ಪೊಲೀಸ್ ಸಿಬ್ಬಂದಿಯ ಮೂಲಭೂತ ಸೌಕರ್ಯ ಒದಗಿಸಿ  ಗಡಿ ಭಾಗದ ತಾಲ್ಲೂಕಿನ  ಜನರ ರಕ್ಷಣಗೆ ಸಹಕರಿಸಿ  

 

 ಮೊಳಕಾಲ್ಮುರು ಸುದ್ದಿ :ತಾಲ್ಲೂಕಿನಲ್ಲಿ ನಡೆಯುವ ಕೃತ್ಯಗಳಿಗೆ ಮತ್ತು ಅಪರಾಧ ಪ್ರಕರಣಗಳ  ತಡೆಯುವ ರಕ್ಷಣ ಸಿಬ್ಬಂದಿಗೆ ಮೂಲ ಸೌಕರ್ಯ ಕಲ್ಪಿಸಿ ಗಡಿಭಾಗದ ತಾಲ್ಲೂಕಿನ ಜನರ ರಕ್ಷಣೆಗೆ ಸಹಕರಿಸಿ  ಮತ್ತು ಬಿ.ಜಿ.ಕೆರೆ ಗ್ರಾಮದಲ್ಲಿರುವ ಪೋಲೀಸ್ ಉಪ ಠಾಣೆಯನ್ನು ಮೇಲ್ದರ್ಜೆಗೇರಿಸಿ ಎಂದು ದಲಿತ ಸಂಘರ್ಷ ಸಮಿತಿ ರಾಜ್ಯ ವಿಭಾಗೀಯ ಸಂಚಾಲಕರಾದ  ಬಿ ಟಿ ನಾಗಭೂಷಣ ತಿಳಿಸಿದರು.
 ಪಟ್ಟಣದ ಪೊಲೀಸ್ ಠಾಣೆಯ ಆವರಣದಲ್ಲಿ   ರೈತ ಸಂಘ ಹಾಗೂ ದಲಿತ ಸಂಘರ್ಷ  ಸಮಿತಿಯ ವತಿಯಿಂದ ಸಿಪಿಐ ಸತೀಶ್ ರವರಿಗೆ ಮನವಿ ಪತ್ರನೀಡಿ ಮಾತನಾಡಿದರು
 ಗಡಿ ಭಾಗದ ತಾಲ್ಲೂಕಿನಲ್ಲಿ  ಅನೇಕ ಅಪರಾಧ   ಕೃತ್ಯಗಳು ನಡೆಯುತ್ತಿದ್ದು, ಅಂತಹ ಕೃತ್ಯ ಗಳನ್ನು ತಡೆಗಟ್ಟುವಲ್ಲಿ ಆರಕ್ಷಕ ಠಾಣೆಯ ಅಧಿಕಾರಿಗಳು ಮತ್ತು ಪೊಲೀಸ್ ಸಿಬ್ಬಂದಿಯ ಪಾತ್ರ ಪ್ರಮುಖವಾಗಿದೆ. ಇಂತಹ ಸಿಬ್ಬಂದಿಗೆ ಮೂಲ ಸೌಕರ್ಯ ಕಲ್ಪಿಸಿಕೊಡಬೇಕು. ಬಿಜಿಕೆರೆಯಲ್ಲಿರುವ ಉಪ ನಿರೀಕ್ಷಕರ ಠಾಣೆಗೆ ಬಡ್ತಿ ನೀಡಿ,  ಠಾಣೆಗೆ ಹೊಸ ಕಟ್ಟಡ, ಸಿಬ್ಬಂದಿಗೆ ಗೃಹಗಳನ್ನು ನಿರ್ಮಾಣ ಮಾಡಬೇಕು ಹಾಗೂ ತಾಲ್ಲೂಕಿನ ಎಲ್ಲಾ ಪೊಲೀಸ್  ಠಾಣೆಗಳಿಗೆ ಹೊಸ ಕಟ್ಟಡ, ಸಿಬ್ಬಂದಿಗೆ ಗೃಹಗಳು,  ವಾಹನಗಳನ್ನು ಕೊಟ್ಟು ಇಲಾಖೆಗೆ ಹೊಸ ಸ್ಪರ್ಷ ಕೊಡಬೇಕು. ತಾಲ್ಲೂಕಿನ ಗಡಿಭಾಗ ಅಂಧ್ರಪ್ರದೇಶಕ್ಕೆ ಹೊಂದಿಕೊಂಡಿದ್ದು, ಕಳ್ಳಕಾಕರನ್ನು ಮಟ್ಟಹಾಕಲು ಸಿಬ್ಬಂದಿಗೆ ಅತ್ಯಾಧುನಿಕ ತಂತ್ರ ಜ್ಞಾನ ಹೊಂದಿದ ಆಯುಧಗಳನ್ನು ಕೊಡಬೇಕು ಎಂದರು..
ಕೆಲವು ವರ್ಷಗಳ ಹಿಂದೆ ರಾಂಪುರದಲ್ಲಿ ಆಟೋದಲ್ಲಿ ಪ್ರಮಾಣ ಮಾಡುವಾಗ ಅಪಘಾತದಲ್ಲಿ 11 ಜನ ಕೂಲಿ ಕಾರ್ಮಿಕರು ಮೃತಪಟ್ಟಿದ್ದರು. ರಾಂಪುರಕ್ಕೆ ಆಟೋದಲ್ಲಿ ಪ್ರಯಾಣ ಮಾಡುವಾಗ ಅಪಘಾತದಲ್ಲಿ ರೈತನು ಮೃತಪಟ್ಟಿದ್ದನು. ತಾಲ್ಲೂಕಿನ ಅನೇಕ ಹಳ್ಳಿಗಳ ಜನರು