ನೀವು ಆಗಸ್ಟ್ 15ಕ್ಕಿಂತ ಮೊದಲು ಗೃಹಲಕ್ಷ್ಮಿಗೆ ಅರ್ಜಿ ಸಲ್ಲಿಸಿದ್ರೆ ತಕ್ಷಣ ಈ ಕೆಲಸ ಮಾಡಿ

 

Karnataka: ಗೃಹಲಕ್ಷ್ಮಿ ಯೋಜನೆಯ ಆರಂಭವಾಗಿ ನಾಲ್ಕು ತಿಂಗಳು ಆಗಿದೆ, ಈಗಾಗಲೇ ಮೂರು ಕಂತಿನ ಹಣವು ಸಹ  ಮಹಿಳೆಯರ ಬ್ಯಾಂಕ್  ಖಾತೆ ಸೇರಿದೆ‌.ಇನ್ನೂ   ಕೆಲವರಿಗೆ ಹಣ ಜಮಾ ಆಗಿಲ್ಲ ಎಂಬ ಮಾತು ಸಹ ಇದೆ. ಅಗಸ್ಟ್ 15ನೇ ದಿನಾಂಕಕ್ಕಿಂತ  ಮೊದಲು ಯಾರು ಗೃಹಲಕ್ಷ್ಮಿ  (gruhalakshmiyojane) ಯೋಜನೆಗೆ ಅರ್ಜಿ ಸಲ್ಲಿಸಿದ್ದಾರೋ ಅಂತವರ ಖಾತೆಗೆ 6,000 ಹಣ ಜಮಾ ಮಾಡಲಾಗುವುದು ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ತಿಳಿಸಿದ್ದಾರೆ.

 ಆಗಸ್ಟ್ 15ಕ್ಕಿಂತ ಮೊದಲು ಗೃಹಲಕ್ಷ್ಮಿಗೆ ಅರ್ಜಿ ಹಾಕಿದ್ದರೆ ತಪ್ಪದೇ  ತಕ್ಷಣ  ಮೊದಲು  ಈ ಕೆಲಸ ಮಾಡಿ..

ಇದನ್ನೂ ಓದಿ: ಅರ್ಜುನನಿಗೆ ಗುಂಡೇಟು ಬಿದ್ದಿದೆಯಾ, ಅರ್ಜುನ ಆನೆಯ ಸಾವಿನ ಸತ್ಯ ಬಿಚ್ಚಿಟ್ಟ ವೈದ್ಯ

ಯಾವ ಮಹಿಳೆಯರು ಆಗಸ್ಟ್ 15ಕ್ಕಿಂತ ಮೊದಲು ಗೃಹಲಕ್ಷ್ಮಿಗೆ ಅರ್ಜಿ ಸಲ್ಲಿಸಿ ಹಣ ಖಾತೆಗೆ ಜಮಾ ಆಗಿಲ್ಲ   ಅಂದರೆ ದೂರು ಸಲ್ಲಿಸುವ ಸಲುವಾಗಿ ಗೃಹಲಕ್ಷ್ಮಿ ಅದಾಲತ್ ಆರಂಭಿಸಿದೆ. ಇದರಿಂದಾಗಿ ನೀವು ನಿಮ್ಮ ಖಾತೆಗೆ ಹಣ ಬಂದಿಲ್ಲ ಎಂಬುದನ್ನು ಗ್ರಾಮ ಪಂಚಾಯತ್ ಸಿಬ್ಬಂದಿಗಳಿಗೆ ತಿಳಿಸಬೇಕು . ಅವರು ತಕ್ಷಣವೇ ನಿಮ್ಮ ಖಾತೆಯನ್ನು ಪರಿಶೀಲಿಸಿ ಪರಿಹಾರವನ್ನು ಸೂಚಿಸಲಿದ್ದಾರೆ. ಗೃಹಲಕ್ಷ್ಮಿ ಹಣ ಬಾರದೆ ಇರುವ ಮಹಿಳೆಯರನ್ನ ಬ್ಯಾಂಕಿಗೆ ಕರೆದುಕೊಂಡು ಹೋಗಿ ಅವರ ಖಾತೆಯಲ್ಲಿ ಇರುವ ಸಮಸ್ಯೆಗಳನ್ನು ಪರಿಹಾರ ದೊರಕಿಸಲಿದ್ದಾರೆ.

ಡಿಸೆಂಬರ್ ತಿಂಗಳ  ಅಂತ್ಯದ ಒಳಗೆ ಎಲ್ಲಾ ಮಹಿಳೆಯರಿಗೂ ಗೃಹಲಕ್ಷ್ಮಿ ಯೋಜನೆಯ 2,000 ರೂಪಾಯಿ ಹಣ ಮಹಿಳೆಯರ ಖಾತೆಗೆ  ತಲುಪುತ್ತದೆ ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಭರವಸೆ ನೀಡಿದ್ದಾರೆ.

[t4b-ticker]

You May Also Like

More From Author

+ There are no comments

Add yours