ರಾಷ್ಟೀಯ ನಾಟಕೋತ್ಸವ ಜನರ ಬದುಕು ಬದಲಿಸುತ್ತದೆ: :ಟಿ.ರಘುಮೂರ್ತಿ 

 

ಹೊಸದುರ್ಗ:ಸಾಣೇಹಳ್ಳಿ ( sanehalli) ಮಠದಲ್ಲಿ ರಾಷ್ಟ್ರೀಯ ನಾಟಕೋತ್ಸವ ನಾಟಕದ ಮೂಲಕ ಜನರಿಗೆ ಆತ್ಮವಿಶ್ವಾಸ ಮೂಡಿಸುವ ಜೊತೆಗೆ ಬದುಕಿನಲ್ಲಿ ಬದಲಾವಣೆ ತರುವ ಕೆಲಸ ಮಾಡುತ್ತದೆ ಎಂದು ಶಾಸಕ ಟಿ.ರಘುಮೂರ್ತಿ ಬಣ್ಣಿಸಿದರು‌.
ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕಿನ ಸಾಣೇಹಳ್ಳಿಯಲ್ಲಿ ಆರಂಭಗೊಂಡಿರುವ ರಾಷ್ಟ್ರೀಯ ನಾಟಕೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು‌.
ಸಾಣೇಹಳ್ಳಿ ಸುಕ್ಷೇತ್ರ ಒಂದು ವಿಶಿಷ್ಠವಾದ ಕ್ಷೇತ್ರವಾಗಿದೆ. ಸಾಣೇಹಳ್ಳಿ ಮಠದ  ಸ್ವಾಮೀಜಿಯವರು ಆಯುಧಗಳ ಮೊಣಚಿದಾಗ ಸಾಣೆ ಹಿಡಿಯುವ ರೀತಿ ಸಮಾಜದಲ್ಲಿನ ತಪ್ಪುಗಳನ್ನು  ಎತ್ತಿ ಹಿಡಿಯುವ ಕೆಲಸ ಸ್ವಾಮೀಜಿ ಮಾಡುತ್ತಾರೆ.ಆಧಾತ್ಮ, ಮೌಢ್ಯ ವೈಚಾರಿಕತೆ ಬಗ್ಗೆ ತಮ್ಮದೇ ಆದ  ಇಚ್ಚಾಶಕ್ತಿ  ಸ್ವಾಮೀಜಿ  ಹೊಂದಿದ್ದಾರೆ. ಸಮಾಜದಲ್ಲಿ ಅನೇಕ ಸಮಸ್ಯೆಗಳು ನಮ್ಮ ಕಣ್ಣ ಮುಂದೆ ಇದ್ದು ಆದರ ಬಗ್ಗೆ ಹೆಚ್ಚು ಜನರು ಗಮನ ಹರಿಸು ಆಗದೇ ಇರುವ ಸಮಸ್ಯೆಗಳಿಗೆ ಸಾಣೆ ಹಿಡಿಯುವ ಕೆಲಸ ಸ್ವಾಮೀಜಿ ಅವರು ನಿರಂತವಾಗಿ ಮಾಡುತ್ತ ಬಂದಿದ್ದು ಸಾಕಷ್ಟು ಸುಧಾರಣೆಗಳು ಸಹ ಆಗಿವೆ ಎಂದರು‌.
ಜನರಿಗೆ ನಾಟಕದ ಮಹತ್ವ ತಿಳಿದಿಲ್ಲ.ಆದರೆ ಸಾಣೇಹಳ್ಳಿಯಲ್ಲಿ ನಡೆಯುವ  ರಾಷ್ಟ್ರೀಯ ನಾಟಕೋತ್ಸವದ ಮೂಲಕ ಸಮಾಜದ ವ್ಯವಸ್ಥೆ ತಿದ್ದುವ ಕೆಲಸ ಸ್ವಾಮೀಜಿ  ಮಾಡುತ್ತಿದ್ದಾರೆ. ಪ್ರತಿ  ನಿತ್ಯವು ನಾಟಕದ ನಡೆಯುವ ಪ್ರತಿ ದೃಶ್ಯಗಳಲ್ಲಿ  ಸಮಾಜಕ್ಕೆ ಒಂದು ಉತ್ತಮ ಸಂದೇಶವನ್ನು ನೀಡುವ ಕೆಲಸ ಪರಿಣಾಮಕಾರಿಯಾಗಿ ಆಗುತ್ತಿರುವುದು ನನಗೆ ಸಂತಸ ತಂದಿದೆ.
ಪ್ರಸ್ತುತ ಕಾರ್ಯಾಂಗ, ನ್ಯಾಯಾಂಗ, ಶಾಸಕಾಂಗ, ಪತ್ರಿಕಾರಂಗದ ಬಗ್ಗೆ ನಿರ್ಭಿತಿಯಿಂದ ಮಾತನಾಡಿ ಏನೇ ಇದ್ದರು ನೇರವಾಗಿ ಸ್ವಾಮೀಜಿಗಳು ತಿಳಿಸುವ ಕೆಲಸ ಮಾಡುತ್ತಾರೆ.
