ಕಾದಂಬರಿಕಾರ ಬಿ.ಎಲ್.ವೇಣುಗೆ ಮದಕರಿ ನಾಯಕ ಪ್ರಶಸ್ತಿ

 

ಚಿತ್ರದುರ್ಗ: ವಾಲ್ಮೀಕಿ ಜಾತ್ರೆಗೆ ಕೇಲವು ದಿನಗಳು ಬಾಕಿ ಇದೆ. ಪ್ರತಿ ವರ್ಷ ಫೆಬ್ರವರಿ 8 ಮತ್ತು 9 ಕ್ಕೆ ದಾವಣಗೆರೆ ಜಿಲ್ಲೆಯ   ಹರಿಹರ ತಾಲೂಕಿನ  ರಾಜನ ಹಳ್ಳಿ ವಾಲ್ಮೀಕಿ ಗುರುಪೀಠದಲ್ಲಿ ನಡೆಯುವ  ವಾಲ್ಮೀಕಿ ಜಾತ್ರಾ ಮಹೋತ್ಸವದಲ್ಲಿ ನೀಡುವಂತಹ  “ಮದಕರಿನಾಯಕ ಪ್ರಶಸ್ತಿ ” ಯನ್ನು ಖ್ಯಾತ ಸಾಹಿತಿಗಳು ,ಬರಹಗಾರರು,ಕಾದಂಬರಿಕಾರರು,ಸಿನಿಮಾ ನಿರ್ದೇಶಕರಾಗಿರುವ ಕೋಟೆ ನಾಡಿನ ಹೆಮ್ಮೆಯ ಪುತ್ರ ಬಿ.ಎಲ್.ವೇಣು ಅವರಿಗೆ ಲಭಿಸಿದೆ. ಈ ಪ್ರಶಸ್ತಿಯು ಒಂದು ಲಕ್ಷ ನಗದನ್ನು ಒಳಗೊಂಡಿದೆ. ಈ ಪ್ರಶಸ್ತಿ ಸಿಕ್ಕಿರುವುದಕ್ಕೆ  ಬಿ.ಎಲ್.ವೇಣು ಅವರು ತಮ್ಮ ಫೇಸ್ ಬುಕ್ ಖಾತೆಯಲ್ಲಿ ಹರ್ಷ ವ್ಯಕ್ತಪಡಿಸಿ ಪೋಸ್ಟ್ ಮಾಡಿದ್ದಾರೆ.

 

ಬಿ.ಎಲ್.ವೇಣು  ಅವರ  ಮಾಹಿತಿ:

ಪ್ರೇಮ ಪರ್ವ”, “ಕಲ್ಲರಳಿ ಹೂವಾಗಿ”, “ಒಲವಿನ ಉಡುಗೂರೆ”, “ವಿರಪ್ಪನಾಯ್ಕ”, “ದೇವ” ಹೀಗೆ ಮುಂತಾದ ಹೆಸರುವಾಸಿಯಾದ ಚಲನಚಿತ್ರಗಳ ಕಥೆಗಳಿಂದ ಮನೆಮಾತಾಗಿರುವ ಬಿ. ಎಲ್. ವೇಣುರವರು ೧೪ ಕಥಾ ಸಂಕಲನಗಳು, ೭ ಸಣ್ಣ ಕಾದಂಬರಿಗಳು, ೩೩ ಕಾದಂಬರಿಗಳು, ಅದರಲ್ಲಿ ೭ ಐತಿಹಾಸಿಕ ಕಾದಂಬರಿಗಳು,೫ ನಾಟಕಗಳು ೪ ಅಂಕಣ ಬರಹಗಳ ಸಂಕಲನಗಳು ಮತ್ತು ಅವರ ಆತ್ಮಕಥೆಯನ್ನು ಸೇರಿ ಒಟ್ಟು ೬೫ ಕ್ಕೂ ಕೃತಿಗಳನ್ನು ರಚಿಸಿದ್ದಾರೆ. ಕನ್ನಡ ಸಾಹಿತ್ಯ ಲೋಕಕ್ಕೆ ಮಹತ್ತರ ಕೊಡುಗೆ ನೀಡಿದ್ಧಾರೆ.

