ರೂ. 15.000 ಸಾವಿರ ಮೌಲ್ಯದ ಒಣಗಾಂಜಾ ವಶ

 

ಚಿತ್ರದುರ್ಗ (ಕರ್ನಾಟಕ ವಾರ್ತೆ) ಆಗಸ್ಟ್ 19:
ಚಿತ್ರದುರ್ಗ ನಗರದ ತಿಪ್ಪಜ್ಜಿ ಸರ್ಕಲ್‍ನಲ್ಲಿರುವ ವೆಂಕಟೇಶ್ವರ ದೇವಸ್ಥಾನದ ಹಿಂಭಾಗದ ಮನೆಯಲ್ಲಿ ಆಗಸ್ಟ್ 17ರಂದು ಅಬಕಾರಿ ಇಲಾಖೆ ಅಧಿಕಾರಿಗಳು ಆರೋಪಿತನನ್ನು ದಸ್ತಗಿರಿ ಮಾಡಿ ರೂ.15,000/- ಮೌಲ್ಯದ ಒಣಗಂಜಾ ವಶಪಡಿಸಿಕೊಂಡಿದ್ದಾರೆ.
ಅಬಕಾರಿ ಉಪ ಆಯುಕ್ತರಾದ ಬಿ.ಎಂ.ಅಶ್ವಿನಿ ಅವರ ನಿರ್ದೇಶನ ಹಾಗೂ  ಅಬಕಾರಿ ಉಪ ಅಧೀಕ್ಷಕರಾದ ರಾಜೇಂದ್ರ ಐ ಹೂಗಾರ ಅವರ ನೇತೃತ್ವದಲ್ಲಿ ಆಗಸ್ಟ್ 17ರಂದು ಚಿತ್ರದುರ್ಗ ಉಪ ವಿಭಾಗದ ಅಬಕಾರಿ ಉಪ ನಿರೀಕ್ಷಕರಾದ ಎನ್.ನಾಗರಾಜ ಅವರು ಸಿಬ್ಬಂದಿಯೊಂದಿಗೆ ಖಚಿತ ಮಾಹಿತಿಯ ಮೇರೆಗೆ ನಗರದ ತಿಪ್ಪಜ್ಜಿ ಸರ್ಕಲ್‍ನಲ್ಲಿರುವ ವೆಂಕಟೇಶ್ವರ ದೇವಸ್ಥಾನದ ಹಿಂಭಾಗದ ಮನೆಯಲ್ಲಿ ದಾಳಿ ನಡೆಸಿದಾಗ ರಾಜೇಂದ್ರ ಪಾಟೀಲ್ ಬಿನ್ ಚನ್ನಪ್ಪಗೌಡ (54), ಇವರಿಂದ ಸುಮಾರು 15.000/- ಮೌಲ್ಯದ 316 ಗ್ರಾಂ (32 ಚೀಟಿಗಳು ಸೇರಿ 316 ಗ್ರಾಂ) ಒಣಗಾಂಜಾ ಮತ್ತು ಗಾಂಜಾ ಸೇವನೆಗೆ ಬಳಸಿದ ಚುಲುಮೆ ಮತ್ತು ತ್ರಿ-ಚಕ್ರ ವಾಹನ ಆಟೋ ರಿಕ್ಷಾ ನೊಂದಣಿ ಸಂ: ಕೆಎ-16, 9535 ವಾಹನವನ್ನು ಜಪ್ತಿ ಮಾಡಲಾಗಿದೆ.
ಆರೋಪಿತನನ್ನು ದಸ್ತಗಿರಿ ಮಾಡಿ ಆರೋಪಿತನ ವಿರುದ್ಧ Narcotic Drugs & Psychotropic Substances Act 1985 ರ ಪ್ರಕಾರ ಅಬಕಾರಿ ಉಪ ನಿರೀಕ್ಷಕರಾದ ಎನ್.ನಾಗರಾಜ ಇವರು ಪ್ರಕರಣ ದಾಖಲಿಸಿ, ನ್ಯಾಯಾಲಯದ ಆದೇಶದಂತೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ದಾಳಿಯಲ್ಲಿ ಅಬಕಾರಿ ಪೇದೆಗಳಾದ ಎಂ.ಮಾರುತಿ, ಬಿ.ತಿಮ್ಮರಾಜು, ಕೆ. ರಮೇಶ್ ನಾಯ್ಕ ಹಾಗೂ ವಾಹನ ಚಾಲಕರಾದ ಪರಮೇಶ್ವರ ಈ ಬಡಿಗೇರ ಇದ್ದರು.

[t4b-ticker]

You May Also Like

More From Author

+ There are no comments

Add yours