ಮುಂಬರುವ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ಪರೀಕ್ಷಾ ಸಿದ್ದತೆಗೆ ಒಂದಿಷ್ಟು ಟಿಪ್ಸ್ ಜತೆ ಮಾದರಿ ಅಧ್ಯಯನ ವೇಳಾಪಟ್ಟಿ.

 

ಪರೀಕ್ಷೆಯ ಭಯ ಬೇಡ :ಆತ್ಮ ವಿಶ್ವಾಸ ಇರಲಿ. ಪರೀಕ್ಷಾ ತಯಾರಿಗೆ ಕಿವಿಮಾತು.

ಮುಂಬರುವ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ಪರೀಕ್ಷಾ ಸಿದ್ದತೆಗೆ ಒಂದಿಷ್ಟು ಟಿಪ್ಸ್ ಜತೆ ಮಾದರಿ ಅಧ್ಯಯನ ವೇಳಾಪಟ್ಟಿ.

ಸ್ಪೇಷಲ್ ಸ್ಟೋರಿ: ಮಹದೇವಪುರ ಶಿವಮೂರ್ತಿ.

ಪರಶುರಾಂಪುರ:ಪರೀಕ್ಷೆ ಎಂದರೆ ಭಯ, ಒತ್ತಡ ಇದ್ದೇ ಇರುತ್ತದೆ. ಆದರೆ ಇದನ್ನು ನಿವಾರಿಸಿ ಪರೀಕ್ಷೆ ಬರೆದರೆ ಮಾತ್ರ ಉತ್ತಮ ಅಂಕಗಳಿಕೆ ಸಾಧ್ಯವಿದೆ. ಹೀಗಾಗಿ ಪರೀಕ್ಷೆ ತಯಾರಿಗೆ ಅಧ್ಯಯನ ವೇಳಾಪಟ್ಟಿಯ ಜತೆ ಕೆಲವೊಂದು ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳುವುದು ಬಹುಮುಖ್ಯವಾಗಿರುತ್ತದೆ.

ಇನ್ನೇನು ಕೆಲ ದಿನಗಳಲ್ಲಿ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆಯೂ ಆರಂಭವಾಗುವುದು.ಸದ್ಯ ಶಾಲೆಗಳಲ್ಲಿ ಶಾಲೆ , ತಾಲೂಕು ,ಜಿಲ್ಲಾ ಹಂತದ ಪರೀಕ್ಷೆಗಳು ಪ್ರಾರಂಭವಾಗಿವೆ.ಪರೀಕ್ಷೆ ಎಂದಾಕ್ಷಣ ಕೆಲವು ವಿದ್ಯಾರ್ಥಿಗಳು ಭಯ ಪಡುತ್ತಾರೆ, ಒತ್ತಡಕ್ಕೊಳಗಾಗುತ್ತಾರೆ. ಅದರ ಬದಲು ಆತ್ಮವಿಶ್ವಾಸದಿಂದ ಕಲಿತರೆ ಕಠಿಣ ಪರೀಕ್ಷೆಯನ್ನೂ ನಿರಾಯಾಸದಿಂದ ಎದುರಿಸಲು ಸಾಧ್ಯ.

ಪರೀಕ್ಷೆಯನ್ನು ಸುಲಭವಾಗಿ ಜಯಿಸಲು ಮಾನಸಿಕ ಸ್ಥೈರ್ಯದಿಂದ ದಿನಂಪ್ರತಿ ಎರಡು ಪ್ರಶ್ನೆ ಪತ್ರಿಕೆಯನ್ನು ಬಿಡಿಸಿ ಉತ್ತರಿಸಲು ಪ್ರಯತ್ನಿಸಬೇಕು. ಮನಸ್ಸಿನಲ್ಲಿ ಧನಾತ್ಮಕ ಚಿಂತನೆಗಳನ್ನು ಬೆಳೆಸಿದರೆ, ಜಯಶೀಲರಾಗಲು ಸಾಧ್ಯ. ಇಂದಿನ ಅನೇಕ ಮಂದಿ ವಿದ್ಯಾರ್ಥಿಗಳು ಪ್ರಶ್ನೆ ಪತ್ರಿಕೆಗಳನ್ನು ನೋಡಿದ ಕೂಡಲೇ ಅವಸರದಲ್ಲಿ ಉತ್ತರ ಬರೆಯುತ್ತಾರೆ. ಇದು ತಪ್ಪು. ಪ್ರಶ್ನೆಗಳಿಗೆ ಉತ್ತರ ಬರೆಯುವ ಮೊದಲು ಪ್ರಶ್ನೆಯನ್ನು ಅರ್ಥ ಮಾಡಿಕೊಳ್ಳಬೇಕು. ಬಳಿಕ, ಉತ್ತರಿಸುವ ಕ್ರಮ ಬೆಳೆಸಿಕೊಳ್ಳಬೇಕು.

