ಅಬಕಾರಿ ಇಲಾಖೆ ವಶಪಡಿಸಿಕೊಂಡ ವಾಹನಗಳ ಬಹಿರಂಗ ಹರಾಜು

 

ಚಿತ್ರದುರ್ಗ (ಕರ್ನಾಟಕ ವಾರ್ತೆ) ಆಗಸ್ಟ್ 01:
ಜಿಲ್ಲೆಯಲ್ಲಿ ಅಬಕಾರಿ ಪ್ರಕರಣಗಳಲ್ಲಿ ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಂಡಿರುವ ವಾಹನಗಳನ್ನು ಈಗಿರುವ ಯಥಾಸ್ಥಿತಿಯಲ್ಲಿ  ಟೆಂಡರ್ ಕಂ ಬಹಿರಂಗ ಹರಾಜು ಮೂಲಕ ವಿಲೇವಾರಿ ಮಾಡಲಾಗುವುದು.
ಚಿತ್ರದುರ್ಗ ಉಪ ವಿಭಾಗದ ತುರುವನೂರಿನ ರಸ್ತೆಯ 3ನೇ ಕ್ರಾಸ್ ವಿಆರ್‍ಎಸ್ ಬಡಾವಣೆಯ ಅಬಕಾರಿ ನಿರೀಕ್ಷಕರ ಕಚೇರಿ ಆವರಣದಲ್ಲಿ ಆಗಸ್ಟ್ 22ರ ಬೆಳಿಗ್ಗೆ 11 ಗಂಟೆಗೆ, ಹೊಳಲ್ಕೆರೆ ವಲಯದಲ್ಲಿ  ಚಿತ್ರದುರ್ಗ ರಸ್ತೆ ಹೊಳಲ್ಕೆರೆಯ ಬನಶಂಕರಿ ಬಡಾವಣೆ ಅಬಕಾರಿ ನಿರೀಕ್ಷಕರ ಕಚೇರಿಯಲ್ಲಿ ಆಗಸ್ಟ್ 24ರ ಬೆಳಿಗ್ಗೆ 11 ಗಂಟೆಗೆ , ಹೊಸದುರ್ಗ ವಲಯದಲ್ಲಿ ಹೊಳಲ್ಕೆರೆ ರಸ್ತೆಯ ಸಿದ್ದರಾಮ ನಗರದ ಅಬಕಾರಿ ನಿರೀಕ್ಷಕರ ಕಚೇರಿ ಆವರಣದಲ್ಲಿ  ಆಗಸ್ಟ್ 26ರ ಬೆಳಿಗ್ಗೆ 11 ಗಂಟೆಗೆ, ಹಿರಿಯೂರು ಉಪ ವಿಭಾಗದ  ಅಬಕಾರಿ ನಿರೀಕ್ಷಕರು ಹಿರಿಯೂರು ವಲಯ ಹಿರಿಯೂರು ಇವರ ಕಚೇರಿ ಆವರಣದಲ್ಲಿ ಆಗಸ್ಟ್ 23ರ ಬೆಳಿಗ್ಗೆ 11 ಗಂಟೆಗೆ, ಚಳ್ಳಕೆರೆ ವಲಯದಲ್ಲಿ  ತ್ಯಾಗರಾಜ ನಗರದ 3ನೇ ತಿರುವಿನ ಅಬಕಾರಿ ನಿರೀಕ್ಷಕರ ಕಚೇರಿ ಆವರಣದಲ್ಲಿ ಆಗಸ್ಟ್ 25ರ ಬೆಳಿಗ್ಗೆ 11 ಗಂಟೆಗೆ ಬಹಿರಂಗ ಹರಾಜು ಪ್ರಕ್ರಿಯೆ ನಡೆಸಲಾಗುವುದು.
ಷರತ್ತುಗಳು : ಅಬಕಾರಿ ಇಲಾಖೆಯ ಸಿಬ್ಬಂದಿ ಹಾಗೂ ಪ್ರಸ್ತುತ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಏಜೆನ್ಸಿ ಮೂಲಕ ನಡೆದ ನೌಕರರು ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಭಾಗವಹಿಸುವಂತಿಲ್ಲ. ಹರಾಜು ನಡೆಸುವ ಸ್ಥಳದಲ್ಲಿ ಮುಂಗಡ ಠೇವಣಿ ಪಾವತಿಸಿ ರಶೀದಿ ಪಡೆಯಬೇಕು. ಮುಂಗಡ ಠೇವಣಿ ನೀಡಿದವರಿಗೆ ಮಾತ್ರ ಟೆಂಡರ್ ಕಂ ಹರಾಜಿನಲ್ಲಿ ಭಾಗವಹಿಸಲು ಅವಕಾಶವಿದೆ. ಟೆಂಡರ್ ಕಂ ಬಹಿರಂಗ ಹರಾಜಿನಲ್ಲಿ ಭಾಗವಹಿಸುವವರು ದ್ವಿಚಕ್ರ ವಾಹನಗಳಿಗೆ ರೂ.5000/- ಹಾಗೂ ತ್ರಿಚಕ್ರ ಮತ್ತು ಮೇಲ್ಪಟ್ಟ ವಾಹನಗಳಿಗೆ ರೂ 10000/- ಗಳ ಮುಂಗಡ ಠೇವಣಿ ಇಟ್ಟು ರಶೀದಿ ಪಡೆಯಬೇಕು. ಟೆಂಡರ್ ಕಂ ಬಹಿರಂಗ ಹರಾಜಿನಲ್ಲಿ ಭಾಗವಹಿಸಲು ಇಚ್ಛಿಸುವವರು ತಮ್ಮ ವಿಳಾಸದ ಭಾವಚಿತ್ರವುಳ್ಳ ಪುರಾವೆ ಕೊಡಬೇಕು. ಟೆಂಡರ್ ಕಂ ಬಹಿರಂಗ ಹರಾಜಿನಲ್ಲಿ ಭಾಗವಹಿಸುವ ಸವಾಲುದಾರರು ಹರಾಜು ನಿರ್ವಹಣಾ ಅಧಿಕಾರಿಯಿಂದ ಟೆಂಡರ್ ಫಾರಂ ಪಡೆದುಕೊಂಡು ಫಾರಂನಲ್ಲಿ ವಿವರಗಳನ್ನು ನಮೂದಿಸಿ ಟೆಂಡರ್ ಕಂ ಬಹಿರಂಗ ಹರಾಜು ನಡೆಯುವ  ದಿನದಂದು ಬೆಳಿಗ್ಗೆ 12ರಿಂದ 12:30ರವರೆಗೆ ಟೆಂಡರ್ ಬಾಕ್ಸ್‍ನಲ್ಲಿ ಟೆಂಡರ್‍ಗಳನ್ನು ಸಲ್ಲಿಸಬಹುದಾಗಿದೆ. ಹರಾಜು ನಿರ್ವಹಣಾಧಿಕಾರಿಗಳು ಸವಾಲುದಾರರು ಬಿಡ್‍ಗಳನ್ನು ಟೆಂಡರ್ ಬಾಕ್ಸ್‍ನಲ್ಲಿ ಸಲ್ಲಿಸಿದ ನಂತರ ಬಹಿರಂಗ ಹರಾಜು ನಡೆಸಲಾಗುವುದು. ನಂತರ ಟೆಂಡರ್, ಬಾಕ್ಸ್ ತೆರೆಯಲಾಗುವುದು ಟೆಂಡರ್ ಮತ್ತು ಬಹಿರಂಗ ಹರಾಜಿನಲ್ಲಿ ಇವರೆಡರಲ್ಲಿ ಹೆಚ್ಚಿನ ಬಿಡ್ ನೀಡಿರುವ ಸವಾಲುದಾರರ ಸವಾಲುಗಳನ್ನು ತಾತ್ಕಾಲಿಕವಾಗಿ ಅಂಗೀಕರಿಸುವುದು. ಹರಾಜು ನಿರ್ವಹಣಾಧಿಕಾರಿಗಳ ನಿರ್ಣಯವೇ ಅಂತಿಮ ನಿರ್ಣಯವಾಗಿರುತ್ತದೆ. ಯಶಸ್ವಿ ಸವಾಲುದಾರರು ಸವಾಲು ಮೊತ್ತದ ಶೇ.25% ರಷ್ಟು ಹಣವನ್ನು ಹರಾಜಿನ ದಿನದಂದೆ ಪಾವತಿಸಿ ರಶೀದಿ ಪಡೆಯಬೇಕು. ಹೆಚ್ಚಿನ ಸವಾಲು ಮೊತ್ತವು ಸಂಬಂಧಿತ ಪ್ರಾಧಿಕಾರದಿಂದ ಅಂಗಿಕೃತವಾದಲ್ಲಿ ಸ್ಥಿರೀಕರಣ ಆದೇಶ ತಲುಪಿದ 07 ದಿನಗಳ ಒಳಗೆ ಉಳಿದ ಸವಾಲಿನ ಮೊತ್ತ 75% ಹಣವನ್ನು ಸಂದಾಯಿಸಿ ವಾಹನವನ್ನು ತೆಗೆದುಕೊಂಡು ಹೋಗಬೇಕು ತಪ್ಪಿದಲ್ಲಿ ಪಾವತಿಸಿದ ಹಣವನ್ನು ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಳ್ಳಲಾಗುವುದು. ಯಶಸ್ವಿ ಅಲ್ಲದ ಸವಾಲುದಾರರ ಠೇವಣಿ ಹಣವನ್ನು ಅದೇ ದಿನ ಹರಾಜು ಪ್ರಕ್ರಿಯೆ ಮುಕ್ತಾಯಗೊಂಡ ನಂತರ ಹಿಂದಿರುಗಿಸಲಾಗುವುದು ಎಂದು ಅಬಕಾರಿ ಉಪ ಆಯುಕ್ತರು ತಿಳಿಸಿದ್ದಾರೆ.

[t4b-ticker]

You May Also Like

More From Author

+ There are no comments

Add yours