ಸವೋತ್ತಮ ಸೇವಾ ಪ್ರಶಸ್ತಿಗೆ ನಾಮನಿರ್ದೇಶನ: ಜೂನ್ 15 ರವರೆಗೆ ಅವಧಿ ವಿಸ್ತರಣೆ

 

ಚಿತ್ರದುರ್ಗ(ಕರ್ನಾಟಕ ವಾರ್ತೆ) ಮೇ.23:
2023ನೇ ಸಾಲಿನ ರಾಜ್ಯ ಮಟ್ಟ ಹಾಗೂ ಜಿಲ್ಲಾ ಮಟ್ಟದ “ಸರ್ವೊತ್ತಮ ಸೇವಾ ಪ್ರಶಸ್ತಿ” ಗೆ ನಾಮನಿರ್ದೇಶನವನ್ನು ಸಲ್ಲಿಸುವ ಅವಧಿಯನ್ನು ಮೇ. 15 ರವರೆಗೆ ವಿಸ್ತರಿಸಲಾಗಿತ್ತು. ಆದರೆ ಹೆಚ್ಚಿನ ಸಂಖ್ಯೆಯ ಅಧಿಕಾರಿಗಳು ಹಾಗೂ ನೌಕರರು ನಾಮನಿರ್ದೇಶನಗಳನ್ನು ಸಲ್ಲಿಸಲು ಅವಕಾಶ ಕಲ್ಪಿಸುವ ಉದ್ದೇಶದಿಂದ ನಾಮ ನಿರ್ದೇಶನ ಸಲ್ಲಿಸುವ ಅವಧಿಯನ್ನು 2023ರ ಜೂನ್ 15ರ ವರಗೆ ವಿಸ್ತರಿಸಲಾಗಿದೆ.
ಸರ್ವೋತ್ತಮ ಪ್ರಶಸ್ತಿಗೆ ತಮ್ಮ ಹಾಗೂ ತಮ್ಮ ಅಧೀನದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅರ್ಹರಿರುವ ಸರ್ಕಾರಿ ಅಧಿಕಾರಿ, ನೌಕರರ ಸೇವಾ ವಿವರಗಳನ್ನು (ಬಯೋಡೇಟಾ)  ಹಾಗೂ ಗಣನೀಯ ಸೇವೆ ಸಲ್ಲಿಸಿರುವ ಬಗ್ಗೆ ಪೂರಕ ದಾಖಲಾತಿಗಳೊಂದಿಗೆ ಮತ್ತು ತಮ್ಮ ಶಿಫಾರಸ್ಸಿನೊಂದಿಗೆ ನಾಮ ನಿರ್ದೇಶನಗಳನ್ನು ಜೂನ್ 15 ರೊಳಗಾಗಿ ಆನ್‍ಲೈನ್ ಜಾಲತಾಣ https://dparar.karnataka.gov.in/ ಅಥವಾ https://sarvothamaawards.karnataka ದ ಮೂಲಕ ಮಾತ್ರವೇ ಸಲ್ಲಿಸಲು ಕೋರಿದೆ. ಭೌತಿಕವಾಗಿ ಸಲ್ಲಿಸಿದ ಯಾವುದೇ ಮನವಿ ಹಾಗೂ ಪ್ರಸ್ತಾವನೆಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ಅಪರ ಜಿಲ್ಲಾಧಿಕಾರಿ ಟಿ.ಜವರೇಗೌಡ ತಿಳಿಸಿದ್ದಾರೆ.

[t4b-ticker]

You May Also Like

More From Author

+ There are no comments

Add yours