ಸ್ವಂತ ಪರಿಶ್ರಮದಿಂದ ನಿರಂತರ ಶ್ರಮವಹಿಸಿ ಓದಿ:ಕಿರಣ್ ಶಂಕರ್

 

ಹೊಸದುರ್ಗ : ತಂದೆ ತಾಯಿ ಆರ್ಥಿಕ ಪರಿಸ್ಥಿತಿ, ಅವರ ಕಷ್ಟಗಳನ್ನು ಕಂಡು ಓದಲು ಹಿಂಜರಿಯಬೇಡಿ. ಸ್ವಂತ ಪರಿಶ್ರಮದಿಂದ ನಿರಂತರ ಶ್ರಮವಹಿಸಿ ಓದಿ, ಉನ್ನತ ಸ್ಥಾನ ಅಲಂಕರಿಸಿ, ಯಶಸ್ಸಿಗೆ ಹಣ ಮುಖ್ಯವಲ್ಲ, ಪ್ರಯತ್ನ ಮುಖ್ಯ ಎಂದು ಎಸ್. ನಿಜಲಿಂಗಪ್ಪನವರ ( S.Nijalingappa)  ಮಗ ಕಿರಣ್ ಶಂಕರ್ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಎಸ್. ನಿಜಲಿಂಗಪ್ಪ ಎಜುಕೇಶನಲ್ ಅಂಡ್ ರೂರಲ್ ಡೆವಲಪ್ ಮೆಂಟ್ ಟ್ರಸ್ಟ್ ವತಿಯಿಂದ ಸಂಸ್ಥೆಯ ಆವರಣದಲ್ಲಿ ಆಯೋಜಿಸಿದ್ದ ‘ ಎಸ್. ನಿಜಲಿಂಗಪ್ಪನವರ ಜನ್ಮ ದಿನಾಚರಣೆ ಹಾಗೂ ನಿಜಲಿಂಗಪ್ಪ ಸಮೂಹ ಶಿಕ್ಷಣ ಸಂಸ್ಥೆಗಳ ವಾರ್ಷಿಕ ಹಬ್ಬದ’ ಅಂಗವಾಗಿ ಭಾನುವಾರ ‘ಎಸ್.ನಿಜಲಿಂಗಪ್ಪನವರ ಪುತ್ಥಳಿ ಅನಾವರಣಗೊಳಿಸಿ ಮಾತನಾಡಿದರು.

ಎಸ್.ನಿಜಲಿಂಗಪ್ಪನವರು (ತಂದೆ) ತೀರಿ ಹೋಗಿ ವರ್ಷಗಳೇ ಉರುಳಿದರೂ, ಅವರ ಮೇಲಿರುವ ಗೌರವ ಮಾತ್ರ ಕಡಿಮೆಯಾಗಿಲ್ಲ. ಎಷ್ಟೋ ಜನರಿಗೆ ಅವರ ದರ್ಶನವಿಲ್ಲ, ಆದರೂ ಅವರ ಬಗ್ಗೆ ಅಪಾರ ಅಭಿಮಾನವಿದೆ. ಸರ್ವರೂ ಈ ರೀತಿ ಜೀವನ ನಡೆಸಬೇಕು. ಸತ್ಯ, ಪ್ರಾಮಾಣಿಕತೆಯಿಂದ ಬದುಕಿ, ಇತರರಿಗೆ ಮಾದರಿಯಾಗಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಎಸ್.ನಿಜಲಿಂಗಪ್ಪನವರ ಪುತ್ರಿ ಪ್ರತಿಭಾದೇವಿ ಮಾತನಾಡಿ, ಶಿಕ್ಷಣ ಸಂಸ್ಥೆಯು ಪ್ರಕೃತಿಯ ಮಡಿಲಲ್ಲಿ ವಿಸ್ತಾರವಾಗಿ ಬೆಳೆದಿದೆ. ವಿದ್ಯಾರ್ಥಿಗಳು ಉತ್ತಮ ವಿದ್ಯಾಭ್ಯಾಸ ಮಾಡಲಿ, ವಿದ್ಯೆದ ಜೊತೆಗೆ ಮಾನವೀಯತೆ ಇರಬೇಕು. ಉನ್ನತ ಕ್ಷೇತ್ರದಲ್ಲಿದ್ದರೂ ಅಹಂಕಾರ ತೊರೆದು, ವಿನಯದಿಂದ ಬಾಳಬೇಕು. ಕಿಂಡರ್ ಗಾರ್ಡ್ ನಲ್ಲಿ (6 ವರ್ಷದೊಳಗಿನ) ವಿದ್ಯಾರ್ಥಿಗಳಿಗೆ ಪರೀಕ್ಷೆ, ರ್ಯಾಂಕ್ ನೀಡಬೇಡಿ, ಅವರು ಆಟ ಆಡುತ್ತಾ, ಪಾಠ ಕಲಿಯಬೇಕು. ಎಷ್ಟು ಸಾಧ್ಯವೋ ಅಷ್ಟೆ ಕಲಿಯಲಿ ಒತ್ತಡ ಹಾಕಬೇಡಿ. ವಿದ್ಯಾರ್ಥಿಗಳು ಓದಿ, ನಯ, ನಾಜೂಕಾಗಿ ಬದುಕಿ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

