ಜನತೆ ವೈಚಾರಿಕವಾಗಿ ಜಾಗೃತರಾಗಿ  ಮೌಡ್ಯತೆ  ಕಂದಾ ಚಾರಗಳನ್ನು  ತೊಲಗಿಸಿ : ಬಸವಲಿಂಗ ಸ್ವಾಮೀಜಿ ಕರೆ 

 

 ಮೊಳಕಾಲ್ಮೂರು:  ಸಮಾಜದಲ್ಲಿ ಧರ್ಮದ ಹೆಸರಿನೊಳಗೆ ನಡೆಯುತ್ತಿರುವ ಕಂದಾಚಾರ, ಮೌಡ್ಯತೆ, ತೊಲಗಿ ಜನರಲ್ಲಿ ವೈಜ್ಞಾನಿಕ, ದೀವಿಗೆ ಬೆಳಗಬೇಕಿದೆ ಎಂದು ಮ.ನೀ. ಪ್ರ. ಬಸವಲಿಂಗ ಸ್ವಾಮೀಜಿ ಹೇಳಿದರು.
ಮೊಳಕಾಲ್ಮುರು  ತಾಲೂಕಿನ ಸಿದ್ದಯ್ಯನಕೋಟೆ ಚಿತ್ತರಗಿ ಶ್ರೀ ವಿಜಯ ಮಹಾಂತೇಶ್ವರ ಶಾಖ ಮಠ ಹಾಗೂ ಚಿತ್ತರಗಿ  ಚಿ ಜ್ಯೋತಿ ಸಾಂಸ್ಕೃತಿಕ ಕಲಾವೇದಿಕೆಯ ಸಂಯುಕ್ತ ಆಶ್ರಯದಲ್ಲಿ ನಡೆದ ಅಕ್ಕ ನಾಗಮ್ಮ ಜಯಂತಿಯ ಪ್ರಯುಕ್ತ ಹಾಲು ಕುಡಿಯುವ ಹಬ್ಬದಲ್ಲಿ ದಿವ್ಯ  ಸಾನಿಧ್ಯ ವಹಿಸಿ ಮಾತನಾಡಿದರು.
ಹಬ್ಬ ಹರಿದಿನಗಳ ಹೆಸರಿನಲ್ಲಿ ಪೌಷ್ಟಿಕ ಯುಕ್ತ ವಸ್ತುಗಳನ್ನು ಮಣ್ಣು ಮತ್ತು ಅಗ್ನಿಗಾಹುತಿ ಮಾಡದರಿ, ಇಂದು ಕೂಡ ಸಮಾಜದಲ್ಲಿ ಮಕ್ಕಳು ಸರಿಯಾದ ಆಹಾರ, ಔಷಧಿ ಇಲ್ಲದೆ ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ,ಅಂತಹ ಮಕ್ಕಳಿಗೆ ನೆರವಾಗಬೇಕಿದೆ ಎಂದು ತಿಳಿಸಿದರು.
ಹಾವಿಗೆ ಹಾಲೆರೆಯುವುದು ಒಂದು ಮೌಡ್ಯ ಪದ್ಧತಿಯಾಗಿದ್ದು ಇದರ ಬಗ್ಗೆ 12ನೇ ಶತಮಾನದಲ್ಲಿಯೇ ಶರಣರು ವಚನ ಸಾಹಿತ್ಯದ ಮೂಲಕ ಸಮಾಜವನ್ನು ಎಚ್ಚರಿಸಿದ್ದಾರೆ ಮೌಡ್ಯ ಸಂಪ್ರದಾಯಗಳನ್ನು  ತೊಲಗಿಸಬೇಕಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಡಾ ಸುಧೀಂದ್ರ ಬಾಬು ಹಾಲಿನೊಳಗಿರುವ ಪೌಷ್ಟಿಕಾಂಶಗಳು ಮತ್ತು ಅದರ ಸೇವನೆಯಿಂದ ಆಗುವ ಪ್ರಯೋಜನಗಳ ಬಗ್ಗೆ ಉಪನ್ಯಾಸ ನೀಡಿದರು.
ಶಿಕ್ಷಕ ಚಂದ್ರಪ್ಪ ಶರಣೆ ಅಕ್ಕನಾಗಮ ಕುರಿತು ಉಪನ್ಯಾಸ ನೀಡಿದರು, ಮುಖ್ಯ ಶಿಕ್ಷಕ ಪೆನ್ನಯ್ಯ, ಪಾಟೀಲ್ ಜಿ ಪಾಪ ನಾಯಕ್, ಪಿ ಯರ್ ಕಾಂತರಾಜ್ ಮಾತನಾಡಿದರು, ಶಿಕ್ಷಕ ನೀಲಕಂಠ ಎಚ್ ಪ್ರಾರ್ಥಿಸಿ, ಆರ್ ವಿ ಮಂಜುನಾಥ್ ನಿರೂಪಿಸಿ ವಂದಿಸಿದರು.
[t4b-ticker]

You May Also Like

More From Author

+ There are no comments

Add yours