ಒತ್ತುವರಿ ಸರ್ಕಾರಿ ಜಾಗವನ್ನು ತೆರವುಗೊಳಿಸಲು ಅಡ್ಡಿಪಡಿಸಿದರೆ ಕಾನೂನು ಕ್ರಮ: ತಹಶೀಲ್ದಾರ್ ಎನ್.ರಘುಮೂರ್ತಿ

 

ಚಳ್ಳಕೆರೆ:  ತಾಲೂಕಿನಲ್ಲಿರುವ  ಸ್ಮಶಾನಕ್ಕೆ ಮೀಸಲಿರುವ ಸರ್ಕಾರಿ ಭೂಮಿಯನ್ನು ಅಳತೆ ಮಾಡಿ ನಿರ್ದಿಷ್ಟವಾಗಿ ನಾಲ್ಕು ದಿನಗಳೊಳಗೆ  ಒತ್ತುವರಿ ತೆರವು ಮಾಡುವಂತೆ ತಹಶೀಲ್ದಾರ್  ಏನ್. ರಘುಮೂರ್ತಿ ಕಂದಾಯ ಇಲಾಖೆ ಸಿಬ್ಬಂದಿಗಳಿಗೆ ವೇಳಾಪಟ್ಟಿ ನಿಗದಿ ಮಾಡಿ ಆದೇಶ ಮಾಡಿದ್ದರು‌.

ತಹಶೀಲ್ದಾರ್ ಅವರ ಆದೇಶದ ಮೇರೆಗೆ   ಚಳ್ಳಕೆರೆ ತಾಲೂಕಿನ ಪರಶುರಾಮ್ ಹೋಬಳಿ, ಕಸಬಾ ಹೋಬಳಿ, ನಾಯಕನಹಟ್ಟಿ ಹೋಬಳಿ ಮತ್ತು ತುಳಕು ಹೋಬಳಿಗಳಲ್ಲಿ ಒಂದು ಹೋಬಳಿ ಕೇಂದ್ರದಲ್ಲಿ  ಎರಡು  ದಿನ ಕಾಲಮಿತಿ ನಿಗದಿ ಮಾಡಿದ್ದು ಈ ದಿನಗಳಲ್ಲಿ ಸರ್ಕಾರಿ ಉದ್ದೇಶಕ್ಕೆ ಮೀಸಲಾದ  ಸರ್ಕಾರಿ ಜಮೀನಾದ ಸ್ಮಶಾನ ಮತ್ತು ಆಶ್ರಯ ಯೋಜನೆ, ಕಂದಾಯ ಇಲಾಖೆಯಿಂದ ಈಗಾಗಲೇ ನಿಗದಿ ಮಾಡಿ ಸಂಬಂದಿಸಿದಂತೆ ಪಹಣಿಯಲ್ಲಿಯೂ ಕೂಡ ಗ್ರಾಮ ಪಂಚಾಯತಿಯ ಹೆಸರಿಗೆ ನಮೂದು ಮಾಡಲಾಗಿದೆ.. ಹೀಗೆ ಪಹಣಿಯಲ್ಲಿ ನಮೂದಾದಂತ ಜಮೀನು ಕೂಡ ಸ್ಥಳೀಯ ಆಡಳಿತದ ಸರಿಯಾಗಿ ಗಮನ ಹರಿಸದ ಕಾರಣ  ಒತ್ತುವರಿಯಾಗಿದೆ.

ಒತ್ತುವರಿ ಆಗಿರುವ  ಜಮೀನನ್ನು ಒಂದು ವಾರ ಕಾಲ ಮಿತಿ ನಿಗದಿ ಮಾಡಿದ್ದು ಪ್ರತಿ ಪಂಚಾಯತಿಯಲ್ಲಿ ಆಯಾ ಗ್ರಾಮಗಳ ಸ್ಮಶಾನ ಮತ್ತು ಆಶ್ರಯದ ಸರ್ಕಾರಿ ಜಮೀನು ಒತ್ತುವರಿಯ ಬಗ್ಗೆ  ಜಾಗವನ್ನು  ಸರ್ವೇ ರವರು ಗುರುತಿಸಿ ತಕ್ಷಣ ಒತ್ತುವರಿದಾರರನ್ನು  ಹೊರದೂಡಿ ಸರ್ಕಾರದ ವಶಕ್ಕೆ ಪಡೆಯುವಂತೆ ಕಂದಾಯ ಇಲಾಖೆ ಸಿಬ್ಬಂದಿಗೆ ಆದೇಶ ನೀಡಿದ್ದಾರೆ. ಅದರಂತೆ ಇಂದಿನಿಂದ ಈ ಕಾರ್ಯ ಪ್ರಾರಂಭವಾಗಲಿದ್ದು ಅಧಿಕೃತ ಒತ್ತುವರಿದಾರರಿಗೆ  ತಲೆ ನೋವಾಗಿದೆ.. ಯಾವುದೇ ಕಾರಣಕ್ಕೂ ಅನಧಿಕೃತ ಒತ್ತುವರಿಯನ್ನು ತೆರವು ಮಾಡದೆ ಬಿಡಬಾರದು  ಒತ್ತುವರಿಯನ್ನು ನಿರ್ಬಂಧಿಸುವವರ ವಿರುದ್ಧ ಭೂ ಕಂದಾಯ ಕಾಯ್ದೆಯ ನಿಯಮ 192a ರೆಡಿ ಪ್ರಕರಣವನ್ನು ದಾಖಲಿಸುವಂತೆ ತಹಶೀಲ್ದಾರ್ ಖಡಕ್ ಸೂಚನೆ ನೀಡಿದ್ದಾರೆ.

[t4b-ticker]

You May Also Like

More From Author

+ There are no comments

Add yours