‘ಸಂಸ್ಥೆಯೂ ವಿದ್ಯಾರ್ಥಿಗಳ ಅಭಿವೃದ್ಧಿಗೆ ಹಲವು ಕಾರ್ಯಕ್ರಮಗಳನ್ನು ರೂಪಿಸಿದೆ. ಅಪರೂಪದ ನಾಯಕತ್ವ ಹೊಂದಿರುವ ರಾಜಕಾರಣಿಗಳಲ್ಲಿ ಎಸ್. ನಿಜಲಿಂಗಪ್ಪ ಕೂಡ ಒಬ್ಬರು. ರಾಜಕೀಯ ಕ್ಷೇತ್ರದಲ್ಲಿ ಹೇಗೆ ನಡೆಯಬೇಕು ಎಂಬುದರ ಕುರಿತು ವಿಶ್ವ ವಿದ್ಯಾಲಯಗಳು ನಿಜಲಿಂಗಪ್ಪ ಅವರ ಹೆಸರಿನಲ್ಲೇ ಒಂದು ಪಿ.ಹೆಚ್.ಡಿ. ನೀಡಬೇಕು ಎಂದು ವಿಧಾನ ಪರಿಷತ್ ಸದಸ್ಯ ಕೆ ಎಸ್ ನವೀನ್ ಸಲಹೆ ನೀಡಿದರು.

ಇದನ್ನೂ ಓದಿ: ಅರ್ಜುನನಿಗೆ ಗುಂಡೇಟು ಬಿದ್ದಿದೆಯಾ, ಅರ್ಜುನ ಆನೆಯ ಸಾವಿನ ಸತ್ಯ ಬಿಚ್ಚಿಟ್ಟ ವೈದ್ಯ

‘ಮುಖ್ಯಮಂತ್ರಿಯಾಗಿದ್ದ ಎಸ್. ನಿಜಲಿಂಗಪ್ಪ ಅವರು ವಿಧಾನಸಭಾ ಚುನಾವಣೆಯಲ್ಲಿ ಹೊಸದುರ್ಗ ಕ್ಷೇತ್ರದಲ್ಲಿ ಸೋಲು ಅನುಭವಿಸಿದ್ದರು. ಹೊಸದುರ್ಗದಲ್ಲಿ ಅವರ ಹೆಸರಿನಲ್ಲಿ ಆರಂಭವಾಗಿರುವ ಶೈಕ್ಷಣಿಕ ಸಂಸ್ಥೆ ಉನ್ನತಮಟ್ಟದಲ್ಲಿದ್ದೂ ಆ ಕಹಿ ನೆನಪು ಮರೆಸುವಂತಿದೆ. ಈ ಶಿಕ್ಷಣ ಸಂಸ್ಥೆಯಲ್ಲಿ ಕಲಿತ ವಿದ್ಯಾರ್ಥಿಗಳು ಅವರ ಆದರ್ಶದಡಿ ನಡೆಯಿರಿ. ಈ ಸಂಸ್ಥೆಯೂ ವಿಶ್ವ ವಿದ್ಯಾಲಯವಾಗಲಿ ಎಂದು ಆರ್ಥಿಕ ತಜ್ಞ ಜಿ.ಎನ್ ಮಲ್ಲಿಕಾರ್ಜುನಪ್ಪ ಹಾರೈಸಿದರು.