ವಿದ್ಯಾರ್ಥಿಗಳು ಪರೀಕ್ಷೆ ಪ್ರಾರಂಭಕ್ಕೂ ಮುನ್ನ ಸಿದ್ಧತೆಗಳನ್ನು ಮಾಡಿಕೊಳ್ಳುವುದು ಅತೀ ಮುಖ್ಯ. ಅದರಲ್ಲಿಯೂ ಪರೀಕ್ಷೆಗೂ ಮುನ್ನ, ವೇಳಾಪಟ್ಟಿಯನ್ನು ಸಿದ್ಧಪಡಿಸಬೇಕು. ಪರೀಕ್ಷೆ ಸಮಯದಲ್ಲಿ ಮನಸ್ಸಿನಲ್ಲಿ ನಕಾರಾತ್ಮಕ ಚಿಂತನೆಗಳನ್ನು ಬೆಳೆಸಿಕೆಡಿಕೊಳ್ಳಬಾರದು. ಪರೀಕ್ಷೆ ಸಮೀಪಿಸುತ್ತಿದೆ ಕೇವಲ ಓದಿಗೆ ಮಹತ್ವ ನೀಡುವುದು ಕೂಡ ತಪ್ಪು. ಏಕತಾನತೆಯ ಓದಿನಿಂದಾಗಿ ಮೆದುಳಿಗೆ ಒತ್ತಡವಾಗುವ ಸಂಭವ ಹೆಚ್ಚಿದೆ.

 

 

ಕಷ್ಟದ ವಿಷಯಕ್ಕೆ ಒತ್ತು ಕೊಡಿ.

ಅಂದಿನ ಪಾಠಗಳನ್ನು ಅದೇ ದಿನ ಓದುವ ಅಭ್ಯಾಸ ಮಾಡಿದರೆ ಪರೀಕ್ಷೆ ಬರೆಯುವಾಗ ವಿಷಯಗಳು ಬೇಗನೇ ನೆನಪಿಗೆ ಬರುತ್ತದೆ. ಕೆಲವು ವಿದ್ಯಾರ್ಥಿಗಳು ಅವರಿಗೆ ತುಂಬಾ ಇಷ್ಟವಿರುವ ವಿಷಯವನ್ನು ಚೆನ್ನಾಗಿ ಅಭ್ಯಾಸ ಮಾಡುತ್ತಾರೆ. ಅದನ್ನೇ ಜಾಸ್ತಿ ಓದಿ ಕಷ್ಟದ ವಿಷಯಗಳನ್ನು ಒದಲು ಹೋಗುವುದಿಲ್ಲ. ವಿದ್ಯಾರ್ಥಿಗಳು ಕಷ್ಟದ ವಿಷಯಗಳಿಗೆ ಹೆಚ್ಚು ಸಮಯ ನೀಡಿ ಅದನ್ನು ಹೆಚ್ಚು ಒತ್ತು ಕೊಟ್ಟು ಓದಬೇಕು. ಕೆಲವೊಮ್ಮೆ ಎಲ್ಲ ವಿಷಯದಲ್ಲಿ ಉತ್ತೀರ್ಣರಾಗಿ, ಕಷ್ಟದ ವಿಷಯದಲ್ಲಿ ಅನುತ್ತೀರ್ಣವಾಗಲು ಇದುವೇ ಕಾರಣವಾಗಬುದು.

ನೋಟ್ ಮಾಡಿಕೊಳ್ಳಿ.

ಆದಷ್ಟು ತರಗತಿಯಲ್ಲಿ ಅಧ್ಯಾಪಕರು ಪಾಠ ಮಾಡುವಾಗ ನೋಟ್ಸ್ ಬರೆದಿಟ್ಟುಕೊಳ್ಳಬೇಕು. ಕೆಲವೊಮ್ಮೆ ಪಾಠ ಪುಸ್ತಕ ತೆರೆಯುವಾಗ ಅದನ್ನು ನೋಡಿಯೇ ತಲೆನೋವಾಗಿ ಓದದೇ ಇರುತ್ತೇವೆ. ನೋಟ್ಸ್ ನಿಮ್ಮದೇ ಕೈ ಬರಹವಾಗಿರುವುದರಿಂದ ಓದಲು ಆಸಕ್ತಿ ಉಂಟಾಗಿ, ಕಲಿಯಲು ಸುಲಭವಾಗುತ್ತದೆ.