ಡಾ. ಬಿ. ಎಲ್. ವೇಣು

ಡಾ. ಬಿ ಎಲ್‌ ವೇಣು
ಶ್ರೀ ಬಿ. ಎಲ್. ವೇಣುರವರು
ಜನನ ೧೯೪೫ ಮೇ ೨೭
ಚಿತ್ರದುರ್ಗ
ವೃತ್ತಿ ಕಛೇರಿ ಆಧೀಕ್ಷಕರು, ಆರೋಗ್ಯ ಇಲಾಖೆ
ಭಾಷೆ ಕನ್ನಡ
ರಾಷ್ಟ್ರೀಯತೆ ಭಾರತೀಯ
ವಿದ್ಯಾಭ್ಯಾಸ ಬಿ.ಎಸ್ಸಿ, ಪ್ರಥಮದರ್ಜೆ ಕಾಲೇಜು, ಚಿತ್ರದುರ್ಗ
ಪ್ರಕಾರ/ಶೈಲಿ ಕಥೆ, ಕಾದಂಬರಿ, ಸಿನಿಮಾ ಚಿತ್ರಕಥೆ ಮತ್ತು ಸಂಭಾಷಣೆ
ವಿಷಯ ಐತಿಹಾಸಿಕ, ಸಾಮಾಜಿಕ ಮತ್ತು ಜನಜೀವನ
ಪ್ರಮುಖ ಪ್ರಶಸ್ತಿ(ಗಳು) ಕನ್ನಡ ರಾಜ್ಯೋತ್ಸವ ಪ್ರಶಸ್ತಿ (೨೦೦೫), ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ (೨೦೦೭), ಕುವೆಂಪು ವಿವಿಯಿಂದ ಗೌರವ ಡಾಕ್ಡರೇಟ್ (೨೦೧೩), ಮಹರ್ಷಿ ವಾಲ್ಮಿಕಿ ಪ್ರಶಸ್ತಿ (೨೦೨೦),
ಬಾಳ ಸಂಗಾತಿ ಜಿ.ಆರ್. ನಾಗವೇಣಿ
ಮಕ್ಕಳು ಸಿ.ವಿ. ಮಂಜುನಾಥ್ ಪ್ರಸಾದ್ ಮತ್ತು ಸಿ.ವಿ. ಗುರುಪ್ರಸಾದ್
ತಂದೆ ಬಿ. ಲಕ್ಷ್ಮಯ್ಯ (ರಂಗಕಲಾವಿದರು)
ತಾಯಿ

ಬಿ. ಸುಶೀಲಮ್ಮ
ವೇಣುರವರು ೧೯೪೫ನೆಯ ಇಸವಿ ಮೇ ೨೭ ರಂದು ಜನಿಸಿದರು. ತಂದೆ ಬಿ. ಲಕ್ಷ್ಮಯ್ಯ (ರಂಗಕಲಾವಿದರು), ತಾಯಿ ಬಿ.ಸುಶೀಲಮ್ಮ (ಗೃಹಿಣಿ)ಯವರ ಮಗನಾಗಿ ಕರ್ನಾಟಕ ರಾಜ್ಯದ ಚಿತ್ರದುರ್ಗದಲ್ಲಿ ಜನನ. ಮಡದಿ ಜಿ. ಆರ್ ನಾಗವೇಣಿ ಹಾಗೂ ಮಕ್ಕಳು ಸಿ.ವಿ. ಮಂಜುನಾಥ ಪ್ರಸಾದ್ ಮತ್ತು ಸಿ.ವಿ. ಗುರುಪ್ರಸಾದ್ ಹೊಂದಿರುವ ಸುಖಿ ಕುಟುಂಬ. ಚಿತ್ರದುರ್ಗದಲ್ಲಿನ ಪ್ರಥಮ ದರ್ಜೆ ಕಾಲೇಜಿನಲ್ಲಿ ಬಿ.ಎಸ್ಸಿ, ಅಧ್ಯಯನ ಮಾಡಿ, ಆರೋಗ್ಯ ಇಲಾಖೆಯ ಜಿಲ್ಲಾ ಆಸ್ಪ್ರತ್ರೆಗಳಲ್ಲಿ ದಿನಾಂಕ: ೧೭-೦೯-೧೯೭೦ ರಿಂದ ೨೦೦೩ ರ ವರೆಗೆ ದ್ವಿತೀಯ ದರ್ಜೆ ಗುಮಾಸ್ತ, ಪ್ರಥಮ ದರ್ಜೆ ಗುಮಾಸ್ತ, ಸಹಾಯಕ ಮತ್ತು ಕಛೇರಿ ಅಧೀಕ್ಷರಾಗಿ ಗುಲ್ಬರ್ಗ, ದಾವಣಗೆರೆ ಮತ್ತು ಚಿತ್ರದುರ್ಗಗಳಲ್ಲಿ ಸೇವೆಯನ್ನು ಸಲ್ಲಿಸಿದ್ದಾರೆ.

