ಚುನಾವಣಾ ಕಣ: ಹೊಳಲ್ಕೆರೆ ಕ್ಷೇತ್ರದಲ್ಲಿ ಕಾಂಗ್ರೆಸ್ ಟಿಕೆಟ್ ಗೆ ಭರ್ಜರಿ ಪೈಪೋಟಿ, ಬಿಜೆಪಿ ಟಿಕೆಟ್ ಫಿಕ್ಸ್, ಜೆಡಿಎಸ್ ಲೆಕ್ಕಕ್ಕಿಲ್ಲ. ಹೇಗಿದೆ ಗ್ರೌಂಡ್ ರಿಪೋರ್ಟ್

 

ಚುನಾವಣಾ ಕಣ:

ಹೊಳಲ್ಕೆರೆ:Holalkere:ಆ:2:   ಹೊಳಲ್ಕೆರೆ  ವಿಧಾನ ಸಭಾ ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರವಾಗಿದ್ದು  ಚುನಾವಣೆ ಏಳೆಂಟು ತಿಂಗಳು ಇರುವಾಗಲೇ ಚುನಾವಣಾ ಕಾವು ಸಖತ್ ಜೋರಾಗಿದೆ. ರಾಜ್ಯದ ವಿಧಾನಸಭೆ ಚುನಾವಣೆಯಲ್ಲಿ ಹೊಳಲ್ಕೆರೆ ಸ್ವಲ್ಪ ವಿಶೇಷ ಅಂತ ಹೇಳಬಹುದಾಗಿದೆ. ಒಮ್ಮೆ ಗೆಲುವು ಸಾಧಿಸಿದವರು ಮತ್ತೊಮ್ಮೆ ಗೆಲುವಿನ ರುಚಿ ತೋರಿಸದೆ ಬದಲಾವಣೆ ಮಾಡುತ್ತ ಬಂದಿರುವ ಕ್ಷೇತ್ರ ಹೊಳಲ್ಕೆರೆ ಆಗಿದೆ.

ಕಾಂಗ್ರೆಸ್  ಪಕ್ಷದಿಂದ ಮಾಜಿ ಸಚಿವ ಹೆಚ್.ಆಂಜನೇಯ ಪ್ರತಿನಿಧಿಸುವ ಕ್ಷೇತ್ರ ಮತ್ತು ಬಿಜೆಪಿಯಿಂದ ಎಂ.ಚಂದ್ರಪ್ಪ ಹಾಲಿ ಶಾಸಕರಿದ್ದಾರೆ. ಜೆಡಿಎಸ್ ಪಕ್ಷದಿಂದ ಗದ್ದುಗೆ ಶ್ರೀನಿವಾಸ್ ಸ್ವರ್ಧೆ ಮಾಡಿದ್ದರು. ಒಮ್ಮೆ ಚಂದ್ರಪ್ಪ  ಮತ್ತೊಮ್ಮೆ  ಆಂಜನೇಯ ಅವರನ್ನು ಆಯ್ಕೆ ಮಾಡುತ್ತ ಬಂದಿದ್ದಾರೆ‌. ಯಡಿಯೂರಪ್ಪ ಬಂಟ ಶಾಸಕ ksrtc ಅಧ್ಯಕ್ಷ ಹಾಲಿ ಶಾಸಕ  ಚಂದ್ರಪ್ಪ  ಬಿಜೆಪಿಯಿಂದ  ಸ್ವರ್ಧೆ ಮಾಡುವುದು ಫಿಕ್ಸ್ ಆಗಿದೆ.

ಇನ್ನು ಕಾಂಗ್ರೆಸ್ ಪಕ್ಷದಿಂದ ಮಾಜಿ ಸಚಿವ ಹೆಚ್.ಆಂಜನೇಯ ಅವರಿಗೆ ಟಿಕೆಟ್ ಎಂದು ಹೇಳುತ್ತಿದ್ದರು ಸಹ ಬಲ್ಲ ಮೂಲಗಳ ಪ್ರಕಾರ ಕಳೆದ ಬಾರಿ ಜಿಲ್ಲಾ ಪಂಚಾಯತ ಸದಸ್ಯೆ ಸವಿತಾ ರಘು ಮತ್ತು  ಆಂಜನೇಯ ಸಚಿವರಾಗಿದ್ದ ಸಂದರ್ಭದಲ್ಲಿ  ಅಪ್ತ ವರ್ಗದಲ್ಲಿ ಗುರುತಿಸಿಕೊಂಡು ತಮ್ಮ  ಅಯಕಟ್ಟಿನ ಸ್ಥಳವಾದ ಸಣ್ಣ ನೀರಾವರಿ ಇಲಾಖೆಯ  ಸರ್ಕಾರಿ ಕೆಲಸಕ್ಕೆ ನಿವೃತ್ತಿ ನೀಡಿದ ಸವಿತಾ ಪತಿ ರಘು ಅವರು ಮಾಜಿ ಸಚಿವ ಆಂಜನೇಯ ಅವರಿಗೆ ಶತಯಗತಾಯ ಟಾಂಗ್ ಕೊಡಬೇಕೆಂದು ಟೊಂಕ ಕಟ್ಟಿ ನಿಂತಿದ್ದಾರೆ.

