ಮದ್ಯಪ್ರಿಯರ ಡಿಮ್ಯಾಂಡ್ ಕೇಳಿ ಸಂತೋಷ್ ಲಾಡ್ ಗೆ ನಗು‌ವೋ‌ ನಗು

 

ಬೆಳಗಾವಿ: ರಾಜ್ಯದಲ್ಲಿ ಪ್ರತಿಯೊಂದು ಜನಾಂಗಕ್ಕೆ ಒಂದಲ್ಲ ಒಂದು ಬೇಡಿಕೆಯನ್ನು ಜನಾಂಗದವರು ಸರ್ಕಾರದ ಮುಂದೆ ಹಿಡುವುದು ನಾವು ನೋಡಿದ್ದೇವೆ.  ಕುಂದಾನಗರಿಯಲ್ಲಿ ಚಳಿಗಾಲದ ಅಧಿವೇಶನ ನಡೆಯುತ್ತಿರುವ  ಈ ಸಂದರ್ಭದಲ್ಲಿ  ಕರ್ನಾಟಕ ಮದ್ಯಪ್ರಿಯರು(alcoholics)ವಿಚಿತ್ರ ಹೋರಾಟ ಮೂಲಕ ಹಮ್ಮಿಕೊಳ್ಳುವ ಜೊತೆಗೆ ವಿವಿಧ ಬೇಡಿಕೆಗಳನ್ನು ಸರ್ಕಾರದ ಮುಂದಿಟ್ಟಿದ್ದಾರೆ.  ಇವರ ಬೇಡಿಕೆಗಳನ್ನು  ಕಾರ್ಮಿಕ ​ ಸಚಿವ ಸಂತೋಷ್​ ಲಾಡ್​ ಆಲಿಸಿದ್ದಾರೆ.

ಮದ್ಯಪಾನ ಪ್ರಿಯರ ಹೋರಾಟ ಸಂಘವು ನಿತ್ಯ ದುಡಿ, ಸತ್ಯ ನುಡಿ, ಸ್ವಲ್ಪ ಕುಡಿ, ಮನೆಗೆ ನಡಿ ಎಂಬ ಹೋರಾಟ ಮಾಡಿದೆ. ಈ ವಿಚಿತ್ರ ಹೋರಾಟ ಕಂಡು  ಒಂದು ರೀತಿಯಲ್ಲಿ ಶಾಕ್ ಆಗಿರುವ  ಸಚಿವ ಸಂತೋಷ ಲಾಡ್ ಸರ್ಕಾರದ ಪರವಾಗಿ ಪ್ರತಿಭಟನಾಕಾರರ ಮನವಿ ಸ್ವೀಕಾರ ಮಾಡಲು ಬಂದಿದ್ದಾರೆ.

ಮದ್ಯಪ್ರಿಯರು ಸಂತೋಷ್​ ಲಾಡ್​ ಮುಂದೆ ರಾಜ್ಯ ಕುಡುಕರಿಗೆ ಆಗುತ್ತಿರುವ ಅನ್ಯಾಯ ಬಗ್ಗೆ ಅಳಲು ಎಳೆ ಎಳೆಯಾಗಿ ಸಮಸ್ಯೆಗಳ ಕುರಿತು ನೋವು  ತೋಡಿಕೊಂಡಿದ್ದಾರೆ. ಅತ್ತ ಸಚಿವರು ಒಂದು ಕಡೆ ನಗಲಾರದೆ ಮತ್ತೊಂದು ಕಡೆ ಗಂಭೀರವಾಗಿ ಮನವಿ ಆಲಿಸಿದ್ದಾರೆ.

ಮದ್ಯಪ್ರಿಯರ ಬೇಡಿಕೆಗಳು 

  •  ಡಿಸೆಂಬರ್ 31 ರಂದು ಮದ್ಯಪಾನ ದಿನಾಚರಣೆನ್ನಾಗಿ ಮಾಡಬೇಕು.
  •  ಅಂದು ಎಲ್ಲಾ ರೀತಿಯ ಬಾರ್ , ರೆಸ್ಟೋರೆಂಟ್ ನಲ್ಲಿ 50 ರಷ್ಟು ರಿಯಾಯಿತಿ ನೀಡಬೇಕು.
  • ಕುಡುಕ ಎಂಬ ಪದಬಳಕೆ ನಿಷೇಧ ಮಾಡಬೇಕು.
  • ಮದ್ಯಪಾನ ಪ್ರಿಯರ ಅಭಿವೃದ್ಧಿ ನಿಗಮ ಆರಂಭಿಸಿ ಹತ್ತರಷ್ಟು ಅನುದಾನ ನೀಡಬೇಕು.
  •  ಪ್ರತಿ ಬಾಟಲ್ ಗೆ ಇನ್ಸ್ಯೂರೆನ್ಸ್ ಮಾಡಬೇಕು.
  •  ಪ್ರತಿ ಬಾರ್ ಮುಂದೆ ಆಂಬುಲೆನ್ಸ್ ಸೇವೆ ನೀಡಬೇಕು.
  •   ಬಾರ್ ಪಕ್ಕದಲ್ಲಿ ಕುಡುಕರ ವಿಶ್ರಾಂತಿಗಾಗಿ ಭವನ ನಿರ್ಮಾಣ ಮಾಡಬೇಕು.

ಇದನ್ನೂ ಓದಿ:40 ಸಾವಿರ ಲಂಚ ಪಡೆಯುವಾಗ ಪಿಡಿಓ‌ ಸೇರಿ ಇಬ್ಬರು ಲೋಕಯುಕ್ತ ಬಲೆಗೆ

ಈ ಎಲ್ಲಾವನ್ನೂ  ಗಮನದಲ್ಲಿಟ್ಟುಕೊಂಡು ಕುಡುಕರ ಸಂಘ ಬೇಡಿಕೆಗಳು ಇಟ್ಟಿದ್ದಾರೆ. ಸದ್ಯ ಮದ್ಯಪಾನ ಪ್ರಿಯರು ಬೇಡಿಕೆಗಳು ಎಲ್ಲರಿಗೂ ಅಚ್ಚರಿ ತಂದಿದೆ.

[t4b-ticker]

You May Also Like

More From Author

+ There are no comments

Add yours