ಗ್ರಾಮೀಣ ಕ್ರೀಡೆಗಳಿಗೆ ಹೆಚ್ಚಿನ ಪ್ರೋತ್ಸಾಹ ಅಗತ್ಯ:ಶಾಸಕ ಟಿ.ರಘುಮೂರ್ತಿ

 

ಚಿತ್ರದುರ್ಗ:ಜನರ ಮನಸ್ಸಿನಿಂದ ಮಾಸುತ್ತಿರುವ ಗ್ರಾಮೀಣ ಕ್ರೀಡೆಗಳಿಗೆ  ಮರುಜೀವ ಕೊಡುವ ಮೂಲಕ ಉಳಿಸಿ ಬೆಳೆಸುವ ಕೆಲಸ ಎಲ್ಲಾರೂ ಮಾಡೋಣ ಎಂದು ಶಾಸಕ‌ ಟಿ.ರಘುಮೂರ್ತಿ ಕರೆ ನೀಡಿದರು.

ತಾಲೂಕಿನ ಹುಣಸೇಕಟ್ಟೆ ಗ್ರಾಮದಲ್ಲಿ ಶ್ರೀ ವಾಲ್ಮೀಕಿ ಗೆಳೆಯರ ಬಳಗದಿಂದ ಯುಗಾದಿ ಹಬ್ಬದ ಪ್ರಯುಕ್ತ ಏರ್ಪಡಸಿದ್ದ ಜೋಡಿ ಎತ್ತಿನ ಗಾಡಿ ಸ್ಪರ್ಧೆಯನ್ನು ಎತ್ತು ಗಾಡಿಯನ್ನು ಓಡಿಸುವ ಮೂಲಕ ಶಾಸಕರು  ಚಾಲನೆ ನೀಡಿ ಮಾತನಾಡಿದರು.
ಚಳ್ಳಕೆರೆ ಕ್ಷೇತ್ರ ಬುಡಕಟ್ಟು ಸಂಸ್ಕೃತಿಗಳ ಹಬ್ಬ ಹರಿದಿನಗಳ‌ ಸಂಭ್ರಮಕ್ಕೆ ಹೆಸರಾಗಿದೆ.ಆಧುನಿಕ ಯುಗದಲ್ಲಿ ಗ್ರಾಮೀಣ ಕ್ರೀಡೆಗಳು ಕಳೆದು ಹೋಗುತ್ತಿವೆ. ಇಂತಹ ಸಮಯದಲ್ಲಿ ಹುಣಸೇಕಟ್ಟೆ ಗ್ರಾಮದಲ್ಲಿ  ಯುವಕರು, ರೈತರು, ಮುಖಂಡರು  ಸೇರಿ  ತುರುವನೂರು ಹೋಬಳಿ ಮಟ್ಟದ  ಜೋಡಿ ಎತ್ತಿನ ಗಾಡಿ ಸ್ವರ್ಧೆ ಯುಗಾದಿ ಹಬ್ಬದಂದು ಏರ್ಪಡಿಸಿರುವುದು ನನಗೆ ತುಂಬಾ ಸಂತೋಷ ತಂದಿದೆ.
ಆಧುನಿಕ ಕಾಲದಲ್ಲಿ ಕ್ರಿಕೆಟ್ ಗೆ ಹೆಚ್ಚು ಒತ್ತು ನೀಡುವುದಕ್ಕಿಂತ ಗ್ರಾಮೀಣ ಕ್ರೀಡೆಗಳಾದ ಎತ್ತು ಗಾಡಿ , ಕಬ್ಬಡ್ಡಿ ಕ್ರೀಡೆಗಳಿಗೆ ಪ್ರೋತ್ಸಾಹ ನೀಡುವ ಕೆಲಸ ಆಗಬೇಕಿದೆ. ಹಬ್ಬದಂದು ಸ್ಪರ್ಧೆ ಆಯೋಜನೆ ಹತ್ತಾರು ಗ್ರಾಮದ ರೈತರು, ಯುವಕರು, ಮಹಿಳೆಯರು, ಮಕ್ಕಳು ಸೇರಿ ನೋಡುವ ಎತ್ತು ಗಾಡಿ ಸ್ಪರ್ಧೆ ಎಲ್ಲಾರಿಗೆ ಉಲ್ಲಾಸ ತಂದಿದೆ ಎಂದರು‌.
