆಟ್‌ನ್ನು ಮಂಡಿಸಿದ್ದಾರೆ.

ವಿಧಾನಸಭೆಯಲ್ಲಿಂದು ೨೦೨೩-೨ನೇ ಸಾಲಿನ ಬಜೆಟ್‌ನ್ನು ಮಂಡಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೃಷಿಕರು, ಮಹಿಳೆಯರು, ಧೀನ ದಲಿತರು -ದುರ್ಬಲರ ಸರ್ವಾಂಗೀಣ ಅಭಿವೃದ್ಧಿಗೆ ಹಲವಾರು ಯೋಜನೆಗಳನ್ನು ಘೋಷಿಸಿದ್ದು, ರೈತರಿಗೆ ನೀಡುವ ಶೂನ್ಯ ಬಡ್ಡಿ ದರದ ಸಾಲವನ್ನು ೩ ಲಕ್ಷದಿಂದ ೫ ಲಕ್ಷಕ್ಕೆ ಏರಿಕೆ ಮಾಡುವುದಾಗಿ ಘೋಷಿಸಿ ರೈತಾಪಿ ವರ್ಗಕ್ಕೆ ಸಿಹಿ ನೀಡಿದ್ದಾರೆ. ಹಾಗೆಯೇ, ಶೇ. ೩ರ ಬಡ್ಡಿ ದರದಲ್ಲಿ ರೈತರಿಗೆ ನೀಡುವ ಸಾಲವನ್ನು ೧೦ ಲಕ್ಷದಿಂದ ೨೦ ಲಕ್ಷಕ್ಕೆ ಏರಿಕೆ ಮಾಡುವ ಘೋಷಣೆಯನ್ನು ಮಾಡಿದ್ದಾರೆ.
ಕಳೆದ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಜಾರಿ ಮಾಡಿ ಹಿಂದಿನ ಸರ್ಕಾರ ರದ್ದು ಮಾಡಿದ್ದ ಕೃಷಿ ಭಾಗ್ಯ ಹಾಗೂ ಅನುಗ್ರಹ, ಅರಿವು ಯೋಜನೆಯನ್ನು ಮರು ಜಾರಿ ಮಾಡುವುದಾಗಿ ಹೇಳಿ ಅದು ಸಹ ಬಡವರ ಕೂಲಿಕಾರ್ಮಿಕರ ಪರ ಬಜೆಟ್‌ ಎಂಬುದು ಸಾಬೀತುಪಡಿಸಲು ಮುಂದಾಗಿದ್ದಾರೆ‌