ಕಾರ್ಯಕ್ರಮಕ್ಕೆ ಆಗಮಿಸಿದ್ದ ಮುಖ್ಯ ಅತಿಥಿಗಳು

ಕೋಟ್ 01
ಶ್ರೀ ನಿಜಲಿಂಗಪ್ಪ ನವರ ಹೆಸರಿನಲ್ಲಿ ಒಂದು ಸಂಸ್ಥೆಯನ್ನು ಪ್ರಾರಂಭಿಸಿ ಈ ಸಂಸ್ಥೆಯಲ್ಲಿ ವಿದ್ಯಾಭ್ಯಾಸ ಮಾಡಿದ ಮಕ್ಕಳು ಅವರ ಆದರ್ಶವನ್ನು ಮೈಗೂಡಿಸಿಕೊಳ್ಳಬೇಕು , ಮುಖ್ಯಮಂತ್ರಿಯಾಗಿ ನಿಂಗಪ್ಪನವರು ತನ್ನ ಸ್ವಂತಕ್ಕಾಗಿ ಏನನ್ನು ಮಾಡಿಕೊಳ್ಳದೆ ತನ್ನ ಮಕ್ಕಳನ್ನು ಮೌಲ್ಯಯುತ ಆಸ್ತಿಯನ್ನಾಗಿ ಮಾಡಿ ಹೋಗಿದ್ದಾರೆ, ಇವರ ಸಮಾಜಮುಖಿ ಚಿಂತನೆ ಅವರೊಬ್ಬ ರಾಷ್ಟ್ರ ರಾಜಕಾರಣಿಯಾಗಲು ಪ್ರೇರಣೆಯಾಗಿದೆ,

ಕೆ ಎಸ್ ಕಲ್ಮಠ್,
ಕಾರ್ಯದರ್ಶಿ, ಶ್ರೀ ನಿಜಲಿಂಗಪ್ಪ ಶಿಕ್ಷಣ ಸಮೂಹ ಸಂಸ್ಥೆ,
ಹೊಸದುರ್ಗ,

ಈ ಸಂದರ್ಭದಲ್ಲಿ  ಎಸ್. ನಿಜಲಿಂಗಪ್ಪ ಶಿಕ್ಷಣ ಸಂಸ್ಥೆಯ ಅಧ್ಯಕ್ಷ. ಎಂ. ಶಿವಲಿಂಗಪ್ಪ, ಕಾರ್ಯದರ್ಶಿ ಕೆ.ಎಸ್. ಕಲ್ಮಠ್, ವೀರಶೈವ ಮುಖಂಡ ಷಣ್ಮುಖಪ್ಪ, ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ವೀರೇಶ್ ಕೆ.ಎಂ, ರೈತ ಮುಖಂಡ ಈಚಗಟ್ಟದ ಕೆ.ಬಿ. ಸಿದ್ಧವೀರಪ್ಪ, ಚಳ್ಳಕೆರೆಯ ತಿಪ್ಪೇಸ್ವಾಮಿ ಪಿ.ಟಿ.ಎಸ್, ದೇವರಾಜ ಅರಸು ಪ್ರಶಸ್ತಿ ಪುರಸ್ಕೃತ ಡಿ.ಎಂ. ಈಶ್ವರಪ್ಪ, ಧರ್ಮದರ್ಶಿಗಳಾದ ಎಂ.ಹೆಚ್,. ನೀಲಕಂಠಯ್ಯ, ಎಂ. ಚಂದ್ರಯ್ಯ, ಎ.ಎಸ್. ಸಿದ್ದರಾಮೇಶ್, ಬಿ. ಬಸವರಾಜ್ ಸೇರಿದಂತೆ ಆಡಳಿತ ಮಂಡಳಿ, ಶಿಕ್ಷಕರು, ಪೋಷಕರು ಹಾಗೂ ವಿದ್ಯಾರ್ಥಿಗಳಿದ್ದರು.

[t4b-ticker]

You May Also Like

More From Author

+ There are no comments

Add yours