ಸ್ವ-ಸಹಾಯ ಗುಂಪಿನ ಸದಸ್ಯರಿಗೆ ಗ್ರಾಮ ಪಂಚಾಯಿತಿ ಘನತ್ಯಾಜ್ಯ ನಿರ್ವಹಣಾ ಘಟಕಗಳ ಕಾರ್ಯಾಚರಣೆ ಜವಾಬ್ದಾರಿ:ಸಿಇಒ ಎಂ.ಎಸ್.ದಿವಾಕರ್

 

ಚಿತ್ರದುರ್ಗ(ಕರ್ನಾಟಕ ವಾರ್ತೆ).ಡಿ.30:
ಗ್ರಾಮೀಣ ಪ್ರದೇಶದ ಸ್ವಚ್ಚತೆಯ ಜವಾಬ್ದಾರಿಯನ್ನು ಸ್ವ ಸಹಾಯ ಗುಂಪಿನ ಸದಸ್ಯರ ಪಡೆಗೆ ನೀಡಲಾಗಿದ್ದು, ತರಬೇತಿಯಲ್ಲಿ ಪಡೆದ ವಿಷಯಗಳನ್ನು ಎಲ್ಲಾ ಮಹಿಳೆಯರಿಗೂ ತಿಳಿಸುವುದರ ಮೂಲಕ ಜಾಗೃತಿ ಮೂಡಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಂ.ಎಸ್.ದಿವಾಕರ ಹೇಳಿದರು.
ಇಲ್ಲಿನ ಜಿಲ್ಲಾ ಪಂಚಾಯಿತಿ ಜಿಲ್ಲಾ ಸಂಪನ್ಮೂಲ ಕೇಂದ್ರದಲ್ಲಿ ಶುಕ್ರವಾರ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‍ರಾಜ್ ಇಲಾಖೆ, ಮಹಾತ್ಮಗಾಂಧಿ ಗ್ರಾಮೀಣ ಇಂಧನ ಮತ್ತು ಅಭಿವೃದ್ಧಿ ಸಂಸ್ಥೆ ಹಾಗೂ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ (ಎನ್‍ಆರ್‍ಎಲ್‍ಎಂ)-ಸಂಜೀವಿನಿ, ಜಿಲ್ಲಾ ಪಂಚಾಯತ್ ಸಹಯೋಗದೊಂದಿಗೆ ಸ್ಪೀಚ್ ಸ್ವಯಂ ಸೇವಾ ಸಂಸ್ಥೆ ಮೂಲಕ ಆಯೋಜಿಸಿದ್ದ  ಗ್ರಾಮ ಪಂಚಾಯತಿ ಮಟ್ಟದ ಒಕ್ಕೂಟದ ಮಹಿಳೆಯರಿಗೆ ಘನತ್ಯಾಜ್ಯ ನಿರ್ವಹಣೆ ಮತ್ತು ಕಾರ್ಯಾಚರಣೆ ಕುರಿತ 5 ದಿನಗಳ ತರಬೇತಿ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ತರಬೇತಿ ಪ್ರಮಾಣ ಪತ್ರ ವಿತರಿಸಿ ಅವರು ಮಾತನಾಡಿದರು.
ಸ್ವಚ್ಚ ವಾಹಿನಿಗೆ ಹಸಿ  ಮತ್ತು ಒಣ ಕಸವನ್ನ ಪ್ರತ್ಯೇಕ ನೀಡುವುದು. ಘಟಕಗಳಲ್ಲಿ ವಿಂಗಡಣೆ ಮಾಡಿದ ತ್ಯಾಜ್ಯವನ್ನ ಸಂಪನ್ಮೂಲವಾಗಿ ಪರಿವರ್ತಿಸಿ ಅಧಿಕ ಲಾಭ ಗಳಿಸುವಂತೆ ಕರೆ ನೀಡಿದರು.
ನಿರ್ವಹಣೆ ವೆಚ್ಚಕ್ಕಾಗಿ ಪ್ರತಿ ಕುಟುಂಬದಿಂದ ಶುಲ್ಕ ಸಂಗ್ರಹಿಸುವುದು. ಇದುವರೆಗೆ 166 ಗ್ರಾಮ ಪಂಚಾಯತಿ ವ್ಯಾಪ್ತಿಯ ಒಕ್ಕೂಟದ ಸ್ವ ಸಹಾಯ ಗುಂಪುಗಳ ಸದಸ್ಯರಿಗೆ ಈ ತರಬೇತಿಯನ್ನು ನೀಡಲಾಗಿರುತ್ತದೆ. ಸ್ವಚ್ಚ ವಾಹಿನಿಯ ಚಾಲಕರಾಗಿ ಮಹಿಳೆಯನ್ನೇ ನೇಮಕ ಮಾಡಿಕೊಳ್ಳುವುದರ ಮೂಲಕ ಸಂಪೂರ್ಣ ಹೊಣೆಯನ್ನು ಮಹಿಳೆಯರಿಗೆ ವಹಿಸಲಾಗುತ್ತಿದೆ. ಇದುವರೆಗೆ 65 ಮಹಿಳೆಯರಿಗೆ ವಾಹನ ಚಾಲನಾ ತರಬೇತಿಯನ್ನು ನೀಡಲಾಗಿದ್ದು, 32 ಮಹಿಳೆಯರಿಗೆ ಚಾಲನ ತರಬೇತಿ ಚಿತ್ರದುರ್ಗ ರುಡ್‍ಸೆಟ್ ಸಂಸ್ಥೆಯಲ್ಲಿ ನೀಡಲಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಯೋಜನಾ ನಿರ್ದೇಶಕರಾದ ಕೆ.ಎಸ್ ಮಹಾಂತೇಶಪ್ಪ, ಮುಖ್ಯ ಯೋಜನಾಧಿಕಾರಿ  ಗಾಯತ್ರಿ, ಸ್ಪೀಚ್ ಸ್ವ ಸಹಾಯ ಸೇವಾ ಸಂಸ್ಥೆಯ ಕಾರ್ಯದರ್ಶಿ ಶೇಷಣ್ಣ, ಸಂಜೀವಿನಿ ಜಿಲ್ಲಾ ಅಭಿಯಾನ ನಿರ್ವಹಣಾ ಘಟಕದ ಸಿಬ್ಬಂದಿಗಳು ಉಪಸ್ಥಿತರಿದ್ದರು.

[t4b-ticker]

You May Also Like

More From Author

+ There are no comments

Add yours