ಮಹಿಳೆಯರ ಉನ್ನತ ಶಿಕ್ಷಣದಿಂದ ಮಾತ್ರ ನಿಜವಾದ ಸಬಲೀಕಣ ಸಾಧ್ಯ

 

ಮಹಿಳಾ ದಿನಾಚರಣೆಯ ಶುಭಾಷಯಗಳು.

ಲೇಖನ:ದಿವ್ಯ ಪ್ರಭು ಜಿ.ಆರ್.ಜೆ.  ಜಿಲ್ಲಾಧಿಕಾರಿಗಳು

ಚಿತ್ರದುರ್ಗ

ಮಹಿಳೆಯರು ತಮ್ಮ ಶಕ್ತಿ, ಸಾಮರ್ಥ್ಯ ಏನೆಂಬುದನ್ನು ಆತ್ಮಾವಲೋಕನ ಮಾಡಿಕೊಳ್ಳುವ ಮೊದಲು ತಮ್ಮ ಮೇಲೆ ಒಂದು ನಂಬಿಕೆ ಇಡಬೇಕು. ನಮ್ಮ ಬೇರೆಯವರು ಏನು ಸಾಧನೆ ಮಾಡಬೇಕು ಎಂದು ಹೇಳಿದರೆ ನಮಗೆ ಏನಾಗುತ್ತದೆ ಎಂದು ನಾವು ಯೋಚಿಸಿದರೆ, ನಾವು ಮಹಿಳೆಯರು ಹೆಚ್ಚಿನ ಹಾದಿಯಲ್ಲಿ ವೇಗವಾಗಿ ಮುನ್ನಡೆಯುತ್ತೇವೆ. ತಮಗೆ ಬೇಕಾಗಿರುವ ವಿಷಯಗಳನ್ನು ತಾವೇ ನಿರ್ಧರಿಸುವ ಮನೋಭಾವವನ್ನು ತಿಳಿದುಕೊಳ್ಳಬೇಕು. ಎಷ್ಟೋ ಸಮಯದಲ್ಲಿ ನಾವು ಏನು ಓದಬೇಕು? ಏನು ಮಾಡಬೇಕು? ಯಾವ ಉಡುಪು ಧರಿಸಬೇಕು? ಇಂತದ್ದನ್ನೆಲ್ಲ ಬೇರೆಯವರು ಹೇಳುತ್ತಾರೆ. ಆದರೆ, ನಮಗೆ ಅಗತ್ಯವಿರುವ ವಿಷಯಗಳು ನಾವೇ ನಿರ್ಣಯಿಸಬಲ್ಲ ಸಮುದಾಯದಲ್ಲಿ ನಾವು ಮುಂಚೂಣಿಗೆ ಹೋಗಲು ಸಾಧ್ಯ. ಹೀಗಾಗಿ ಮಹಿಳೆಯರು ತಮ್ಮ ಮೇಲಿನ ನಂಬಿಕೆಯನ್ನು ಹೆಚ್ಚಿಸಿಕೊಳ್ಳಬೇಕು. ಬೇರೆ ಯಾರಿಗೂ ಇಲ್ಲದ ಶಕ್ತಿ ಮಹಿಳೆಯರಿಗೆ ಇದೆ. ಟಾಸ್ಕಿಂಗ್, ಎಂತದ್ದೇ ಸಂದರ್ಭಗಳನ್ನು ನಿರ್ವಹಿಸುವ ಜಾಣ್ಮೆ, ಶಕ್ತಿ ದೇವರು ಕೊಟ್ಟಿದ್ದಾನೆ.ನಮ್ಮ ಮೇಲಿನ ನಂಬಿಕೆ ನಮ್ಮ ವಿಷಯದಲ್ಲಿ, ಸಾರ್ವಜನಿಕ ಜೀವನದಲ್ಲೂ ಮುಂದೆ ನಿಂತು ನಾಯಕತ್ವ ತೋರಿಸಲು ಅವಕಾಶ ಸಿಗುತ್ತದೆ.