ಅಬಕಾರಿ ಸುಂಕ ಹೆಚ್ಚಳ
ತೆರಿಗೆ ಸಂಗ್ರಹವನ್ನು ಹೆಚ್ಚಿಗೆ ಮಾಡಲು ಮದ್ಯದ  ಮೇಲೆ  ಶೇ ೨೦ ರಷ್ಟು ಅಬಕಾರಿ ಸುಂಕವನ್ನು ಹೆಚ್ಚಿಸಿ ಬಿಯರ್‌ಗಳ ಮೇಲಿನ ಹೆಚ್ಚುವರಿ ಅಬಕಾರಿ ಸುಂಕವನ್ನು ಶೇ. ೧೦ ರಷ್ಟು ಹೆಚ್ಚಿಸಿರುವುದಾಗಿ ಬಜೆಟ್‌ನಲ್ಲಿ ಹೇಳಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಆಸ್ತಿಗಳ ಮಾರ್ಗಸೂಚಿ ದರಗಳನ್ನು ಪರಿಷ್ಕರಿಸುವುದಾಗಿ ಮುಖ್ಯಮಂತ್ರಿಗಳು ಹೇಳಿದ್ದು, ಕೆಲ ಆಯ್ದ ವಾಹನಗಳಿಗೆ ವಿಧಿಸುವ ತೆರಿಗೆಯನ್ನು ಪರಿಷ್ಕರಿಸುವುದಾಗಿ ಬಜೆಟ್‌ನಲ್ಲಿ ಹೇಳಿದ್ದಾರೆ.
ಹೊಸ ಯೋಜನೆ
ಮಕ್ಕಳ ಅಭ್ಯಾಸದಲ್ಲಿನ  ಕಲಿಕಾ ನ್ಯೂನತೆಯನ್ನು ಹೋಗಲಾಡಿಸಲು ಮರುಸಿಂಚನ ಯೋಜನೆಯನ್ನು ಪ್ರಕಟಿಸಿದ್ದು, ಶಾಲೆಗಳ ಸುತ್ತಮುತ್ತ ೫೦ ಲಕ್ಷ ಸಸಿ ನೆಡುವ ಸಸ್ಯ ಶ್ಯಾಮಲ ಕಾರ್ಯಕ್ರಮವನ್ನ ಪ್ರಕಟಿಸಿದ್ದಾರೆ.
ಶಾಲಾ ಮಕ್ಕಳಿಗೆ ವಾರದಲ್ಲಿ ಒಂದು ಬಾರಿ ಮೊಟ್ಟೆ, ಶೇಂಗಾ, ಚಿಕ್ಕಿ ಬಾಳೆಹಣ್ಣನ್ನು ವಾರದಲ್ಲಿ ೨ ದಿನ ವಿತರಿಸುವ ಘೋಷಣೆ ಜತೆಗೆ ಈ ಯೋಜನೆಯನ್ನು ೯ ಮತ್ತು ೧೦ನೇ ತರಗತಿ ವಿದ್ಯಾರ್ಥಿಗಳಿಗೂ ವಿಸ್ತರಿಸುವುದಾಗಿ ಪ್ರಕಟಿಸಿದ್ದಾರೆ.
ಈ ಬಜೆಟ್‌ನಲ್ಲಿ ಹಿಂದುಳಿದ ವರ್ಗ, ಅಲ್ಪಸಂಖ್ಯಾತರು ಪರಿಶಿಷ್ಟ ಜಾತಿ ವರ್ಗದವರಿಗೂ

ಗ್ಯಾರಂಟಿ ಯೋಜನೆಯ ಹಣದ ವೆಚ್ಚ
ರಾಜ್ಯ ಸರ್ಕಾರದ ಜನಪ್ರಿಯ  ೫ ಗ್ಯಾರಂಟಿ ಯೋಜನೆಗಳಿಂದ ವರ್ಷದಲ್ಲಿ ಸುಮಾರು ೫೨ ಸಾವಿರ ಕೋಟಿ ರೂ.ಗಳು ವೆಚ್ಚವಾಗಲಿದ್ದು, ೧.೩೦ ಕೋಟಿ ಕುಟುಂಬಗಳಿಗೆ ಈ ಯೋಜನೆಯ ಲಾಭ ಸಿಗಲಿದೆ. ಪ್ರತಿ ಕುಟುಂಬಕ್ಕೆ ಮಾಸಿಕ ೪ ರಿಂದ ೫ ಸಾವಿರ ರೂ.ಗಳಷ್ಟು ಆರ್ಥಿಕ ನೆರವು ನೀಡಿದಂತಾಗುತ್ತದೆ. ಇದು ಸಾರ್ವತ್ರಿಕ ಮೂಲ ಆದಾಯವೆಂಬ ಪರಿಕಲ್ಪನೆಯಂಬ ದೇಶದಲ್ಲೇ ಪ್ರಥಮ ಬಾರಿಗೆ ಅನುಷ್ಠಾನಗೊಳಿಸುವ ಹೊಸ ಮಾದರಿಯನ್ನು ರೂಪಿಸುವ ಉದ್ದೇಶ ಹೊಂದಿದೆ ಎಂದು ಅವರು ಇಂದು ವಿಧಾನಸಭೆಯಲ್ಲಿ ಮಂಡಿಸಿದ ೨೦೨೩-೨೪ನೇ ಸಾಲಿನ ಬಜೆಟ್‌ನಲ್ಲಿ ಹೇಳಿದ್ದಾರೆ.
ಗ್ಯಾರಂಟಿ ಯೋಜನೆಗಳಿಗೆ ಅಗತ್ಯವಿರುವ ಸಂಪನ್ಮೂಲವನ್ನು ಜನರಿಗೆ ಹೆಚ್ಚಿನ ಹೊರೆಯಾಗದಂತೆ ಹೊಂದಿಸಲಿದೆ. ಈ ನಿಟ್ಟಿನಲ್ಲಿ ತೆರಿಗೆ ಸಂಗ್ರಹ ವಿಷಯದಲ್ಲಿ ಸುಧಾರಣೆ ಹಾಗೂ ತೆರಿಗೆ ಸೋರಿಕೆಯನ್ನು ತಡೆಗಟ್ಟಲು ಕ್ರಮಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.
ಅನ್ನಭಾಗ್ಯ ಯೋಜನೆಗೆ ೧೦ ಸಾವಿರ ಕೋಟಿ ರೂ. ಗೃಹಜ್ಯೋತಿ ಯೋಜನೆಗೆ ೧೩.೯೧೦ ಕೋಟಿ ರೂ., ಗೃಹಲಕ್ಷ್ಮ ಯೋಜನೆಗೆ ೩೦ ಸಾವಿರ ಕೋಟಿ ರೂ. ವೆಚ್ಚವಾಗಲಿದೆ. ಶಕ್ತಿ ಯೋಜನೆಗೆ ೪ ಸಾವಿರ ಕೋಟಿ ರೂ. ವೆಚ್ಚವಾಗಲಿದೆ ಎಂದು ಮುಖ್ಯಮಂತ್ರಿಗಳು ಗ್ಯಾರಂಟಿ ಯೋಜನೆಗಳ ವೆಚ್ಚದ ಬಗ್ಗೆಯೂ ಬಜೆಟ್‌ನಲ್ಲಿ ಪ್ರಸ್ತಾಪಿಸಿದ್ದಾರೆ.

