ಜನವರಿ 10 ರಂದು ಸಂಗೀತ ಸಾಂಸ್ಕøತಿಕ ಉತ್ಸವ

 

ಚಿತ್ರದುರ್ಗ: ಕಾರಂಜಿ ಕಲ್ಚರಲ್ ಟ್ರಸ್ಟ್ ಮದಕರಿಪುರ, ಕರ್ನಾಟಕ ಗಡಿ ಪ್ರದೇಶ ಅಭಿವೃದ್ದಿ ಪ್ರಾಧಿಕಾರ ಬೆಂಗಳೂರು ಇವರ ಸಹಯೋಗದೊಂದಿಗೆ 75 ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ಸವಿನೆನಪಿಗಾಗಿ ಸಂಗೀತ ಸಾಂಸ್ಕøತಿಕ ಉತ್ಸವ ಜ.10 ರ ಇಂದು ಬೆಳಿಗ್ಗೆ 11 ಕ್ಕೆ ಹಿರಿಯೂರು ತಾಲ್ಲೂಕಿನ ಹಿಂಡಸಕಟ್ಟೆಯಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ನಡೆಯಲಿದೆ.

ಹಿಂಡಸಗಟ್ಟೆ ಗ್ರಾಮದ ಮುಖಂಡ ಪೂಜಾರ್ ಮುಸಿಯಪ್ಪ ಸಂಗೀತ ಸಾಂಸ್ಕøತಿಕ ಉತ್ಸವ ಉದ್ಗಾಟಿಸುವರು.
ಮುಖ್ಯ ಶಿಕ್ಷಕ ಮಾನೇಶ್ ನಾಯಕ್ ಅಧ್ಯಕ್ಷತೆ ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಎಸ್.ಕೆ.ಮಲ್ಲಿಕಾರ್ಜುನ್, ಎಸ್.ಡಿ.ಎಂ.ಸಿ.ಅಧ್ಯಕ್ಷ ಸಣ್ಣಕರಿಯಪ್ಪ, ಉಪಾಧ್ಯಕ್ಷ ಚನ್ನಕೇಶವ, ಗ್ರಾಮ ಪಂಚಾಯಿತಿ ಸದಸ್ಯರುಗಳಾದ ಶ್ರೀಮತಿ ಪುಷ್ಪಲತ ಉಮೇಶ್, ಶ್ರೀಮತಿ ವಿಜಯಮ್ಮ ಕೃಷ್ಣಪ್ಪಸ್ವಾಮಿ, ಸಣ್ಣಕರಿಯಪ್ಪ, ಲೋಕೇಶ್, ಶಿಕ್ಷಕರುಗಳಾದ ಶ್ರೀಮತಿ ಚಂದ್ರಕಲಾ, ಶ್ರೀಮತಿ ನಾಗರತ್ನ, ಶ್ರೀಮತಿ ಭಾಗ್ಯ, ಶ್ರೀಮತಿ ಶೈಲಜ ಇವರುಗಳು ಆಗಮಿಸಲಿದ್ದಾರೆ.

ಚಿತ್ರದುರ್ಗ: ಸರ್ಕಾರಿ ವಿಜ್ಞಾನ ಕಾಲೇಜು ಮೈದಾನದಲ್ಲಿ ಭಾನುವಾರ ನಡೆದ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಪರಿಶಿಷ್ಟ ಜಾತಿ, ಪರಿಶಿಷ್ಠ ಪಂಗಡದ ಐಕ್ಯತಾ ಸಮಾವೇಶದಲ್ಲಿ ಕಾಂಗ್ರೆಸ್ ಸೇವಾದಳದ ಕಾರ್ಯಕರ್ತರು ಹೊಳಲ್ಕೆರೆ ರಸ್ತೆಯಲ್ಲಿರುವ ಕನಕ ವೃತ್ತದಿಂದ ಪಾದಯಾತ್ರೆ ನಡೆಸಿದರು.
ಪಕ್ಷದ ಭಾವುಟಗಳನ್ನಿಡಿದು ಶಿಸ್ತಿನಿಂದ ಪಾದಯಾತ್ರೆ ಮೆರವಣಿಗೆ ಹೊರಟ ಸೇವಾದಳದವರು ಕನಕ ಪ್ರತಿಮೆ, ಸಂಗೊಳ್ಳಿರಾಯಣ್ಣ ಪ್ರತಿಮೆ, ಒನಕೆ ಓಬವ್ವ, ಅಂಬೇಡ್ಕರ್, ಮದಕರಿನಾಯಕನ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಸಮಾವೇಶದ ಸ್ಥಳಕ್ಕೆ ತೆರಳಿದರು.
ಕಾಂಗ್ರೆಸ್ ಸೇವಾದಳದ ರಾಜ್ಯಾಧ್ಯಕ್ಷ ಎಂ.ರಾಮಚಂದ್ರಪ್ಪ, ಜಿಲ್ಲಾಧ್ಯಕ್ಷ ಎಲ್.ಭೂತೇಶ್, ಉಪಾಧ್ಯಕ್ಷ ವಿನಾಯಕ್‍ಮೂರ್ತಿ, ರಮೇಶ್, ಸೇವಾದಳ ಮಹಿಳಾ ವಿಭಾಗದ ಅಧ್ಯಕ್ಷೆ ಇಂದಿರಾ, ಹರ್ಷಿದಭಾನು, ರಾಧ, ಸೈಫುಲ್ಲಾ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಕೆ.ತಾಜ್‍ಪೀರ್ ಹಾಗೂ ಸೇವಾದಳದ ಪದಾಧಿಕಾರಿಗಳು ಪಾದಯಾತ್ರೆಯಲ್ಲಿದ್ದರು.

[t4b-ticker]

You May Also Like

More From Author

+ There are no comments

Add yours