ಆಟೋಗಳನ್ನೇ ನಂಬಿಕೊಂಡು ಪ್ರಯಾಣ ಮಾಡುತ್ತಾರೆ. ಇಂತಹ ಅನೇಕ ಅಪಘಾತಗಳು ಆಟೋ ಮಾಲೀಕ ಹಾಗೂ ಚಾಲಕರಿಂದ ತಾಲ್ಲೂಕಿನಾದ್ಯಾಂತ ನಡೆದು ರೈತರು, ಕೂಲಿ ಕಾರ್ಮಿಕರು , ವೃದ್ಧರು, ಸಾರ್ವಜನಿಕರು, ಸಾಯುತ್ತಿದ್ದಾರೆ. ಇವರಿಗೆ ಅಪಘಾತ ವಿಮೆ ಬರುವುದಿಲ್ಲ ಏಕೆಂದರೆ ವಾಹನಕ್ಕೆ, ಅಪಘಾತ ವಿಮೆ ಮಾಡಿಸಿರುವುದಿಲ್ಲ. ಆಟೋ ಡ್ರೈವರ್  ವಾಹನ ಚಲಾಯಿಸಲು ಪರವಾನಿಗೆ ಪಡೆದಿರುವುದಿಲ್ಲ. ಇವರ ನಿರ್ಲಕ್ಷದಿಂದ ಸತ್ತವರಿಗೆ ಏನು ದೊರಕದೇ ಕುಟುಂಬಗಳು ಬೀದಿ ಪಾಲಾಗುತ್ತಿದ್ದಾರೆ. ತಕ್ಷಣವೇ ವಾಹನಗಳಿಗೆ ಅಪಘಾತ ವಿಮೆ ಡ್ರೈವರ್ ಗಳಿಗೆ ಲೈಸನ್ಸ್ ಕಡ್ಡಾಯ ಮಾಡಿಸಿಕೊಳ್ಳುವಂತೆ ಅರಿವು ಮೂಡಿಸಬೇಕು. ಆಟೋ, ಟ್ರಾಕ್ಸಿ, ಟ್ರ್ಯಾಕ್ಟರ್ , ಲಾರಿ, ಬಸ್ಸು, ಅನೇಕ ತರಹದ ವಾಹನ ಮಾಲೀಕರಿಗೆ ಖಡ್ಡಾಯವಾಗಿ ವಾಹನಗಳ ಅಧಿಕೃತ ದಾಖಲೆ ಮಾಡಿಸುವಂತೆ ಹಾಗೂ ಬೈಕ್ ಸವಾರರಿಗೂ ಇದೇ ಕಾನೂನು ಪಾಲಿಸುವಂತೆ ಕಟ್ಟುನಿಟ್ಟು ಅದೇಶ ಮಾಡಬೇಕು.  ಗಡುವು ನೀಡಿ ಎಲ್ಲಾ ವಾಹನಗಳನ್ನು ತನಿಖೆಗೆ ಒಳಪಡಿಸಬೇಕು ಹಾಗೂ ವಿನಾಕಾರಣ ತನ್ನಲ್ಲಿದ್ದ ತಪ್ಪಿಗೆ ಅಮಾಯಕ ಜೀವ ಕಳೆದುಕೊಳ್ಳುತ್ತಿರುವುದನ್ನು ತಪ್ಪಿಸಬೇಕು. ಸಾರ್ವಜನಿಕ ಪ್ರಾಣಕ್ಕೆ ಬೆಲೆಕೊಟ್ಟು ರಾಜಕಾರಣಗಳ ಒತ್ತಡಕ್ಕೆ ಮಣಿಯದಂತೆ ಕಾನೂನು ರೀತಿಯ ಕ್ರಮ ತೆಗೆದುಕೊಳ್ಳಬೇಕು ಎಂದು ತಿಳಿಸಿದರು.
ಸಂದರ್ಭದಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಬೇಡರಡಿಹಳ್ಳಿ ಬಸವ ರೆಡ್ಡಿ .ತಾಲ್ಲೂಕು ಅಧ್ಯಕ್ಷ ರವಿಕುಮಾರ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಕೊಂಡಾಪುರ ಪರಮೇಶ್ವರಪ್ಪ, ಸಂಜೀವಪ್ಪ ಎನ್ ಚಂದ್ರಣ್ಣ ಮಂಜುನಾಥ್ ಕೃಷ್ಣಮೂರ್ತಿ ಬಡೊಬಯ್ಯ ಹುಲುಗಪ್ಪ ಮುನ್ನ ಯೇರ್ಜೆನಹಳ್ಳಿ  ನಾಗರಾಜ್ ತಿಪ್ಪೇಸ್ವಾಮಿ ಮುಂತಾದವರು ಉಪಸ್ಥಿತರಿದ್ದರು
[t4b-ticker]

You May Also Like

More From Author

+ There are no comments

Add yours