ಗ್ರಾಮೀಣ ಪ್ರದೇಶದ ಪ್ರತಿ ರೈತನ ಮನೆಯಲ್ಲಿ  ಎತ್ತು ಗಾಡಿ ಇಟ್ಟುಕೊಂಡಿದ್ದರು. ಹಿಂದೂ ಧರ್ಮದ ಸಂಸ್ಕ್ರತಿಯಲ್ಲಿ ಗೋ ಪೂಜೆ, ಬಸವನ ಪೂಜೆ ಮಾಡುತ್ತ ಎತ್ತುಗಳನ್ನು ದೇವರಂತೆ ಪೂಜಿಸುವ ಕೆಲಸ ನಾವು ಮೊದಲಿನಿಂದಲೂ  ಎಲ್ಲಾರೂ ಮಾಡಿಕೊಂಡು ಬರುತ್ತಿದ್ಧೇವೆ. ಆದರೆ ಎತ್ತುಗಳ ಸಂಖ್ಯೆ ಕ್ಷಿಣಿಸುತ್ತಿದ್ದು  ಮತ್ತೆ ಹಳೆ ಸಂಪ್ರದಾಯದಂತೆ  ಎತ್ತುಗಳನ್ನು ಹೆಚ್ಚು ಸಾಕುವ ಕೆಲಸ ಆದರೆ ರೈತರಿಗೆ ಅನುಕೂಲವಾಗಿ ಕೃಷಿ ಸಮೃದವಾಗಿ ರೈತರ ಬದುಲು ಹಸನಾಗುತ್ತದೆ.
ನನ್ನ ಕ್ಷೇತ್ರದಲ್ಲಿ ದೇವರ ಎತ್ತುಗಳ ನಿರ್ವಹಣೆ ಮತ್ತು ಗೋವುಗಳ ಸಾಕುವುದಕ್ಕೆ ತುಂಬಾ ಕಷ್ಟ ಇದ್ದ ಸಂದರ್ಭದಲ್ಲಿ ಗೋ ಶಾಲೆಗಳನ್ನು ತೆರೆಯುವ ಮೂಲಕ ಎತ್ತುಗಳನ್ನು, ಗೋವುಗಳನ್ನು ರಕ್ಷಣೆ ಮಾಡುವ ಕೆಲಸ ನಾನು ಮಾಡಿದ್ದೇನೆ‌. ವೈಯಕ್ತಿಕವಾಗಿ ಮೇವಿನ ಸಹಕಾರ ಸಹ ನೀಡಿದ್ದು  ಗೋವುಗಳ ರಕ್ಷಣೆ  ಮಾಡುವುದು ಅತ್ಯಂತ  ಶ್ರೇಷ್ಠ  ಕೆಲಸವಾಗಿದೆ.
ನನ್ನ  ಕ್ಷೇತ್ರದಲ್ಲಿ ಈ ಬಾರಿ ಉತ್ತಮ ಮಳೆ ಬೆಳೆಯಾಗಿದ್ದು ವಾಣಿವಿಲಾಸ ಸಾಗರ, ರಾಣಿಕೆರೆ ತುಂಬಿದ್ದು ಅಂತರ್ಜಲ ಮಟ್ಟ ಹೆಚ್ಚಿ ರೈತರ ಮೊಗದಲ್ಲಿ ಸಂತಸ ತಂದಿದೆ. ಬೃಹತ್ ಚಕ್ ಡ್ಯಾಂ ಗಳು ನಿರ್ಮಾಣ ಮಾಡುವ ಮೂಲಕ ರೈತರ ಹಿತ ಕಾಯುವ ಕೆಲಸ ಮಾಡಿದ್ದೇನೆ. ಭದ್ರ ಮೇಲ್ದಂಡೆ ಯೋಜನೆ ಮೂಲಕ ಸಾವಿರಾರು ರೈತರು ತೋಟಗಾರಿಕೆ ಬೆಳೆಗಳನ್ನು ಬೆಳೆಯಲು  ಸಹಕಾರಿಯಾಗಿದ್ದು ಚಳ್ಳಕೆರೆ ಕ್ಷೇತ್ರವನ್ನು ಹಸಿರುನಾಡಗಿಸಲು ನಿರಂತರಾಗಿ ಶ್ರಮಿಸುತ್ತೇನೆ.