ಈಗಾಗಲೇ ಅನ್ನಭಾಗ್ಯ ಮತ್ತು ಗೃಹಜ್ಯೋತಿ ಶಕ್ತಿ ಯೋಜನೆಗಳು ಜಾರಿಯಾಗಿದೆ. ಗೃಹಲಕ್ಷ್ಮಿ ಯೋಜನೆಯನ್ನು ಆಗಸ್ಟ್‌ನಿಂದ ಜಾರಿ ಮಾಡಲಾಗುವುದು, ಯುವನಿಧಿ ಯೋಜನೆಯಡಿ ೨೦೨೩ರಲ್ಲಿ ಪದವಿ ಪಡೆದ ಯುವ ಜನರಿಗೆ ಜಾರಿಯಾಗಲಿದೆ ಎಂದಿದ್ದಾರೆ.

ಗೃಹಲಕ್ಷ್ಮಿ, ಗೃಹಜ್ಯೋತಿ ಯೋಜನೆಗಳು ಕೇಂದ್ರ ಸರ್ಕಾರದ ವೈಫಲ್ಯದಿಂದ ಅನಿಯಂತ್ರಿತ ಬೆಲೆ ಏರಿಕೆಯಿಂದ ತತ್ತರಿಸಿರುವ ಕುಟುಂಬಗಳಿಗೆ ತುಸು ನಿರಾಳತೆ ತಂದು ಕೊಡುತ್ತದೆ. ಶಕ್ತಿ ಯೋಜನೆ ಮಹಿಳೆಯರ ಓಡಾಟಕ್ಕೆ ನೆರವಾಗುತ್ತದೆ. ಮನೆಯಿಂದ ದೂರದ ಸ್ಥಳದಲ್ಲಿಯೂ ಉದ್ಯೋಗ ಕಂಡುಕೊಳ್ಳಲು ನೆರವಾಗುತ್ತದೆ. ಅನ್ನಭಾಗ್ಯವೂ ಯಾರೂ ಹಸಿದುಕೊಂಡಿರಬಾರದು ಎಂಬುದನ್ನು ಖಾತ್ರಿಪಡಿಸುತ್ತದೆ. ಯುವನಿಧಿ ಉದ್ಯೋಗಾಕಾಂಕ್ಷಿ ಯುವಕರಿಗೆ ಮಾನಸಿಕ ಸ್ಥೈರ್ಯ ನೀಡುತ್ತದೆ ಎಂದಿದ್ದಾರೆ.
ನ್ಯಾಯ, ಸಮತೆ ಮತ್ತು ಅಭಿವೃದ್ಧಿಯ ಕಾತರಿಯುಳ್ಳ ಬಜೆಟ್ ಇದಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದು, ಬಜೆಟ್‌ನಲ್ಲಿ ಘೋಷಿಸಿರುವ ಎಲ್ಲ ಯೋಜನೆಯನ್ನು ಜಾರಿ ಮಾಡುವುದಾಗಿಯೂ ತಿಳಿಸಿದ್ದಾರೆ.

