ದೇಶದ್ರೋಹಿ ಮುಸಲ್ಮಾನ ಗೂಂಡಗಳಿಂದ ಪ್ರವೀಣ್ ನೆಟ್ಟಾರು ಹತ್ಯೆ: ಮಾಜಿ ಸಚಿವ ಈಶ್ವರಪ್ಪ ಕಿಡಿ. 

 

ಚಿತ್ರದುರ್ಗ: ದೇಶದ್ರೋಹಿಗಳು, ಮುಸಲ್ಮಾನ ಗೂಂಡಗಳು ಮಾಡಿರುವ  ಪ್ರವೀಣ್ ನೆಟ್ಟಾರು  ಹತ್ಯೆಯನ್ನು ಉಗ್ರವಾಗಿ ಖಂಡಿಸುತ್ತೇವೆ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಅಕ್ರೋಶ ವ್ಯಕ್ತಪಡಿಸಿದರು.
ನಗರದ ಪ್ರವಾಸಿ ಮಂದಿರದ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿ  ರಾಜ್ಯದಲ್ಲಿ ಕೇಲವು ಮುಸಲ್ಮಾನ ಗೂಂಡಗಳ ಮಾನಸಿಕ ವಿಚಾರಗಳನ್ನು ಇನ್ನೂ ಬದಲಾವಣೆ ಮಾಡಿಕೊಂಡಿಲ್ಲ. ಏನುತಪ್ಪು ಮಾಡದ ನಿರಾಪರಾಧಿ ಯುವಕನನ್ನು ಏಡಿ ರೀತಿಯಲ್ಲಿ ಕೊಲೆ ಮಾಡಿದ್ದಾರೆ. ಇದೇ ರೀತಿಯಲ್ಲಿ ಶಿವಮೊಗ್ಗದಲ್ಲಿ ಹರ್ಷನ ಕೊಲೆ ಮಾಡಿದ್ದರು. ಮುಸಲ್ಮಾನ ಸಮಾಜದ ಹಿರಿಯರು ಈ‌ ರೀತಿಯ ಗೂಂಡಗಳಿಗೆ ತಿಳಿ ಹೇಳಬೇಕು. ಇಂತಹ ಕೃತ್ಯಗಳಿಂದ ರಾಜ್ಯದ ಶಾಂತಿಯನ್ನು ಹಾಳು ಮಾಡುತ್ತಿದ್ದಾರೆ.
ದೇಶದ ಮತ್ತು ರಾಜ್ಯದ ಹಿರಿಯರು ತುಂಬಾ ನೋವಿನಲ್ಲಿದ್ದಾರೆ. ಶಾಂತಿಪ್ರಿಯ ಕರ್ನಾಟಕ ರಾಜ್ಯದಲ್ಲಿ  ಇಂತಹ ಘಟನೆಗಳು ಆಗದಂತೆ ಯಾವ ರೀತಿ ಕ್ರಮ ಕೈಗೊಳ್ಳಬೇಕು ಎಂಬುದರ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ.
ಕೊಲೆ ಕೊಲೆಯೇ ಉತ್ತರವಲ್ಲ. ಹಿಂದೂ ಸಮಾಜದ ದುರ್ಬಲ ಅಲ್ಲ. ಹಿಂದೂ ಸಮಾಜದ ಶಕ್ತಿಯನ್ನು ದುರುಪಯೋಗ ಮಾಡಿಕೊಂಡು ನಿರಾಪರಾಧಿಗಳನ್ನು ಕೊಲೆ ಮಾಡುತ್ತಿರುವುದು ರಾಜ್ಯದ ಜನರು ಗಮನಿಸುತ್ತಿದ್ದಾರೆ.
ರಾಜ್ಯದ ಮುಖ್ಯಮಂತ್ರಿಗಳಿಗೆ ಮತ್ತು ದೇಶದ ಪ್ರಧಾನಮಂತ್ರಿ ಮೋದಿಜೀ ಮತ್ತು ಗೃಹಮಂತ್ರಿ ಅಮಿತ್ ಷಾ ಅವರಿಗೆ ಇಂತಹ ಕೊಲೆಗಳು ಆಗದಂತೆ ತುರ್ತಾಗಿ ಕಾನೂನು ರಚನೆ ಮಾಡಬೇಕು ಎಂದು ಒತ್ತಾಯಿಸುತ್ತೇನೆ.
