ಶನಿವಾರ ಬೆಳಗೆರೆಯಲ್ಲಿ ಸಮಸ್ಯೆ ಮುಕ್ತ ಗ್ರಾಮ ಪಂಚಾಯಿತಿ ವಿಶೇಷ ಕಾರ್ಯಕ್ರಮ: ತಹಶೀಲ್ದಾರ್ ಎನ್.ರಘುಮೂರ್ತಿ

 

 

 

ಚಳ್ಳಕೆರೆ: ಇದೇ  30 ತಾರೀಖಿನಂದು  ಶನಿವಾರ ಚಳ್ಳಕೆರೆ ತಾಲ್ಲೂಕಿನ ಬೆಳಗೆರೆ ಗ್ರಾಮ ಪಂಚಾಯತಿಯಲ್ಲಿ ಸಮಸ್ಯೆ ಮುಕ್ತ ಗ್ರಾಮಪಂಚಾಯಿತಿ ಕಾರ್ಯಕ್ರಮ ಮಾಡಲಾಗುವುದು  ಎಂದು ತಹಶೀಲ್ದಾರ್ ಎನ್.ರಘುಮೂರ್ತಿ ತಿಳಿಸಿದ್ದಾರೆ.

ಇಂದು ವಾಲ್ಮೀಕಿ ಭವನದಲ್ಲಿ ತಹಶೀಲ್ದರ್  ಅಧ್ಯಕ್ಷತೆಯಲ್ಲಿ ಸಮಸ್ಯೆ ಮುಕ್ತ ಗ್ರಾಮ ಪಂಚಾಯತಿ  ಪೂರ್ವಭಾವಿ ಸಭೆಯನ್ನು  ಉದ್ದೇಶಸಿ ಮಾತನಾಡಿದ  ತಾಲೂಕಿನಲ್ಲಿ  ಈಗಾಗಲೇ  ಸುಮಾರು  51 ಗ್ರಾಮಗಳನ್ನು ಸಮಸ್ಯೆ ಮುಕ್ತಗ್ರಾಮಗಳನ್ನಾಗಿ ಮಾಡಲಾಗಿದ್ದು  ಶಾಸಕರಾದ ಟಿ.ರಘುಮೂರ್ತಿ ಹಾಗೂ ಜಿಲ್ಲಾಧಿಕಾರಿಗಳ ಮಾರ್ಗದರ್ಶನದಲ್ಲಿ ಹಲವು ಗ್ರಾಮಗಳ ಶೇಕಡ ನೂರರಷ್ಟು ಸರ್ಕಾರಿ ಸೌಲಭ್ಯಗಳನ್ನು ಸಾರ್ವಜನಿಕರ ಮನೆ ಬಾಗಿಲಿಗೆ ತಲುಪಿಸಬೇಕೆನ್ನುವುದು ಸರ್ಕಾರದ ಹಾಗೂ ಚಳ್ಳಕೆರೆ ಕ್ಷೇತ್ರದ ಶಾಸಕ  ಆಶಯವಾಗಿದೆ.