ಮುಖ್ಯಾಂಶಗಳು:
*ಕುಡಿಯುವ ನೀರು ಯೋಜನೆಗೆ ೭೭೦ ಕೋಟಿ ರೂ.
*ಸಾರ್ವಜನಿಕ ಗ್ರಂಥಾಲಯಗಳಿಗೆ, ಪುಸ್ಕಕ ಖರೀದಿಗೆ ೧೦ ಕೋಟಿ ರೂ.
*ಏಷ್ಯನ್, ಕಾಮನ್‌ವೆಲ್ತ್ ಕ್ರೀಡಾ ವಿಜೇತರಿಗೆ ಪೊಲೀಸ್ ಹಾಗೂ ಅರಣ್ಯ ಇಲಾಖೆಯಲ್ಲಿ ಸರ್ಕಾರಿ ಹುದ್ದೆ

    • ಪುನೀತ್ ರಾಜ್‌ಕುಮಾರ ಸ್ಮರಣಾರ್ಥ ಹಠಾತ್ ಹೃದಯಾಘಾತ ತಡೆಗೆ ಜಿಲ್ಲಾತಾಲೂಕು ಆಸ್ಪತ್ರೆಗಳಲ್ಲಿ ೬ ಕೋಟಿ ವೆಚ್ಚದಲ್ಲಿ ಎಇಡಿ ಯಂತ್ರ ಸ್ಥಾಪನೆ
    • *ಬೆಂಗಳೂರಿನ ೮೩ ಕಿ.ಮೀ. ಹೈ ಡೆನ್ಸಿಟಿ ಕಾರಿಡಾರ್‌ಗೆ ೨೭೩ ಕೋಟಿ ರೂ. ಅನುದಾನ
    • *ಬೆಂಗಳೂರಿನಲ್ಲಿ ಮಹಿಳೆಯರ ಸುರಕ್ಷತೆಗೆ ಆದ್ಯತೆ
      *ನಗರ ಸಂಚಾರ ಬಲವರ್ಧನೆಗೆ ಕ್ರಮ
      *ಕಾನೂನು ಸುವ್ಯವಸ್ಥೆ ಬಲಪಡಿಸಲು ಕ್ಯಾಮೆರಾ ಕಣ್ಗಾವಲು
    • *ಮಾರ್ಗಸೂಚಿ ದರ ಶೇ. ೧೪ ರಷ್ಟು ಹೆಚ್ಚಳ
      *ಅಂಗನವಾಡಿ, ಆಶಾ ಕಾರ್ಯಕರ್ತೆಯರು, ಮಾಜಿ ದೇವದಾಸಿಯರು, ತೃತೀಯ ಲಿಂಗಿಗಳಿಗೂ ಗೃಹಲಕ್ಷ್ಮೀ ಯೋಜನೆ ಅನ್ವಯ
    • ನೈತಿಕ ಪೊಲೀಸ್‌ಗಿರಿ ಹತ್ತಿಕ್ಕಲು ನಿರ್ದಾಕ್ಷಿಣ್ಯ ಕ್ರಮ
      *ಆಹಾರ ಇಲಾಖೆಗೆ ೧೦,೪೯೦ ಕೋಟಿ ರೂ. ಅನುದಾನ
      *ಕೊಪ್ಪಳ, ಕಾರವಾರ, ಕೊಡಗು ಜಿಲ್ಲಾಸ್ಪತ್ರೆ ಉನ್ನತೀಕರಣ
      *೭೦ ಕೋಟಿ ರೂ. ವೆಚ್ಚದಲ್ಲಿ ಕಲಬುರ್ಗಿಯಲ್ಲಿ ತಾಯಿ ಮಗು ಆಸ್ಪತ್ರೆ ಸ್ಥಾಪನೆ
      *ಕನಕಪುರ ತಾಲೂಕಿನಲ್ಲಿ ಹೊಸ ವೈದ್ಯಕೀಯ ಕಾಲೇಜು
      *೪.೪೨ ಕೋಟಿ ಬಿಪಿಎಲ್ ಫಲಾನುಭವಿಗಳಿಗೆ ಅನ್ನಭಾಗ್ಯ ಯೋಜನೆ ಲಾಭ
      *ಗೃಹಲಕ್ಷ್ಮೀ ಯೋಜನೆಗೆ ವಾರ್ಷಿಕ ೩೦ ಸಾವಿರ ಕೋಟಿ ರೂ. ಅನುದಾನ
      *ಜಿಲ್ಲಾ ತಾಲೂಕು ಕೇಂದ್ರಗಳಲ್ಲಿ ಒಟ್ಟು ೨೧೯ ಡಯಾಲಿಸಿಸ್ ಸೆಂಟರ್ ಸ್ಥಾಪನೆ
      *೧,೬೨ ಸಾವಿರ ಕೋಟಿ ರಾಜಸ್ವ ಸಂಗ್ರಹದ ಗುರಿ
      *ಅಬಕಾರಿ ರಾಜಸ್ವದಿಂದ ೩೬ ಸಾವಿರ ಕೋಟಿ ಸಂಗ್ರಹ ಗುರಿ
