ವಿ.ವಿ.ಸಾಗರ ವಿಚಾರದಲ್ಲಿ ರಾಜಕೀಯ ಬೇಡ: ಶಾಸಕಿ ಪೂರ್ಣಿಮಾ ಶ್ರೀನಿವಾಸ್

 

ಹಿರಿಯೂರು: ಚುನಾವಣೆಯಲ್ಲಿ ಗೆಲುವು-ಸೋಲು ಸಹಜ. ಆದರೆ ಚುನಾವಣೆ ಸಮೀಪಿಸಿರುವ ಹೊಸ್ತಿಲಲ್ಲಿ ವಾಣಿವಿಲಾಸ ಜಲಾಶಯದ ಕೋಡಿಯನ್ನು ಇಳಿಸುವ ಪ್ರಸ್ತಾವ ಸರಿಯಲ್ಲ ಎಂದು ಶಾಸಕಿ ಪೂರ್ಣಿಮಾ ಶ್ರೀನಿವಾಸ್ ತಾಕೀತು ಮಾಡಿದ್ದಾರೆ.

ಮೈಸೂರು ಒಡೆಯರ್ ಇಚ್ಛಾಶಕ್ತಿಯ ಫಲವಾಗಿ ನಿರ್ಮಾಣಗೊಂಡಿರುವ ವಿ.ವಿ.ಸಾಗರ  ಜಲಾಶಯ ಬಯಲುಸೀಮೆಯ ಜನರ ಜಲಪಾತ್ರೆ ಇದ್ದಂತೆ. 89 ವರ್ಷದ ನಂತರ ಎರಡನೇ ಬಾರಿಗೆ ಚಡಚಣ ಜಲಾಶಯ ಕೋಡಿ ಬಿದ್ದಿದ್ದು, ಇಡೀ ಜಿಲ್ಲೆಯ ಜನ ಸಂತಸಗೊಂಡಿದ್ದಾರೆ. ಇಂತಹ ಸಂದರ್ಭದಲ್ಲಿ ಹೊಸದುರ್ಗದ ಮಾಜಿ ಶಾಸಕ ಬಿ.ಜಿ. ಗೋವಿಂದಪ್ಪ ಅವರು ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಸಮ್ಮುಖದಲ್ಲಿ ಜಲಾಶಯದ ಕೋಡಿಯನ್ನು 124 ಅಡಿಗೆ ಇಳಿಸಬೇಕೆಂಬ ಪ್ರಸ್ತಾವ ಇಟ್ಟಿರುವುದು ಖಂಡನೀಯ ಎಂದು ಶಾಸಕರು ತಿಳಿಸಿದರು.

ಜಲಾಶಯ ನಿರ್ಮಾಣದಿಂದ 32 ಹಳ್ಳಿಗಳು ಜಮೀನು ಸಹಿತ ಮುಳುಗಡೆಯಾಗಿದ್ದರೆ, 18 ಹಳ್ಳಿಗಳು ಭಾಗಶ: ಮುಳುಗಡೆಯಾಗಿತ್ತು. ಜಲಾಶಯ ನಿರ್ಮಿಸುವ ಮೊದಲು, ಅಚ್ಚು ಕಟ್ಟು ಪ್ರದೇಶ, ಕೋಡಿ ಬಿದ್ದಲ್ಲಿ ಮುಳುಗಡೆಯಾಗುವ ಹಿನ್ನೀರಿನ ಪ್ರದೇಶ, ಗಡಿಗಳನ್ನು ಕರಾರುವಕ್ಕಾಗಿ ಗುರುತಿಸಲಾಗಿದೆ. ಹಿನ್ನೀರು ಹೆಚ್ಚಿರುವ ಕಾರಣಕ್ಕೆ ಸಂತ್ರಸ್ತರಾದವರಿಗೆ ಸರ್ಕಾರದಿಂದ ಪರಿಹಾರ ಕೊಡಿಸುವ ಹಾಗೂ ಪರ್ಯಾಯ ಭೂಮಿ ಕೊಡಿಸುವ ವಿಚಾರಕ್ಕೆ ನನ್ನ ಸಹಮತವಿದೆ. ಆದರೆ ಜಲಾಶಯದ ಕೋಡಿ ಇಳಿಸುವ ಮೂಲಕ ಸಂತ್ರಸ್ತರ ರಕ್ಷಣೆ ಮಾಡುತ್ತೇವೆಂಬ ಮತಬ್ಯಾಂಕ್ ರಾಜಕೀಯಕ್ಕೆ ತೀವ್ರ ವಿರೋಧವಿದೆ ಎಂದು ತಿಳಿಸಿದರು.

[t4b-ticker]

You May Also Like

More From Author

+ There are no comments

Add yours