ಮೊಳಕಾಲ್ಮೂರು ಕ್ಷೇತ್ರಕ್ಕೆ ಬಿಜೆಪಿಯಿಂದ ಪ್ರಬಲ ಟಿಕೆಟ್ ಆಕಾಂಕ್ಷಿ ಪ್ರಭಾಕರ ಮ್ಯಾಸನಾಯಕ

 

 

ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಮೊಳಕಾಲ್ಮುರಿನ 36 ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಎಲ್ಲ ಗ್ರಾಮಗಳನ್ನು ನಮ್ಮ ಶುಭೋದಯ ಕಾರ್ಯಕ್ರಮವು ತಲುಪಲಿದೆ ಎಂದು ಬಿಜೆಪಿ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಹಾಗೂ ಬಿಜೆಪಿ ಟಿಕೆಟ್ ಆಕಾಂಕ್ಷಿ ಪ್ರಭಾಕರ ಮ್ಯಾಸ
ನಾಯಕ ತಿಳಿಸಿದರು.
ಚಳ್ಳಕೆರೆ ತಾಲ್ಲೂಕು ಕುದಾಪುರ ಗ್ರಾಮದ ಇತಿಹಾಸ ಪ್ರಸಿದ್ಧ ಮ್ಯಾಸ ಮಂಡಲದ ಬೋರೆ ದೇವರಲ್ಲಿ ಕಾರ್ಯಕ್ರಮದ ಯಶಸ್ವಿಗೆ ಪ್ರಾರ್ಥಿಸಿ ಮಾಧ್ಯಮದೊಂದಿಗೆ ಮಾತನಾಡಿದರು.
ನಾನು ಮೂಲತಹ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸ್ವಯಂಸೇವಕ. ನಾನು ಪಕ್ಷನಿಷ್ಠ ಕಾರ್ಯಕರ್ತ ನಮ್ಮದು ಮೂಲ ಇದೆ ಕುದಾಪುರ ಗ್ರಾಮದವನು ಜೀವನ ನಿರ್ವಹಣೆಗಾಗಿ ನಮ್ಮ ಕುಟುಂಬ ವಲಸೆ ಹೋಗಿ ಹೊರಗಡೆ ನೆಲೆಸಿದೆ.
ಈಗಲೂ ನಾವು ವರ್ಷದಲ್ಲಿ ಒಮ್ಮೆ ದೇವರಿಗೆ ಬಂದು ಅರ್ಚನೆ ಮಾಡಿಸಿಕೊಂಡು ಹೋಗುವುದು ಪ್ರತೀತಿಯಾಗಿದೆ.
 ಈ ಕ್ಷೇತ್ರದಲ್ಲಿ ಕಳೆದ ಹತ್ತು ವರ್ಷಗಳಿಂದ ನಾನು ಟಿಕೆಟ್ ಗೆ ಪ್ರಯತ್ನ ಪಡುತ್ತಿರುವುದು ತಮಗೆಲ್ಲರಿಗೂ ಗೊತ್ತಿದೆ. ಭಾರತೀಯ ಜನತಾ ಪಾರ್ಟಿಯಲ್ಲಿ ನಾನು ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯನಾಗಿ ಅನ್ಯಾನ್ಯ ಜವಾಬ್ದಾರಿಗಳನ್ನು ನಿರ್ವಹಿಸಿದ್ದೇನೆ.
ಕೋವಿಡ್ ಅಂತ ಮಹಾಮಾರಿ ಅಪ್ಪಳಿಸಿದ ಸಮಯದಲ್ಲಿ ಕ್ಷೇತ್ರದಾದ್ಯಂತ ಕಿಟ್ಟು ಗಳನ್ನು ವಿತರಣೆ ಮಾಡಿ ಜನರ ನಿತ್ಯ ಬದುಕಿಗೆ ಆಸರೆಯಾಗಿದ್ದೇನೆ.
ಸಾವಿರಾರು ಯುವಕರಿಗೆ ಉದ್ಯೋಗವನ್ನು ಕೊಡಿಸಿದ್ದೇನೆ.
ನಮ್ಮ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರಸರ್ಕಾರ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರವು ಅನೇಕ ಜನಪರ ಕಾರ್ಯಕ್ರಮಗಳನ್ನು ಜಾರಿಗೊಳಿಸಿದೆ.