      *ವಾಣಿಜ್ಯ ತೆರಿಗೆ ಇಲಾಖೆಯಿಂದ ೧,೦೧೦೦ ಕೋಟಿ ಸಂಗ್ರಹ ಗುರಿ
      *ಮುದ್ರಾಂಕ ಇಲಾಖೆಯಿಂದ ೨೫ ಸಾವಿರ ಕೋಟಿ ಸಂಗ್ರಹ ಗುರಿ
      *೧ ರಿಂದ ೧೦ ನೇ ತರಗತಿಯ ಸರ್ಕಾರಿ, ಅನುದಾನಿತ ಶಾಲೆಗಳಲ್ಲಿ ಮೊಟ್ಟೆ ವಿತರಣೆ
      *ವಾರದಲ್ಲಿ ೨ ದಿನ ಮೊಟ್ಟೆ,ಶೇಂಗಾ ಚಿಕ್ಕಿ ಅಥವಾ ಬಾಳೆಹಣ್ಣು ವಿತರಣೆ
      *ಬೆಂಗಳೂರನ್ನು ಅಂತರಾಷ್ಟ್ರೀಯ ಮಟ್ಟಕ್ಕೇರಿಸಲು ಸರ್.ಎಂ.ವಿವಿ ಟರ್ಮಿನಲ್ ಬಳಿ ಮೇಲ್ಸೇತುವೆ ನಿರ್ಮಾಣ
      *ಎರಡು ಹಂತದಲ್ಲಿ ಹೊಸ ವಾರ್ಡ್‌ಗಳಲ್ಲಿ ಇಂದಿರಾ ಕ್ಯಾಂಟೀನ್ ಸ್ಥಾಪನೆ
      *ಶಾಲಾ ಕಾಲೇಜುಗಳಲ್ಲಿ ಹೊಸ ಶೌಚಾಲಯ ನಿರ್ಮಾಣಕ್ಕೆ ೨೦೦ ಕೋಟಿ ರೂ. ಅನುದಾನ
      *ಮೈಸೂರು-ಕಲಬುರ್ಗಿ-ಬೆಳಗಾವಿ ಜಿಲ್ಲೆಗಳಲ್ಲಿ ಸೂಪರ್ ಸ್ಪೆಶಾಲಿಟಿ ಆಸ್ಪತ್ರೆ
      *ದೇಶದ ಮೊದಲ ಅಂಗಾಂಗ ಚೋಡಣೆ ಆಸ್ಪತ್ರೆ ಸ್ಥಾಪನೆ
      *ಕನಕಪುರ ತಾಲೂಕಿನಲ್ಲಿ ಹೊಸ ವೈದ್ಯಕೀಯ ಕಾಲೇಜು
      *ಖಾಸಗೀ ಸಹಭಾಗಿತ್ವದಲ್ಲಿ ಜಾನುವಾರು ಉತ್ಪನ್ನಗಳ ಸಂಸ್ಕರಣೆ
      *ಕಿರು ಆಹಾರ ಸಂಸ್ಕರಣ ಉದ್ದಿಮೆದಾರರಿಗೆ ೫ ಕೋಟಿ ರೂ.
      *ಬೆಂಗಳೂರಿನಲ್ಲಿ ವೈಟ್‌ಟಾಪಿಂಗ್, ರಸ್ತೆ ತ್ಯಾಜ್ಯ ನಿರ್ವಹಣಿಗೆ ೪೫ ಸಾವಿರ ಕೋಟಿ ಅನುದಾನ
      *ಇಂದಿರಾ ಕ್ಯಾಂಟೀನ್‌ಗೆ ೧೦೦ ಕೋಟಿ ರೂ.
      *ಐದು ಗ್ಯಾರಂಟಿ ಯೋಜನೆಗಳಿಗೆ ೫೨ ಸಾವಿರ
    • ಕೋಟಿ ರೂ.
      *ಕೃಷಿ ಭಾಗ್ಯ ಯೋಜನೆಗಳಿಗೆ ಮನರೇಗಾ ಯೋಜನೆಯಡಿ ೧೦೦ಕೋಟಿ ರೂ.
      *ಸಮಾಜ ಕಲ್ಯಾಣ ಇಲಾಖೆಗೆ ೧೧,೧೭೩ ಕೋಟಿ ರೂ.
      *ಆಗಸ್ಟ್ ತಿಂಗಳಿನಲ್ಲಿ ಗೃಹ ಜ್ಯೋತಿ ಯೋಜನೆ ಆರಂಭ
      *ಬಿಯರ್ ಮೇಲಿನ ಅಬಕಾರಿ ಸುಂಕ ಶೇ. ೧೦ ರಷ್ಟು ಹೆಚ್ಚಳ
      *ಭ್ರಷ್ಟಾಚಾರಮುಕ್ತ ರಾಜ್ಯ ಮಾಡುವ ಗುರಿ