ಗಣಿತ ಕಷ್ಟ ಅಲ್ಲ

ಗಣಿತ (ಲೆಕ್ಕ ) ವಿಷಯ ಕಷ್ಟ ಎಂದು ತೀರ್ಮಾನ ಮಾಡಿ ಅದನ್ನು ದೂರ ಮಾಡಿದರೆ ಅದು ಅರ್ಥವೇ ಆಗಲು ಸಾದ್ಯವಿಲ್ಲ. ಓದಿಗಾಗಿ ಒಂದು ವೇಳಾಪಟ್ಟಿ ತಯಾರಿಸಿ, ಒಂದೊAದು ವಿಷಯಕ್ಕೆ ಸಮಯ ನಿಗದಿ ಮಾಡಬೇಕು. ಅದರಲ್ಲಿ ಸ್ವಲ್ಪ ವಿಶ್ರಾಂತಿಗೂ ಅವಧಿ ಮೀಸಲಿಡಿ. ಕಲಿತ ವಿಷಯಗಳ ಕುರಿತು ನಿಮ್ಮ ಸ್ನೇಹಿತರೊಂದಿಗೆ ಚರ್ಚೆ ಮಾಡಿಕೊಳ್ಳಿ. ಇದರಿಂದ ಬೇರೊಬ್ಬರಿಗೆ ವಿವರಿಸುವಾಗ ನಮ್ಮಲ್ಲಿ ನೆನಪಿನ ಶಕ್ತಿ ಹೆಚ್ಚುತ್ತದೆ. ವಿಷಯವನ್ನು ಅರ್ಥ ಮಾಡಿ ಓದಿದರೆ ಪರೀಕ್ಷೆ ಸಂದರ್ಭ ಸ್ವಂತ ವಾಕ್ಯದಲ್ಲಿ ಬರೆಯಬಹುದು.


ಪ್ರಶ್ನೆ ಪತ್ರಿಕೆ ತಯಾರಿ

ಪರೀಕ್ಷೆಯ ತಯಾರಿ ಮಾಡುವಾಗ ಹಳೆಯ ಪ್ರಶ್ನಾಪತ್ರಿಕೆಗಳನ್ನು ಗಮನಿಸಬೇಕು. ೫-೬ ವರ್ಷದ ಪ್ರಶ್ನೆ ಪತ್ರಿಕೆಗಳನ್ನು ನೋಡಿದಾಗ ಪ್ರಶ್ನೆ ಪತ್ರಿಕೆಯ ಮಾದರಿಯ ಅರಿವಾಯುತ್ತದೆ. ಕೆಲವೊಂದು ಪ್ರಶ್ನೆಗಳು ಪ್ರತಿ ವರ್ಷ ಪುನರಾವರ್ತನೆಯಾಗುತ್ತಿರುತ್ತದೆ. ಅಂತಹ ಪ್ರಶ್ನೆಗಳಿಗೆ ಗಮನಕೊಟ್ಟು ಓದಬೇಕು. ಪ್ರಾಕ್ಟಿಕಲ್ ವಿಷಯಗಳನ್ನು ಬರೆದು ಕಲಿಯಬೇಕು. ಇದು ಪರೀಕ್ಷೆಯ ಸಮಯದಲ್ಲಿ ನೆನಪಿಗೆ ಬಂರುತ್ತದೆ.
ಬೆಳಗ್ಗೆಯಿAದ ಮಧ್ಯಾಹ್ನದ ವರೆಗೆ ಓದಿ, ಮಧ್ಯಾಹ್ನದ ಊಟ ಆದ ಬಳಿಕ ಪುಸ್ತಕ ನೋಡುವಾಗ ನಿದ್ದೆ ಬರುತ್ತದೆ. ವಿದ್ಯಾರ್ಥಿಗಳು ಪರೀಕ್ಷೆಯ ಸಮಯದಲ್ಲಿ ರಾತ್ರಿ ಮಾತ್ರ ಮಲಗುವುದು ಉತ್ತಮ. ಮಧ್ಯಾಹ್ನದ ಹೊತ್ತಿನಲ್ಲಿ ವಿದ್ಯಾರ್ಥಿಗಳು ತಮಗೆ ಸುಲಭವಾದ ವಿಷಯವನ್ನು ಆರಿಸಿ ಓದಬೇಕು. ತಣ್ಣೀರಿನಿಂದ ಮುಖ ತೊಳೆದುಕೊಂಡು ಓದಬೇಕು. ಒಂAದು ಪಾಠಕ್ಕೆ ಸಮಯ ನಿಗದಿ ಮಾಡಿ ಓದಬೇಕು. ರಾತ್ರಿ ೧೦.೩೦ ವರೆಗೆ ಓದಿ ಚೆನ್ನಾಗಿ ನಿದ್ದೆ ಮಾಡಬೇಕು.

