ಎನ್.ದೇವರಹಳ್ಳಿ ಗ್ರಾ.ಪಂ. ವ್ಯಾಪ್ತಿಯ ಎಲ್ಲಾ ಹಳ್ಳಿಗಳು ಸಮಸ್ಯೆ ಮುಕ್ತ ಮಾಡಲು ಕ್ರಮ:ಎನ್.ರಘುಮೂರ್ತಿ

 

ಚಳ್ಳಕೆರೆ:   ಎನ್ ದೇವನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆರು ಗ್ರಾಮಗಳು ಕಂದಾಯ ಇಲಾಖೆಯ ವತಿಯಿಂದ  ಸಮಸ್ಯೆ ಮುಕ್ತ ಗ್ರಾಮಗಳನ್ನಾಗಿ ಘೋಷಣೆ ಮಾಡಲು ಕ್ರಮ ಕೈಗೊಳ್ಳಲಾಗಿದೆ ಎಂದು ತಹಶೀಲ್ದಾರ್  ಎನ್ .ರಘುಮೂರ್ತಿ ಹೇಳಿದರು.

ಅವರು ಇಂದು ಎನ್ ದೇವರಹಳ್ಳಿ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ಪಂಚಾಯಿತಿ ಅಧ್ಯಕ್ಷರು ಉಪಾಧ್ಯಕ್ಷರು ಮತ್ತು ಸದಸ್ಯರುಗಳೊಂದಿಗೆ ಪಂಚಾಯ್ತಿ ವ್ಯಾಪ್ತಿಯ ಹಳ್ಳಿಗಳಲ್ಲಿರುವಂತಹ ಸಮಸ್ಯೆಗಳನ್ನು ಕುರಿತಾದ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿ ಈಗಾಗಲೇ ನಾಯಕನಹಟ್ಟಿ ಹೋಬಳಿಯ ಗೌಡಗೆರೆ ನೇರಲಕುಂಟೆ ಎನ್ ಮಹದೇವಪುರ ಮಲ್ಲೂರಹಳ್ಳಿ ಅಬ್ಬೇನಹಳ್ಳಿ 32 ಹಳ್ಳಿಗಳನ್ನು ಕಂದಾಯ ಇಲಾಖೆಯ ಸಮಸ್ಯೆ ಮುಕ್ತ ಗ್ರಾಮಗಳನ್ನಾಗಿ ಮಾಡಲಾಗಿದೆ ಈಗ ಈ ಸಾಲಿಗೆ ಎನ್ ದೇವರಲ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ 6 ಹಳ್ಳಿಗಳು ಸೇರ್ಪಡೆಯಾಗಲಿವೆ ಈ ಗ್ರಾಮಗಳಲ್ಲಿ ರೈತರು ಮತ್ತು ಸಾರ್ವಜನಿಕರ ಬೌತಿ ಖಾತೆ ಜಮೀನಿನ ಪೋಡಿ ಕೆಲಸ ಸಾಮಾಜಿಕ ಭದ್ರತಾ ಪಿಂಚಣಿಗಳು ದಾರಿ ವಿವಾದಗಳು ಸ್ಮಶಾನ ಒತ್ತುವರಿ ಸಮಸ್ಯೆಗಳು ರೈತರ ಪರಿಹಾರಕ್ಕೆ ಸಂಬಂಧಿಸಿದ ಸಮಸ್ಯೆಗಳು ಇನ್ನು ಹತ್ತು ಹಲವು ಕಂದಾಯ ಇಲಾಖೆಯ ಸಮಸ್ಯೆಗಳನ್ನು ಬಗೆಹರಿಸಲಾಗಿದೆ ಪಂಚಾಯಿತಿಯ ಅಧ್ಯಕ್ಷರು ಉಪಾಧ್ಯಕ್ಷರು ಮತ್ತು ಸದಸ್ಯರುಗಳು ತಮ್ಮ ವ್ಯಾಪ್ತಿಯಲ್ಲಿ ಬರುವಂತಹ ಸಾರ್ವಜನಿಕರ ಯಾವುದಾದರೂ ಕಂದಾಯ ಇಲಾಖೆಯ ಸಮಸ್ಯೆಗಳಿದ್ದಲ್ಲಿ ತಕ್ಷಣ ಕಂದಾಯ ಇಲಾಖೆಯ ಗಮನಕ್ಕೆ ತರುವುದು ಸರ್ಕಾರಿ ವ್ಯವಸ್ಥೆಯ ಮೇಲೆ ಸಾರ್ವಜನಿಕರಿಗೆ ನಂಬಿಕೆ ಹಾಗೂ ಅಭಿಮಾನ ಮೂಡು ಹಾಗೆ ಕರ್ತವ್ಯ ನಿರ್ವಹಿಸುವುದು ನಮ್ಮೆಲ್ಲ ಅಧಿಕಾರಿಗಳು ಹಾಗೂ ಚುನಾಯಿತ ಪ್ರತಿನಿಧಿಗಳಾದ ಗ್ರಾಮ ಪಂಚಾಯಿತಿ ಸದಸ್ಯರುಗಳ ಮೇಲಿದೆ ಈ ನಿಟ್ಟಿನಲ್ಲಿ ಒಂದು ಗ್ರಾಮ ಪಂಚಾಯಿತಿ ತಾಲೂಕಿಗೆ ಮಾದರಿ ಗ್ರಾಮ ಪಂಚಾಯತಿಯಾಗಿ ಹೊರಹೊಮ್ಮಬೇಕು ಈ ನಿಟ್ಟಿನಲ್ಲಿ ಎಲ್ಲರೂ ಕೂಡ ಕಂಕಣ ಕೈಗೊಳ್ಳಬೇಕೆಂದು ಮನವಿ ಮಾಡಿದರು ಇದೇ ಸಂದರ್ಭದಲ್ಲಿ ಪಂಚಾಯತಿ ಅಧ್ಯಕ್ಷರಾದ ಡಾಕ್ಟರ್ ಕಾಟಂ ಲಿಂಗಯ್ಯ ಮಾತನಾಡಿ ಇನ್ನು ಯಾವುದಾದರೂ ಸಮಸ್ಯೆಗಳಿದ್ದಲ್ಲಿ ಇದೊಂದು ಸದಾವಕಾಶ ಪಂಚಾಯಿತಿ ಸದಸ್ಯರುಗಳು ಮುಕ್ತ ಮನಸ್ಸಿನಿಂದ ಕಂದಾಯ ಇಲಾಖೆ ಗಮನಕ್ಕೆ ತಂದು ಸಮಸ್ಯೆಗಳನ್ನು ಇತ್ಯರ್ಥಗೊಳಿಸಬೇಕೆಂದು ಮನವಿ ಮಾಡಿದರು.

[t4b-ticker]

You May Also Like

More From Author

+ There are no comments

Add yours