ತುರುವನೂರು ಹೋಬಳಿಯ ಹುಣಸೇಕಟ್ಟೆ, ಮಾಡನಾಯಕನಹಳ್ಳಿ , ಬೆಳಘಟ್ಟ, ಆಯಕಲ್ಲು, ಹವಳೇನಳ್ಳಿ, ತುರುವನೂರು, ಚಿಕ್ಕೆನಹಳ್ಳಿ, ಪೇಲಾರಹಟ್ಟಿ ಸೇರಿ ಸುಮಾರು 30 ರಿಂದ 35 ಜೋಡಿ ಎತ್ತುಗಳ ಬಂದಿದ್ದು ಎಲ್ಲಾರೂ ಸಮಧಾನದಿಂದ ಸಂತೋಷದಿಂದ ಆರೋಗ್ಯಕರ ಸ್ಪರ್ಧೆಯಲ್ಲಿ ಎಲ್ಲಾರೂ ಭಾಗವಹಿಸಿ ಎಲ್ಲಾ ಊರಿ‌ನ ಜನ ನಮ್ಮ‌ ಜನ ನಿಮಗೆಲ್ಲಾ ಶುಭವಾಗಲಿ ಮತ್ತು ಯುಗಾದಿ ಹಬ್ಬದ ಶುಭಾಷಯ  ಕೋರಿದರು.
ಹುಣಸೇಕಟ್ಟೆ ಗ್ರಾಮದ ಸುತ್ತಮುತ್ತಲಿನ ಎತ್ತುಗಳನ್ನು ಸಿಂಗರಿಸಿಕೊಂಡು ಬಂದಿದ್ದರು, ಎತ್ತುಗಳಿಗೆ ಕೋಡಿನ ಕುಚ್ಚು ಹಾಕಿದ್ದಹೆಚ್ಚಿದವಿರಾರು ಜನರು ಆಗಮಿಸಿ ಮನರಂಜನೆ ಕಾರ್ಯದಲ್ಲಿ ಪಾಲ್ಗೊಂಡಿದ್ದರು.
ಬಹುಮಾನ: ಮೊದಲೇ ಬಹುಮಾನ ಫ್ರಿಡ್ಜ್, ಎರಡನೇ ಬಹುಮಾನ ಟಿವಿ, ಮೂರನೇ ಬಹುಮಾನ ಫ್ಯಾನ್ ನ್ನು ನೀಡಲಾಗುತ್ತದೆ.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷ ರಂಗಸ್ವಾಮಿ, ಉಪಾಧ್ಯಕ್ಷೆ ನಿಂಗಮ್ಮ, ಸದಸ್ಯರಾದ ಪಾಲಯ್ಯ, ಯಶೋಧಮ್ಮ, ಅರ್ಚನಾ,
ಶ್ರೀ ಅಹೋಬಲ ಟಿವಿಎಸ್ ಮಾಲೀಕ ಅರುಣ್, ಮಾಜಿ ಜಿ.ಪಂ ಸದಸ್ಯ ಬಾಬುರೆಡ್ಡಿ, ಮುಖಂಡರಾದ ಕಾಂತರಾಜ್, ಮಹಂತೇಶ್ , ವೆಂಕಟೇಶ್, ಮಾರುತಿ, ಬೋರೇಶ್,ಏಕಣ್ಣ, ಓಬಣ್ಣ, ಸತೀಶ್, ಮೂರ್ತಿ, ರಂಗೇಗೌಡ, ಮಹಂತೇಶ್ ಕೂನಬೇವು ಮತ್ತು ಯುವಕರು, ಮಕ್ಕಳು ಮತ್ತು ಗ್ರಾಮಸ್ಥರು ಭಾಗವಹಿಸಿದ್ದರು..
[t4b-ticker]

You May Also Like

More From Author

+ There are no comments

Add yours