ಜನಸಾಮಾನ್ಯರಿಗೆ ಈ ಬಗ್ಗೆ ಅರಿವು ಇಲ್ಲದಿರುವುದರಿಂದ ಹಾಗೂ ಯೋಜನೆಗಳು ಸಮರ್ಪಕವಾಗಿ ಬಳಕೆಯಾಗಬೇಕಿರುವುದರಿಂದ ಕ್ಷೇತ್ರದಾದ್ಯಂತ *ಶುಭೋದಯ ಕಾರ್ಯಕ್ರಮದ* ಅಡಿಯಲ್ಲಿ ಬೆಳಗ್ಗೆ 6.00 ಗಂಟೆಯಿಂದ 11:00 ಮತ್ತು ಸಂಜೆ 5 ರಿಂದ ರಾತ್ರಿ 8 ಗಂಟೆ ತನಕ ಪ್ರತಿನಿತ್ಯ 10 ಗ್ರಾಮಗಳನ್ನು ಸಂಪರ್ಕ ಮಾಡುವ ಮುಖೇನ ಸರ್ಕಾರದ ಯೋಜನೆಗಳನ್ನು ಪರಿಚಯ ಮಾಡುವಂತ ಕೆಲಸವನ್ನು ಹಮ್ಮಿಕೊಳ್ಳಲಾಗಿದೆ.
ಈ ಕಾರ್ಯಕ್ರಮದಿಂದ ಬಡವರ ಬದುಕಿನಲ್ಲಿ ಬದಲಾವಣೆ ಕಾಣಲು ಹಾಗೂ ಉತ್ಸಾಹಿ ಯುವಕರಲ್ಲಿ ಚೈತನ್ಯ ಮೂಡಿಸಿ ಉದ್ದಿಮೆದಾರರನ್ನಾಗಿ ಮಾಡಲು ಈ ಕಾರ್ಯಕ್ರಮ ಅತ್ಯಂತ ಸಹಕಾರಿಯಾಗುತ್ತದೆ ಎಂಬ ವಿಶ್ವಾಸ ನನ್ನದಾಗಿದೆ.
 ಕ್ಷೇತ್ರವು ರಾಜ್ಯದಲ್ಲೇ ಅತ್ಯಂತ ಹಿಂದುಳಿದ ಕ್ಷೇತ್ರವಾಗಿದೆ. ಭಾರತೀಯ ಜನತಾ ಪಾರ್ಟಿ 2023 ರಲ್ಲಿ ನನಗೆ ಅವಕಾಶ ಮಾಡಿಕೊಡುತ್ತದೆ ಎಂಬ ವಿಶ್ವಾಸ ಇದ್ದು ಮತದಾರ ಪ್ರಭುಗಳು ನನ್ನ ಕೈ ಹಿಡಿದು ನಡೆಸುತ್ತಾರೆ ಎಂಬ ವಿಶ್ವಾಸ ಕೂಡ ಇದ್ದು ಕ್ಷೇತ್ರವನ್ನು ರಾಜ್ಯದಲ್ಲಿ ಒಂದು ಮಾದರಿ ಕ್ಷೇತ್ರವನ್ನಾಗಿಸಬೇಕೆಂಬ ಸಂಕಲ್ಪವನ್ನು ತೊಟ್ಟಿದ್ದೇನೆ.
 ಈ ನಿಟ್ಟಿನಲ್ಲಿ ಈಗಾಗಲೇ ಕಾರ್ಯಪ್ರವೃತ್ತನಾಗಿದ್ದು ಕ್ಷೇತ್ರದ ಮನೆ ಮತ್ತು ಮನಸ್ಸುಗಳನ್ನು ಮುಟ್ಟುವಂತ ಕಾರ್ಯಕ್ರಮವನ್ನು ರೂಪಿಸಿದ್ದೇನೆ. ಇದೊಂದು ಸಾಮಾಜಿಕ ಕಳಕಳಿಯ ಕಾರ್ಯಕ್ರಮವಾಗಿದೆ ಈ ಕಾರ್ಯಕ್ರಮದಲ್ಲಿ ಮಹಿಳಾ ಸ್ವಸಹಾಯ ಸಂಘದವರು, ಯುವಕ ಮಿತ್ರರು, ರೈತರು ಮಹಿಳೆಯರು ಯುವಕ ಯುವತಿಯರು ಹಾಗೂ ಎಲ್ಲಾ ಸ್ತರದ ಜನರು ಕುಡಾ ಭಾಗವಹಿಸಿ ಸರ್ಕಾರದ ಯೋಜನೆಗಳನ್ನು ಸದ್ಬಳಕೆ ಮಾಡಿಕೊಳ್ಳುವಂತೆ ಪ್ರಭಾಕರ ಮನವಿ ಮಾಡಿದ್ದಾರೆ.
 ಕಾರ್ಯಕ್ರಮವು 12/01/2023 ರ ಗುರುವಾರದಿಂದ ತಳಕು ಹೋಬಳಿ ಘಟಪರ್ತಿ ಗ್ರಾಮ ಪಂಚಾಯತ್ ಯಿಂದ ಆರಂಭವಾಗಲಿದೆ.ಎಂದು ಪ್ರಭಾಕರ್ ಮ್ಯಾಸನಾಯಕ ತಿಳಿಸಿದರು.
[t4b-ticker]

You May Also Like

More From Author

+ There are no comments

Add yours