ಇದಕ್ಕೆ ನಾನೇ ಒಂದು ಉದಾಹರಣೆ ಎಂದು ಹೇಳಬಹುದು. ನಾನು ಒಂಬತ್ತು ತಿಂಗಳ ಗರ್ಭಿಣಿ ಇದ್ದಾಗ ಐಎಎಸ್ ಪ್ರಿಲಿಮಿನರಿ ಪರೀಕ್ಷೆ ಬರೆದೆ. ಮೂರು ತಿಂಗಳ ಮಗು ಇದ್ದಾಗ ಮೈನ್ಸ್ ಪರೀಕ್ಷೆ ಬರೆದಿದ್ದೇನೆ. ಏಳು ತಿಂಗಳ ಮಗು ಇದ್ದಾಗ ಸಂದರ್ಶನ ಎದುರಿಸುತ್ತಿದ್ದೇನೆ. ಮಗುವಿಗೆ ಒಂದು ತಿಂಗಳು ಇದ್ದಾಗ ಅಭ್ಯಾಸ ಬಿಟ್ಟು ಟ್ರೈನಿಂಗ್ ಹೋದೆ. ಆಗ ಎಲ್ಲರೂ ಇಂತಹ ಪರಿಸ್ಥಿತಿಯಲ್ಲಿ ಸಾಧ್ಯ ಆಗೋದಿಲ್ಲ.
ಮಹಿಳೆಯರು ದೃಢೀಕರಿಸಿದರೆ ಅದನ್ನು ಸಾಧಿಸಿ, ತೋರಿಸುತ್ತದೆ. ನಮ್ಮ ಜಿಲ್ಲೆಯ ಹೆಣ್ಣು ಮಕ್ಕಳಿಗೆ ಪ್ರತ್ಯೇಕವಾಗಿ ಹೇಳುವುದಾದರೆ, ಶಿಕ್ಷಣ ಹೆಚ್ಚಿನ ಫೋಕಸ್ ಮಾಡಬೇಕು. ಅವರು ಚೆನ್ನಾಗಿ ಓದಬೇಕು. ಯಾವುದೇ ತಾರತಮ್ಯ ಇಲ್ಲದೇ ಓದಲು ಸರ್ಕಾರ ವಿದ್ಯಾರ್ಥಿ ವೇತನ, ಹಾಸ್ಟಲ್, ಬುಕ್ಸ್ ಸಹಿತ ಎಲ್ಲ ಸೌಲಭ್ಯವನ್ನು ನೀಡಲಾಗಿದೆ. ಹಳ್ಳಿಗಳಲ್ಲಿರುವ ಹೆಣ್ಣು ಮಕ್ಕಳನ್ನು ಓದಲು ಒತ್ತು ನೀಡಲಾಗಿದೆ. ಪಡೆಯುವುದರಿಂದ ಮಾತ್ರ ಮಹಿಳೆಯರ ಸಮರ್ಥ ಶಿಕ್ಷಣ ಸಾಧ್ಯ. ಎಸ್ಎಸ್ ಎಲ್ ಸಿ, ಪಿಯುಸಿ ಓದಿ ಸೆಟ್ಲ್ ಮಾಡೋದಲ್ಲ. ಈ ಚಿಂತನೆ ಬದಲಾಗಬೇಕು. ಉನ್ನತ ಶಿಕ್ಷಣ ಪಡೆದಾಗ ಮಾತ್ರ ಉತ್ತಮ ಅವಕಾಶಗಳು ಸಿಗುತ್ತವೆ. ಆಗ ಮಾತ್ರವೇ ನಿಜವಾದ ಮಹಿಳಾ ವಿಮೋಚನೆ, ಸಬಲೀಕರಣ ಸಾಧ್ಯ.

****

[t4b-ticker]

You May Also Like

More From Author

+ There are no comments

Add yours