ಈ ಘಟನೆಯ ಹಿಂದೆ ಯಾವ ಸಂಘಟನೆ ಮಾಡಿದ ಯಾರ ಕೈವಾಡವಿದೆ ಎಂಬುದನ್ನು ಪತ್ತೆ ಹಚ್ಚುವ ಕೆಲಸ ನಡೆಯುತ್ತಿದೆ.
ನಾವು ನಮ್ಮ ಪಕ್ಷದ ಕಾರ್ಯಕರ್ತರನ್ನು ಪೂರ್ಣವಾಗಿ ರಕ್ಷಣೆ ಮಾಡಿಕೊಳ್ಳಲು ಆಗುತ್ತಿಲ್ಲ ಎಂಬ ನೋವಿದೆ. ಈ ಹಿಂದೂ ಸಮಾಜದ ಅಕ್ರೋಶವನ್ನು ಪಕ್ಷದ ಹುದ್ದೆಗಳಿಗೆ ರಾಜೀನಾಮೆ ನೀಡುತ್ತಿರುವುದನ್ನು ನಾನು ಗಮನಿಸುತ್ತಿದ್ದೇನೆ. ನಮ್ಮಂತಹ ನೂರಾರು ನಾಯಕರನ್ನು ನಮ್ಮ ಹಿರಿಯರು  ಬೆವರಿನ ರೀತಿಯಲ್ಲಿ  ರಕ್ತ ಸುರಿಸಿ ಪಕ್ಷ ಕಟ್ಟಿದ್ದಾರೆ‌. ಸಿಟ್ಟಿನ ಕೈಯಲ್ಲಿ ನಮ್ಮತನ ಕಳೆದುಕೊಳ್ಳಬೇಡಿ. ಮತ್ತು ಪಕ್ಷದ ಸ್ತಾನಮಾನಗಳಿಗೆ ಯಾರು ರಾಜೀನಾಮೆ ಕೊಡಬಾರದು ಅದು ಸೂಕ್ತವಲ್ಲ. ಇದಕ್ಕೆ ಪರಿಹಾರ ಏನು ಎಂಬುದರ ಬಗ್ಗೆ ಚಿಂತನೆಯನ್ನು ಹಿರಿಯರು ಮಾಡುತ್ತಿದ್ದಾರೆ.
ಮುಸಲ್ಮಾನ ಗೂಂಡಗಳ ಮನಸ್ಥಿತಿ ಎಂದು ಬದಲಾಗಲ್ಲ. ಆದ್ದರಿಂದ ಕೂಡಲೇ ಕಾನೂನು ಜಾರಿ ಮಾಡುವ ಅವಶ್ಯಕತೆ ಇದೆ ಎಂದರು. ಪಕ್ಷಕ್ಕೆ ರಾಜೀನಾಮೆ ಕೊಡುವವರಿಗೆ ಇನ್ನು ಪ್ರಬುದ್ಧರಾಗಿಲ್ಲ ಎಂದರು. ನಮ್ಮ ಪಕ್ಷದ ಯುವಕರು ತಪ್ಪು ಮಾಡಿದವರ ವಿರುದ್ದ ಅಕ್ರೋಶ ವ್ಯಕ್ತಪಡಿಸಬೇಕು. ಪಕ್ಷ ನಮ್ಮನ್ನು ಬೆಳೆಸಿದೆ  ಎಂದು ತಿಳಿ ಹೇಳಿದರು.
ದ್ವಂದ್ವ  ನಿಲುವುಗಳನ್ನು ವಿರೋಧ ಪಕ್ಷದ ಸಿದ್ದರಾಮಯ್ಯ ಮತ್ತು ಡಿಕೆಶಿ ಮಾಡುತ್ತಿದ್ದಾರೆ. ಕಾಂಗ್ರೆಸ್ ಸಂಸ್ಕ್ರತಿ ಹಿಂದೂಗಳನ್ನು ತುಳಿಯುತ್ತದೆ ಎಂದು ಕಿಡಿ ಕಾರಿದರು.
ನಮ್ಮ ಸರ್ಕಾರದ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ  ಸಂಪೂರ್ಣ ಯಶಸ್ವಿಯಾಗಿಲ್ಲ ಎಂದು ಒಪ್ಪಿಕೊಳ್ಳುತ್ತೇನೆ ಎಂದರು.
ಮುಖಂಡರಾದ ಸಿದ್ದೇಶ್ ಯಾದವ್, ಸಂಪತ್ ಕುಮಾರ್, ವೆಂಕಟೇಶ ಯಾದವ್,   ಇದ್ದರು.
[t4b-ticker]

You May Also Like

More From Author

+ There are no comments

Add yours