ಜೀವ ಅಮೂಲ್ಯ ಹೆಲ್ಮೆಟ್ ಧರಿಸಿ ಕುಟುಂಬ ಉಳಿಸಿ 

 

ಚಿತ್ರದುರ್ಗ: ಈ ಜೀವ ಅಮೂಲ್ಯ, ನಮ್ಮನ್ನು  ನಂಬಿಕೊಂಡು ಕುಟುಂಬಗಳು ಬದುಕುತ್ತಿದ್ದು ದ್ವಿಚಕ್ರ ವಾಹನ ಸವಾರರು  ತಮ್ಮ ಜೀವ ರಕ್ಷಣೆಗೆ ಕಡ್ಡಾಯವಾಗಿ ಹೆಲ್ಮೆಟ್ ಧರಿಸಿ ಎಂದು ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಕರೆ ನೀಡಿದರು.
ನಗರದ ಜಿಲ್ಲಾಧಿಕಾರಿ ವೃತ್ತದಲ್ಲಿ  ಜಿಲ್ಲಾ ಪೋಲಿಸ್ ಇಲಾಖೆ ಮತ್ತು ಬಂದೂಕು ತರಬೇತಿ ಸಂಸ್ಥೆ ಚಿತ್ರದುರ್ಗ ಇವರ ಸಹಯೋಗದಲ್ಲಿ ಹಮ್ಮಿಕೊಂಡಿದ್ದ  “ಹೆಲ್ಮೆಟ್ ಧರಿಸಿ ಜೀವ ಉಳಿಸಿ ”  ಹೆಲ್ಮೆಟ್  ಜಾಗೃತಿ ಜಾಥಕ್ಕೆ  ಚಾಲನೆ ನೀಡಿ ಮಾತನಾಡಿದರು.
ಜನರು ಕಾನೂನು ಪಾಲನೆ ಮಾಡಬೇಕು.ಜನರಲ್ಲಿ ಹೆಲ್ಮೆಟ್ ಕುರಿತು ಅಸಡ್ಡೆ ಭಾವನೆಯಿದೆ. ದ್ವಿಚಕ್ರ ವಾಹನ ಸವಾರರು  ಹೆಲ್ಮೆಟ್ ಮಹತ್ವ ತಿಳಿಯದೆ ನಿರ್ಲಕ್ಷ್ಯ ಮೂಲಕ ಎಷ್ಟು ಜನರು  ಜೀವವನ್ನು ಕಳೆದುಕೊಂಡಿದ್ದಾರೆ. ಪ್ರತಿಯೊಬ್ಬರು ಹೆಲ್ಮೆಟ್ ಧರಿಸಬೇಕು.ಲಕ್ಷ  ಲಕ್ಷ ಕೊಟ್ಟು  ಬೈಕ್ ಖರೀದಿಸುತ್ತಾರೆ.ಆದರೆ  ಒಂದು ಸಾವಿರ ರೂಪಾಯಿ ಹೆಲ್ಮೆಟ್ ಖರೀದಿಸಲು ಹಿಂದೇಟು ಹಾಕುತ್ತಾರೆ. ಈ ಭಾವನೆಯಿಂದ ಹೊರ  ಬರುವ ಮೂಲಕ  ದ್ವಿಚಕ್ರ ವಾಹನ ಮನೆಯಿಂದ ಹೊರ ತೆಗೆದಾಗ ತಲೆಯ ಮೇಲೆ ಹೆಲ್ಮೆಟ್ ಧರಿಸಬೇಕು ಎಂದು ಮನವಿ ಮಾಡಿದರು. ಎಲ್ಲಾ ವಾಹನ ಸವಾರರು ಆಫ್ ಹೆಲ್ಮೆಟ್ ಹಾಕದೆ ಪೂರ್ಣವಾದ ಹೆಲ್ಮೆಟ್ ಧರಿಸಬೇಕು. ನಿಮ್ಮ ಜೀವದಲ್ಲಿ   ಕುಟುಂಬ ಭವಿಷ್ಯ ಅಡಗಿದೆ ಎಂದು ತಿಳಿಸಿದರು.
ಜಿಲ್ಲಾ  ಹೆಚ್ಚುವರಿ ಪೋಲಿಸ್ ಅಧಿಕ್ಷಕರಾದ ಎಸ್.ಜೆ.ಕುಮಾರಸ್ವಾಮಿ ಮಾತನಾಡಿ ದ್ವಿಚಕ್ರ ವಾಹನ ಸವಾರರು  ತಮ್ಮ  ಜೀವದ ಉಳಿವಿಗಾಗಿ ಹೆಲ್ಮೆಟ್ ಧರಿಸಬೇಕು. ಜನರಲ್ಲಿ ಸ್ವಯಂ ಪ್ರಜ್ಞೆಯಿಂದ ಹೆಲ್ಮೆಟ್ ಧರಿಸಬೇಕು. ಎಲ್ಲಾರಿಗೂ ಸಹ ಜವಬ್ದಾರಿ ಇದೆ. ತಮ್ಮ ಜವಾಬ್ದಾರಿ ಅರಿತು ಕಡ್ಡಾಯವಾಗಿ ಹೆಲ್ಮೆಟ್ ಧರಿಸಿ ಎಂದರು.
ಹೆಲ್ಮೆಟ್ ಜಾಗೃತಿ ಜಾಥವು ಒನಕೆ ಓಬವ್ವ ವೃತ್ತದಿಂದ ಆರಂಭಗೊಂಡು ಅಂಬೇಡ್ಕರ್ ವೃತ್ತ, ಬಿ.ಡಿ ರಸ್ತೆ ಮೂಲಕ ಗಾಂಧಿ ವೃತ್ತ, ಸಂಗೊಳ್ಳಿ ರಾಯಣ್ಣ ವೃತ್ತದ ಮೂಲಕ ಕನಕ ವೃತ್ತ ತಲುಪಿ ವಾಪಸ್ ಡಿ ಆರ್ ಪೋಲಿಸ್ ಮೈದಾನಕ್ಕೆ ಅಂತ್ಯಗೊಂಡಿತ್ತು.
ಈ ಸಂದರ್ಭದಲ್ಲಿ ಜಿಲ್ಲಾ ಮೀಸಲು ಪಡೆ  ಡಿವೈಎಸ್ಪಿ ಗಣೇಶ್,  ಟ್ರಾಫಿಕ್ ಇನ್ಸ್ಪೆಕ್ಟರ್ ರಾಜು, ರಘು , ಗ್ರಾಮಂತರ ಪೋಲಿಸ್ ಠಾಣೆ ಮುತ್ತುರಾಜ್ ಮತ್ತು ಪೋಲಿಸ್ ಸಿಬ್ಬಂದಿಗಳು ಇದ್ದರು.
[t4b-ticker]

You May Also Like

More From Author

+ There are no comments

Add yours