ಹೊಳಲ್ಕೆರೆ ಎಸ್ಸಿ ಮೀಸಲು ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದ ಟಿಕೆಟ್  ಹೆಚ್.ಆಂಜನೇಯ ಅವರಿಗೆ ತಪ್ಪಿಸಿ  ರಾಜ್ಯ ಪ್ರಧಾನ‌ ಕಾರ್ಯದರ್ಶಿ ಹುದ್ದೆಯಲ್ಲಿರುವ ಸವಿತಾ ಅವರಿಗೆ ದೆಹಲಿ ಹೈಕಮಾಂಡ್ ಬಾಗಿಲು ತಟ್ಟಿ ಬಂದಿದ್ದಾರೆ. ರಾಜ್ಯದ ಎಲ್ಲಾ ಕಾರ್ಯಕ್ರಮಗಳಲ್ಲಿ ಮತ್ತು ಹೊಳಲ್ಕೆರೆ ಕ್ಷೇತ್ರದ ಕಾರ್ಯಕ್ರಮದಲ್ಲಿ ಗುರುತಿಸಿಕೊಳ್ಳುತ್ತ ನಾನು ಆಥವಾ ನನ್ನ ಪತಿ ಸ್ವರ್ಧೆ ಖಚಿತ ಎಂಬ ಸಂದೇಶ ಸಾರುತ್ತಿದ್ದಾರೆ. ಜಿಲ್ಲಾ ಮಹಿಳಾ‌ ಕೋಟದಲ್ಲಿ ಮತ್ತು ಯುವ ಕಾಂಗ್ರೆಸ್ ಕೋಟಾದಲ್ಲಿ ಸವಿತಾ ಅವರಿಗೆ ಟಿಕೆಟ್ ಕೊಟ್ಟೆ ಕೊಡುತ್ತಾರೆ ಎಂಬ ಹುಮ್ಮಸಿನಲ್ಲಿ  ಸವಿತಾ ರಘು ಮತ್ತು ಪತಿ ರಘು ಸಹ ಇದ್ದು ಏನಾದರು ಸರಿ ಚುನಾವಣೆ ಕಣದಿಂದ ಹಿಂದೆ ಸರಿಯುವ ಪ್ರಶ್ನೆಯಿಲ್ಲ ಎಂಬ ಎಲ್ಲಾ ಕಡೆ ರಘು ಅವರು ಕಾರ್ಯಕರ್ತರಿಗೆ ಅಭಯ ನೀಡುತ್ತಿದ್ದು ಹೊಳಲ್ಕೆರೆ ಕ್ಷೇತ್ರದಲ್ಲಿ ಎಲ್ಲಾ ಕಾರ್ಯಕ್ರಮಗಳು ಸೇರಿ ಪ್ರತಿ ಹಳ್ಳಿಯಲ್ಲಿ ತನ್ನದೇ ಆದ ಗುಂಪು  ಕಟ್ಟಿಕೊಂಡಿದ್ದಾರೆ.

ಸಿದ್ದರಾಮಯ್ಯ ಅಪ್ತರಾಗಿರುವ ಆಂಜನೇಯ ಅವರಿಗೆ ಟಾಂಗ್ ಕೊಡುವಲ್ಲಿ ಮೊನ್ನೆ ಕೆಪಿಸಿಸಿ ಅಧ್ಯಕ್ಷ  ಡಿಕೆಶಿ ಚಿತ್ರದುರ್ಗಕ್ಕೆ ಭೇಟಿ ನೀಡಿದಾಗ ಬೃಹತ್ ಸೇಬಿನ ಹಾರ, ಬೃಹತ್ ಹೂವಿನ ಹಾರ ಹಾಕುವ ಮೂಲಕ ಹೂಮಳೆ ಗೈಯ್ಯುವ ಮೂಲಕ ಶಕ್ತಿ ಪ್ರದರ್ಶನ ಮಾಡಿ ಭರ್ಜರಿ ಸದ್ದು ಮಾಡಿದ್ದಾರೆ.

ಹೊಳಲ್ಕೆರೆಯಲ್ಲಿ ಬದಲಾವಣೆ ಗಾಳಿ ಬೀಸುತ್ತಿದೆಯಾದರು ಹಳೆ ಹುಲಿ ಹೆಚ್.ಆಂಜನೇಯ ಅವರಿಗೆ  ಟಿಕೆಟ್ ಕೈ ತಪ್ಪುತ್ತದೆಯಾ, ಸವಿತಾ ರಘು ಅವರಿಗೆ ಟಿಕೆಟ್ ಗಿಟ್ಟಿಸಿಕೊಳ್ಳುತ್ತಾರಾ ಇಬ್ಬರ ಜಗಳದಲ್ಲಿ ಮತ್ತೊಮ್ಮೆ ಚಂದ್ರಪ್ಪಗೆ ಲಾಭ ಆಗುತ್ತದೆಯಾ ಎಂಬುದನ್ನು ಟಿಕೆಟ್ ಫೈನಲ್ ಆದ ನಂತರ ಕ್ಷೇತ್ರದ ಪೂರ್ಣ ಚಿತ್ರಣ ಹೊರ ಬೀಳಲಿದೆ.

 

[t4b-ticker]

You May Also Like

More From Author

+ There are no comments

Add yours