ಮಾಜಿ ಶಾಸಕ ಗೋವಿಂದಪ್ಪ ನಡೆಗೆ ರೈತ ಸಂಘ ಅಸಮಾಧಾನ

 

ಹಿರಿಯೂರು: ದಿನಾಂಕ 26 .10 .22 ರಂದು ಹಿರಿಯೂರು ತಾಲೂಕು ಆರನಕಟ್ಟೆ ಗ್ರಾಮದ ಗಣೇಶ ದೇವಸ್ಥಾನದ ಬಳಿ ವಾಣಿವಿಲಾಸ ಜಲಾಶಯದ ಅಚ್ಚುಕಟ್ಟು ಪ್ರದೇಶದ ರೈತರು ಸಭೆ ಸೇರಿ.ಹೊಸದುರ್ಗ ಮಾಜಿ ಶಾಸಕರಾದ ಬಿ.ಜಿ. ಗೋವಿಂದಪ್ಪನವರು ತಮ್ಮ ಹುಟ್ಟುಹಬ್ಬ ಆಚರಿಸಿಕೊಳ್ಳುವ ಕಾರ್ಯಕ್ರಮದಲ್ಲಿ ವಾಣಿವಿಲಾಸ ಸಾಗರ ಜಲಾಶಯದ ಕೋಡಿಯನ್ನು 124 ಅಡಿಗೆ ಇಳಿಸುವ ಬಗ್ಗೆ ಪ್ರಸ್ತಾವನೆ ಮಾಡಿರುತ್ತಾರೆ.ಇದನ್ನು ರೈತರು ಸಭೆ ಮಾಡಿ ಉಗ್ರವಾಗಿ ಖಂಡಿಸಿರುತ್ತಾರೆ.
ಈ ಸಂದರ್ಭದಲ್ಲಿ ಮಾತನಾಡಿದ ವಾಣಿ ವಿಲಾಸ ಸಾಗರ ಹೋರಾಟ ಸಮಿತಿಯ ಸಂಚಾಲಕರು, ರೈತ ಹೋರಾಟಗಾರಾದ ಆರನಕಟ್ಟೆ ಶಿವಕುಮಾರ್ ರವರು ನೀರಾವರಿ ಹೋರಾಟ ಇತಿಹಾಸ ತಿಳಿಸುತ್ತಾ, ವಾಣಿ ವಿಲಾಸ ಸಾಗರ ಜಲಾಶಯಕ್ಕೆ ನೀರು ಹರಿಸಲು ಸಾಕಷ್ಟು ಹೋರಾಟ ನಡೆಸಲಾಗಿದೆ ಎಂದು ಹೇಳುತ್ತಾ ವಿ.ವಿ ಸಾಗರಕ್ಕೆ ನೀರು ಸಮೃದ್ಧಿಯಾಗಿ ಬಂದಿರುವ ಈ ಸಂದರ್ಭದಲ್ಲಿ ಹಿರಿಯರಾದ ಹೊಸದುರ್ಗ ಮಾಜಿ ಶಾಸಕರಾದ ಬಿ, ಜೆ, ಗೋವಿಂದಪ್ಪರವರು ವಾಣಿವಿಲಾಸ ಸಾಗರ ಕೋಡಿ ತಗ್ಗಿಸುವ ಹೇಳಿಕೆಯನ್ನು
ಈ ಸಭೆ ತೀರ್ವವಾಗಿ ಖಂಡಿಸುತ್ತದೆ ಎಂದು ಹೇಳಿದರು.ಆ ಸಭೆಯಲ್ಲಿ ಸಭೆಯಲ್ಲಿ ನಮ್ಮ ಕ್ಷೇತ್ರದ ಮಾಜಿ ಸಂಸದರು ಶಾಸಕರು ಕೂಡ ಭಾಗಿಯಾಗಿದ್ದು ಅವರು ಮೌನ ವಹಿಸಿದ್ದು ಒಂದು ದುರಂತ ಎಂದು ಹೇಳಿದರು
.ಮುಂದುವರೆದು ಈ ವಿಷಯವಾಗಿ ವಾಣಿವಿಲಾಸ ಅಚ್ಚುಕಟ್ಟು ಪ್ರದೇಶದಲ್ಲಿ ಈ ಹೇಳಿಕೆ ಖಂಡಿಸಲು ಸಾಕಷ್ಟು ಹೋರಾಟ ಅವಶ್ಯಕತೆ ಇದ್ದು ವಾಣಿ ವಿಲಾಸ ಅಚ್ಚುಕಟ್ಟು ಪ್ರದೇಶದ ಎಲ್ಲಾ ಹಳ್ಳಿಗಳಲ್ಲಿ ಹೋರಾಟ ವನ್ನು ನಡೆಸಬೇಕು ಎಂದು ಕರೆ ನೀಡಿದರು.