ಸಾಣೇಹಳ್ಳಿ  ಮಠದಲ್ಲಿ ಜ್ಞಾನ ದಾಸೋಹ, ಅನ್ನದಾಸೋಹ ಮಾಡಿಕೊಂಡು ಮಕ್ಕಳ ಭವಿಷ್ಯಕ್ಕೆ ಭದ್ರಾ ಬುನಾದಿ ಹಾಕುತ್ತ ಬರುತ್ತಿದೆ. ಸ್ವಾಮೀಜಿ ಅವರು ಸರ್ಕಾರಕ್ಕೆ ಮತ್ತು ಯಾವುದೆ ವ್ಯಕ್ತಿಗಳಿಗೆ ನೇರವಾಗಿ ತಮ್ಮ ಕೃತಿಗಳು ಮತ್ತು ಬರವಣಿಗೆಯ ಮೂಲಕ‌ ಮುಚ್ಚುಮರೆಯಿಲ್ಲದ ತಿಳಿಸುತ್ತಾರೆ. 
ಕಳೆದ ಎರಡು ವರ್ಷಗಳ ಹಿಂದೆ ಇದೇ ವೇದಿಕೆಯಲ್ಲಿ
ಮದ್ಯಪಾನ ಮಾಡುವುದರಿಂದ ಆಗುವ ದುಷ್ಪರಿಣಾಮ ಕುರಿತು ಅರಿವು ಮೂಡಿಸುವ ಕೆಲಸವನ್ನು ನಿರಂತರವಾಗಿ ಸ್ವಾಮೀಜಿ ಮಾಡುತ್ತಿದ್ದಾರೆ. ನಾನು ಚಳ್ಳಕೆರೆ ಕ್ಷೇತ್ರದಲ್ಲಿ 2013 ರಿಂದ ಇಲ್ಲಿಯವೆರೆಗೂ ಒಂದು ಸಹ ಹೊಸ ಮದ್ಯದ ಅಂಗಡಿ ಮಾಡಲು ಬಿಡದೇ ಪ್ರಮಾಣಿಕ ಕೆಲಸ ಮಾಡುತ್ತಾನೆ. ನಾನು ಶಾಸಕರಾಗಿ ಇರುವ ತನಕ ಹೊಸ ಮದ್ಯದ ಅಂಗಡಿ ಮಾಡಲು ಬಿಡುವುದಿಲ್ಲ. ರಾಜಕೀಯ ಬರುತ್ತದೆ. ಹೋಗುತ್ತದೆ ಆದರೆ ನಮ್ಮ ಕಾಲದಲ್ಲಿ ಸಮಾಜಕ್ಕೆ ಕೈಲಾದಷ್ಟು ಉತ್ತಮ‌ ಕೆಲಸ ಮಾಡಬೇಕು ಎಂದು ಹೇಳಿದರು‌.
ಕಾರ್ಯಕ್ರಮದಲ್ಲಿ ಹೊಸದುರ್ಗ ಸಾಣೇಹಳ್ಳಿ ಡಾ. ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಪ್ರೋ.ಬಿ.ಜೆ.ಗಿರೀಶ್, ಮೈಸೂರಿನ  ಜ್ಞಾನ ಪ್ರಕಾಶ್ ಸ್ವಾಮೀಜಿ, ಬಸವನಾಗಿದೇವಸ್ವಾಮೀಜಿ, ಉಪನ್ಯಾಸಕ ನಟರಾಜ್ ಹುಳಿಯಾರ್, ಹಿರೇಕೆರೂರು ಶಾಸಕ ಯು.ಬಿ‌.ಬಾಣಕಾರ್, ಚಿತ್ರದುರ್ಗ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಧರ್ಮೇಂದ್ರ ಕುಮಾರ್ ಮೀನಾ ಸೇರಿ ಅನೇಕ ಗಣ್ಯರು ಭಾಗವಹಿಸಿದ್ದರು.

ಬಾಕ್ಸ್

ಚಳ್ಳಕೆರೆ ಕ್ಷೇತ್ರದಲ್ಲಿ 2013 ರಿಂದ ಹೊಸ ಮದ್ಯದ ಅಂಗಡಿ ಮಾಡಲು ಬಿಟ್ಟಿಲ್ಲ. ಮುಂದೆ ಸಹ ಬಿಡುವುದಿಲ್ಲ. ರಾಜಕೀಯ ಒತ್ತಡಕ್ಕೆ ಮಣಿಯುವುದಿಲ್ಲ. ನನಗೆ ರಾಜಕೀಯಕ್ಕಿಂತ ಜನರ ಬದುಕು ಮುಖ್ಯ.

ಟಿ.ರಘುಮೂರ್ತಿ 

ಶಾಸಕರು ಚಳ್ಳಕೆರೆ ಕ್ಷೇತ್ರ 

[t4b-ticker]

You May Also Like

More From Author

+ There are no comments

Add yours