ವಿವಿಧ ಇಲಾಖೆಗಳ ತೆರಿಗೆ ಗುರಿ
ಈ ಬಜೆಟ್‌ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯರವರು ವಿವಿಧ ಇಲಾಖೆಗಳ ತೆರಿಗೆ ಸಂಗ್ರಹ ಗುರಿಯನ್ನು ಹೆಚ್ಚಿಗೆ ಮಾಡಿದ್ದು, ೨೦೨೩-೨೪ನೇ ಸಾಲಿನಲ್ಲಿ ಅಬಕಾರಿ ಇಲಾಖೆಗೆ ೩೬ ಸಾವಿರ ಕೋಟಿ ರೂ.ಗಳ ರಾಜಸ್ವ ಸಂಗ್ರಹ ಗುರಿಯನ್ನು ನಿಗದಿಪಡಿಸಲಾಗಿದೆ. ಹಾಗೆಯೇ ನೋಂದಣಿ ಮತ್ತು ಮುದ್ರಾಂಕ ಇಲಾಖೆಗೆ ೨೫ ಸಾವಿರ ಕೋಟಿ ರೂಗಳ ರಾಜಸ್ವ ಗುರಿ ಸಂಗ್ರಹಣೆ ನಿಗದಿಯಾಗಿದ್ದು, ಸಾರಿಗೆ ಇಲಾಖೆಗೆ ಈ ಆರ್ಥಿಕ ವರ್ಷದಲ್ಲಿ ಒಟ್ಟು ೧೧,೫೦೦ ಕೋಟಿ ರೂ.ಗಳ ತೆರಿಗೆ ಸಂಗ್ರಹ ಗುರಿಯನ್ನು ನಿಗದಿ ಮಾಡಿದ್ದಾರೆ.
ಭೂ ವಿಜ್ಞಾನ ಇಲಾಖೆಗೆ ೯ ಸಾವಿರ ಕೋಟಿ ರೂ. ರಾಜಸ್ವ ಸಂಗ್ರಹಣೆ ಗುರಿಯನ್ನು ಈ ಬಜೆಟ್‌ನಲ್ಲಿ ನಿಗದಿ ಮಾಡಲಾಗಿದೆ.

[t4b-ticker]

You May Also Like

More From Author

+ There are no comments

Add yours