ಬದುಕಿನ ಏರಿಳಿತಗಳಿಗೆ ಅಂಜದೆ ಕುಗ್ಗದೆ ಸಾಹಿತ್ಯ ಮತ್ತು ಸಿನಿಮಾ ರಂಗದಲ್ಲಿ ತಮ್ಮದೇ ಆದ ಮಹತ್ತರವಾದ ಮೈಲಿಗಲ್ಲು ಸೃಷ್ಠಿಸಿದ್ದಾರೆ. ಇವರ “ನಿರೀಕ್ಷಣೆ” ಎಂಬ ಕಾದಂಬರಿಯಿಂದ ಪ್ರಾರಂಭವಾದ ಸಾಹಿತ್ಯದ ಹೆಜ್ಜೆಯು ಎನ್ನು ಓದುಗರಲ್ಲಿ ನಿರೀಕ್ಷಣೆಯನ್ನು ಕಡಿಮೆ ಮಾಡದ ರೀತಿ ಬೆಳೆದು ಹೆಮ್ಮರವಾಗಿದ್ದಾರೆ.

“ಕಲ್ಲರಳಿ ಹೂವಾಗಿ” ಚಿತ್ರದ ಸಂಭಾಷಣೆಗಾಗಿ ಕನ್ನಡ ಚಿತ್ರ ಪ್ರೇಮಿಗಳು ಬೆಂಗಳೂರು ರವರಿಂದ ಪ್ರಶಸ್ತಿ
“ಕಲ್ಲರಳಿ ಹೂವಾಗಿ” ಸಿನಿಮಾದ ಕಥೆ ಮತ್ತು ಸಂಭಾಷಣೆಗಾಗಿ “ರಾಷ್ಟ್ರೀಯ ಭಾವೈಕ್ಯತೆ ಪ್ರಶಸ್ತಿ”
ಕರ್ನಾಟಕ ಚಲನಚಿತ್ರ ಪ್ರಶಸ್ತಿ ಸದಸ್ಯರಾಗಿ ಆಯ್ಕೆ – ೨೦೦೪
ಚಿತ್ರದುರ್ಗದ ನಗರಸಭೆಯಿಂದ ಪೌರ ಸನ್ಮಾನ – ೨೦೦೮
ಅಭಿನಂದನಾ ಗ್ರಂಥ “ಚಿನ್ಮೂಲಾದ್ರಿ ಸಿರಿ” ಸಮರ್ಪಣೆ – ಕೆ. ವೆಂಕಣ್ಣಾಚಾರ್ – ೨೦೦೯
ಅಖಿಲ ಭಾರತ ೭೫ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಗೌರವ ಸನ್ಮಾನ – ೨೦೦೮
ಅಭಿನಂದನಾ ಗ್ರಂಥ “ಕೋಟೆ ನಾಡಿನ ಒಂಟಿ ಸಲಗ” ಸಮರ್ಪಣೆ – ಕೆ,ಎಸ್. ಪರಮೇಶ್ವರ – ೨೦೨೧
ಇನ್ನಿತರ ಅನೇಕ ಸಂಘ-ಸಂಸ್ಥೆಗಳಿಂದ ಸನ್ಮಾನ
ಚಲನಚಿತ್ರಗಳಿಗೆ ಸಂದ ಪ್ರಶಸ್ತಿಗಳು
ಬದಲಾಯಿಸಿ
ಕರ್ನಾಟಕ ರಾಜ್ಯ ಪ್ರಶಸ್ತಿ –
ಅಪರಂಜಿ – ೧೯೮೩-೮೪
ತಿಪ್ಪಜ್ಜಿ ಸರ್ಕಲ್‌ – ೨೦೧೫-೧೬
ಕರ್ನಾಟಕ ಚಲನಚಿತ್ರ ಅಕಾಡೆಮಿ ಗೌರವ ಪ್ರಶಸ್ತಿ – ೨೦೧೭
ಕರ್ನಾಟಕ ಚಲನಚಿತ್ರ ಅಕಾಡೆಮಿಯಿಂದ “ಬೆಳ್ಳಿಹೆಜ್ಜೆ” – ೨೦೧೮

ಹೆಚ್ಚಿನ ಸುದ್ದಿಗಳು ಓದಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ

ಇದನ್ನೂ ಓದಿ: ಭದ್ರಾ ಕಿಚ್ಚು:ಫೆಬ್ರವರಿ 13 ರಂದು ನಾಯಕನಹಟ್ಟಿ ಬಂದ್

ಇದನ್ನೂ ಓದಿ: ಇಂದು ವಿದ್ಯುತ್ ವ್ಯತ್ಯಯ

[t4b-ticker]

You May Also Like

More From Author

+ There are no comments

Add yours