ಅಂಕಕ್ಕೆ ತಕ್ಕಂತೆ ಬರೆಯಿರಿ

೨ ಅಂಕದ ಪ್ರಶ್ನೆಗೆ ಒಂದು ಪುಟದ ಉತ್ತರದ ಅಗತ್ಯವಿಲ್ಲ. ಎಷ್ಟು ಅಗತ್ಯ ಅಷ್ಟು ಬರೆದರೆ ಸೂಕ್ತ. ಇಲ್ಲದಿದ್ದರೆ ಸಮಯ ವ್ಯರ್ಥವಾಗಿ ಎಲ್ಲ ಪ್ರಶ್ನೆಗಳಿಗೆ ಉತ್ತರ ಬರೆಯಲು ಸಮಯ ಸಿಗುವುದಿಲ್ಲ. ಯಾವ ಪ್ರಶ್ನೆಗೆ ಉತ್ತರ ಸರಿಯಾಗಿ ಗೊತ್ತಿದೆಯೋ ಅದನ್ನು ಮೊದಲಿಗೆ ಬರೆಯಿರಿ. ಪರೀಕ್ಷೆಗೆ ತೆರಳುವಾಗ ಎರಡ್ಮೂರು ಪೆನ್ನಿರಲಿ.

.

ಒತ್ತಾಯ ಮಾಡಬೇಡಿ

ಕಲಿಯವ ವಿಷಯದಲ್ಲಿ ಮಕ್ಕಳಿಗೆ ಒತ್ತಡ ಹೇರಬಾರದು. ಹೆಚ್ಚು ಅಂಕ ಪಡೆಯಲೇಬೇಕೆಂದು ಬೇರೆ ಮಕ್ಕಳ ಜತೆ ಹೋಲಿಕೆಯೂ ಮಾಡಬಾರದು. ಕಲಿಯಲು ಉತ್ತೇಜನ ನೀಡಿ. ಗಿಡ ನೆಟ್ಟು ನೀರು, ಗೊಬ್ಬರ ಹಾಕಿ ಬೆಳೆಸುವುದಷ್ಟೇ ನಮ್ಮ ಕರ್ತವ್ಯ. ಅದರ ಫಲದ ಫಲಿತಾಂಶ ನಮ್ಮ ಕೈಯಲಿಲ್ಲ. ಒಳ್ಳೆ ಫಲ ನೀಡುತ್ತದೆ ಎಂಬ ನಂಬಿಕೆಯಿಂದ ಕೆಲಸ ಮಾಡಬೇಕು.

ಪರೀಕ್ಷಾ ಅಕ್ರಮ ಬೇಡ

ಪರೀಕ್ಷೆಯಲ್ಲಿ ನಕಲು ಮಾಡುವಂತಹ ಆಲೋಚನೆ ಮಾಡಬಾರದು. ಯಾವುದೇ ಆಗಿರಲಿ ಅದು ನೇರ ದಾರಿಯಿಂದ ನಮಗೆ ಸಿಕ್ಕಿದರೆ ಮಾತ್ರ ಶಾಶ್ವತ. ಪರೀಕ್ಷೆ ಬರೆಯುವಾಗ ಬೇರೆಯವರು ಎಷ್ಟು ಹೆಚ್ಚುವರಿ ಪೇಪರ್ ತೆಗೆದುಕೊಂಡಿದ್ದಾರೆ? ಎಷ್ಟು ಬರೆಯುತ್ತಾರೆ ಅದರ ಬಗ್ಗೆ ಚಿಂತಿಸಬಾರದು. ಅದು ನಮ್ಮ ಏಕಾಗ್ರತೆಯನ್ನು ಹಾಳು ಮಾಡುತ್ತದೆ.

ಎಲ್ಲರೂ ಧೈರ್ಯದಿಂದ, ಉಲ್ಲಾಸದಿಂದ ಪರೀಕ್ಷೆಗೆ ಹಾಜರಾಗಿ ಒಳ್ಳೆಯ ಫಲಿತಾಂಶವನ್ನು ಪಡೆಯಿರಿ. ಮನಸಿಟ್ಟು ಓದಿ, ಪುಸ್ತಕವನ್ನು ಪ್ರೀತಿಸಿ, ಯಾರೂ ಕೈ ಬಿಟ್ಟರೂ ನೀವು ಕಲಿತ ವಿದ್ಯೆ ನಿಮ್ಮ ಕೈ ಬಿಡದು. ನಿಮಗೂ ಅನ್ನ ಹಾಕುತ್ತದೆ, ನೀವು ಇನ್ನೊಬ್ಬರಿಗೆ ಅನ್ನ ಹಾಕುವ ಸಾಮರ್ಥ್ಯವನ್ನು ನೀಡುತ್ತದೆ.

[t4b-ticker]

You May Also Like

More From Author

+ There are no comments

Add yours