ಈ ಹಿನ್ನೆಲೆಯಲ್ಲಿ  ಬೆಳಗೆರೆ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವಂತಹ ಎಲ್ಲಾ ಗ್ರಾಮಗಳನ್ನು ಸಮಸ್ಯೆ ಮುಕ್ತ ಗ್ರಾಮಗಳನ್ನಾಗಿ ತಾಲೂಕು  ಆಡಳಿತವು ಮಾಡಲಿದ್ದು  ಈ ಪಂಚಾಯಿತಿ ವ್ಯಾಪ್ತಿಯಲ್ಲಿರುವಂತಹ ಎಲ್ಲ ಗ್ರಾಮಸ್ಥರುಗಳು ಕಂದಾಯ ಇಲಾಖೆಯಿಂದ ಮತ್ತು ಬೇರೆ ಇಲಾಖೆಗಳಿಂದ ಪರಿಪೂರ್ಣವಾದ ಎಲ್ಲಾ ಸೌಲಭ್ಯಗಳನ್ನು ಪಡೆಯಬೇಕೆಂದು ಈ ಕುರಿತು ಬೆಳಗೆರೆ ಗ್ರಾಮ ಪಂಚಾಯತಿ ಅಧ್ಯಕ್ಷರು ಉಪಾಧ್ಯಕ್ಷರು ಮತ್ತು ಸದಸ್ಯರು ತಮ್ಮ ವ್ಯಾಪ್ತಿಯಲ್ಲಿ ಬರುವಂತಹ ಸಾರ್ವಜನಿಕರ ಸಮಸ್ಯೆಗಳನ್ನು ಕಂದಾಯ ಇಲಾಖೆ ಗಮನಕ್ಕೆ ತಂದು ನೊಂದ ಮತ್ತು ಸೌಲಭ್ಯ ವಂಚಿತ ಎಲ್ಲ ವರ್ಗದ ಜನರಿಗೆ ಸರ್ಕಾರದ ಸೌಲಭ್ಯಗಳನ್ನು ಒದಗಿಸಿ ತಮ್ಮ ಸಾರ್ಥಕತೆ ಮೆರೆಯ ಬೇಕೆಂದು ಮನವಿ ಮಾಡಿದರು.

ಈ ಸಮಯದಲ್ಲಿ ಬೆಳಗೆರೆ ಗ್ರಾಮಪಂಚಾಯಿತಿ ಅಧ್ಯಕ್ಷ ಎಚ್.ಇ.ಮಧು ಮಾತನಾಡಿ ಸಮಸ್ಯೆ ಮುಕ್ತ ಗ್ರಾಮಪಂಚಾಯಿತಿಗೆ   ಎಲ್ಲಾ ಅನುಕೂಲ ಮಾಡಿಕೊಡಲಾಗುವುದು. ಈ ಗ್ರಾಮಪಂಚಾಯಿತಿ ಗೆ ಒಳಪಟ್ಟಂತೆ ಕಲಮರಹಳ್ಳಿ ,ಗೊರ್ಲತ್ತು,ನಾರಾಯಣಪುರು,‌ಮಜರೆಗ್ರಾಮ ರಂಗನಾಥಪುರ,ಹುಲಿಕುಂಟೆ ಗ್ರಾಮ ಸೇರಿದಂತೆ ಕಂದಾಯ ಇಲಾಖೆ ಪೋಡಿ,ದಾರಿ ಸಮಸ್ಯೆ, ಪಿಂಚಣಿ ,ವಿಧವೇತನ,ಸೇರಿದಂತೆ ಇತರೆ ಸಮಸ್ಯಗಳನ್ನು ಅಧಿಕಾರಿಗಳಿಗೆ ಸಮಸ್ಯೆ ತಿಳಿಸಬಹುದು ಶನಿವಾರ ನಡೆಯಲಿರುವ ಸಮಸ್ಯೆ ಮುಕ್ತ ಕಾರ್ಯಕ್ರಮಕ್ಕೆ ಗ್ರಾಮಪಂಚಾಯಿತಿ ಸಿದ್ದವಾಗಿದೆ ಎಂದರು.

ಪಿಡಿಒ ದೇವದೇಂದ್ರಪ್ಪ,ಮಾತನಾಡಿದರು.ಈ ಸಂದರ್ಭದಲ್ಲಿ  ಗ್ರಾಮಪಂಚಾಯಿತಿ ಸದಸ್ಯರು ಆರ್ ಐ  ಮೋಹನ್,  ಗ್ರಾಮಲೆಕ್ಕಿಗರಾದ ಕಾಡೇಶ, ಗಿರಿಯಪ್ಪ,ಹಾಗೂ ಕಂದಾಯ ಅಧಿಕಾರಿಗಳು. ಗ್ರಾಮಸ್ಥರು ಗ್ರಾಮ ಪಂಚಾಯತಿ ಸಿಬ್ಬಂದಿ ಇದ್ದರು.

[t4b-ticker]

You May Also Like

More From Author

+ There are no comments

Add yours