ವಾಣಿ ವಿಲಾಸ ಸಾಗರ ನೀರಾವರಿ ಹೋರಾಟ ಸಮಿತಿ ನಿರ್ದೇಶಕರಾದ ಪಿಟ್ಲಾಲಿ ಶ್ರೀನಿವಾಸ್ ಮಾತನಾಡಿ ಮಾಜಿ ಶಾಸಕರು ಈ ವಿಚಾರವಾಗಿ ಒಂದು ಹೇಳಿಕೆಯನ್ನು ನೀಡಿಲ್ಲ.ಇದು ಕ್ಷೇತ್ರದ ಬಗ್ಗೆ ಅವರು ಯಾವ ರೀತಿಯ ಧೋರಣೆ ತಾಳಿದ್ದಾರೆ ಎಂದು ತಿಳಿಸುತ್ತದೆ ಎಂದು ಹೇಳಿದರು.ಮುಂದುವರೆದು ಮಾತನಾಡಿ ಹಾಲಿ ಶಾಸಕರಾದ ಶ್ರೀಮತಿ ಪೂರ್ಣಿಮಾ ಶ್ರೀನಿವಾಸ್ ರವರು ವಿದೇಶಿ ಪ್ರವಾಸದಲ್ಲಿದ್ದರೂ ಅವರು ಕ್ಷೇತ್ರದ ಪರವಾಗಿ ಪತ್ರಿಕೆ ಹೇಳಿಕೆ ನೀಡಿ ರಾಜಕೀಯ ಕಾರಣಕ್ಕಾಗಿ ವಾಣಿ ವಿಲಾಸ ಸಾಗರ ಅಣೆಕಟ್ಟೆಯ ವಿಷಯ ಬಳಸಿಕೊಳ್ಳಬೇಡಿ ಎಂದು ಹೇಳಿಕೆ ನೀಡಿರುವುದನ್ನು ನೋಡಿದರೆ ಹಾಲಿ ಶಾಸಕರಿಗೆ ಕ್ಷೇತ್ರದ ಮೇಲೆ ಇರುವ ಬದ್ದತೆ ತೋರಿಸುತ್ತದೆ. ಎಂದು ಹೇಳಿದರು.ಆರನಕಟ್ಟೆ ಗ್ರಾಮದ ಗಣೇಶ್ ರವರು ಮಾತನಾಡಿ ತಾಲ್ಲೋಕಿನ ಎಲ್ಲಾ ಗ್ರಾಮಗಳಿಗೆ ಕುಡಿಯುವ ನೀರಿನ ಯೋಜನೆಗೆ ಹಾಗೂ ನೀರಾವರಿ ಯೋಜನೆಗೆ ಸಾಕಷ್ಟು ನೀರಿನ ಅವಶ್ಯಕತೆ ಇದೆ. ಯಾವುದೇ ಕಾರಣಕ್ಕೂ ಕೋಡಿ ತಗ್ಗಿಸಲು ವಾಣಿವಿಲಾಸ ಅಚ್ಚುಕಟ್ಟು ಪ್ರದೇಶದ ರೈತರು ನಾವು ಬಿಡುವುದಿಲ್ಲ.ಪ್ರತಿ ಹಳ್ಳಿಹಳ್ಳಿಗಳಲ್ಲಿ ಹೋರಾಟ ಮಾಡಲು ನಾವೆಲ್ಲಾ ಸಿದ್ದ ಎಂದು ಹೇಳಿದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರಾದ ಜಗದೀಶ್,ಜೆ.ಕೃಷ್ಣ ರೈತ ಮುಖಂಡರಾದ ಎನ್. ಶಿವಕುಮಾರ್,ಎಸ್ ಕೆ ಗೌಡ್ರು ಮುತ್ತುಸ್ವಾಮಿ ,ಸಮುದ್ರದ ಹಳ್ಳಿ ಲೋಕಣ್ಣ ,ಶಿವಪುರ ತಿಪ್ಪೇಸ್ವಾಮಿ ,ಆರನಕಟ್ಟೆ ಮಂಜುನಾಥ್ ಚಲುವರಾಜ್ ಮೋಹನ್ ರಾಜ್, ರಾಜೇಂದ್ರನ್ ,ವಡಿವೇಲ್
ರಂಗನಾಥ ಪುರ ತಿಮ್ಮಣ್ಣ ರವಿಯಣ್ಣ ಮೋಹನ್ ಗೌಡ್ರು ತಿಮ್ಮರಾಜು.ರಂಗಸ್ವಾಮಿ. ಇಕ್ಕನೂರು ರಾಮಚಂದ್ರ ಮ್ಯಾದನಹೊಳೆ ವೀರಭದ್ರ ಸಾಮಾಜಿಕ ಕಾರ್ಯಕರ್ತ ರಾಮಚಂದ್ರ ಕಸವನಹಳ್ಳಿ ದೇವರಾಜ ನಾಗಣ್ಣ.ಯುವಕರಾದ ರಘುನಂದನ್ ಮಣಿ ಮಾರ್ಕಂಡನ್ ,ಹರ್ಷ ಶ್ರೀನಿವಾಸ್, ಹರೀಶ್ ,ಸುಬ್ರಮಣ್ಯಂ
,ವಡಿವೇಲು, ಸುಭಾಷ್ ,ನವೀನ್,ಕರ್ಣ,ಶಶಿ,ದೀಲೀಪ್,ಮನೋಜ್,ಪುರುಷೋತ್ತಮ,ರಾಜು.ವಿಷ್ಣು ,ಗುಣ,ರಕ್ಷಿತ್,ಸುನೀಲ್,ಪ್ರವೀಣ್,
ಮಿಥುನ್, ಮೊದಲಾದವರು ಭಾಗವಹಿಸಿದ್ದರು.

[t4b-ticker]

You May Also Like

More From Author

+ There are no comments

Add yours