ನಾಯಕನಹಟ್ಟಿ ತಿಪ್ಪೇಶನ ಮುಕ್ತಿ ಬಾವುಟ 61 ಲಕ್ಷಕ್ಕೆ ಹರಾಜು

 

ಚಿತ್ರದುರ್ಗ: ಮಧ್ಯ ಕರ್ನಾಟಕದ ಬುಡಕಟ್ಟು ಜನರ ಆರಾಧ್ಯದೈವ. ಎಂಬ ಖ್ಯಾತಿಯನ್ನು ಪಡೆದುಕೊಂಡಿರುವ ನಾಯಕನಹಟ್ಟಿ ತಿಪ್ಪೇರುದ್ರಸ್ವಾಮಿ ಜಾತ್ರಾ ಮಹೋತ್ಸವ ಸಂಭ್ರಮ ಸಡಗರದ ಜನಸಾಗರದಲ್ಲಿ ನಡುವೆ ಜರುಗಿತು.

ಜಿಲ್ಲೆಯಲ್ಲಿ ಬರದ ಕಾರ್ಮೋಡ ಆವರಿಸಿದ್ದರು ಸಹ ಲಕ್ಷಾಂತರ ಭಕ್ತರು ಜಾತ್ರೆಯಲ್ಲಿ ಭಾಗವಹಿಸಿ ಸಮೃದ್ಧ, ಮಳೆ ಮತ್ತು ಬೆಳೆ ನೀಡಲೆಂದು ಶ್ರೀ ಗುರು ತಿಪ್ಪೇರುದ್ರಸ್ವಾಮಿ ಕೈ ಮುಗಿದು ಪ್ರಾರ್ಥಿಸಿದರು.

ಪ್ರತಿ ವರ್ಷದಂತೆ ಈ‌ ವರ್ಷ ಸಹ ಜಾತ್ರೆಯಲ್ಲಿ ಪ್ರಮುಖ ಆಕರ್ಷಣೆಯಾಗಿರುವ ಮುಕ್ತಿ ಭಾವುಟಕ್ಕೆ ಸಾಕಷ್ಟು ಪೈಪೋಟಿ ನಡೆಯಿತು. ಪ್ರತಿ ವರ್ಷವೂ ಮುಕ್ತಿ ಭಾವುಟವನ್ನು ಯಾರು, ಎಷ್ಟು ಮೊತ್ತಕ್ಕೆ ಹರಾಜಿನಲ್ಲಿ ಪಡೆದುಕೊಳ್ಳಬಹುದು ಎಂಬ ಕುತೂಹಲ ಭಕ್ತರಲ್ಲಿತ್ತು. ಅದರಂತೆ ಈ ಬಾರಿ ಈ ವರ್ಷ 2024ರಲ್ಲಿ ನಡೆದ ಶ್ರೀ ನಾಯಕನಹಟ್ಟಿ ತಿಪ್ಪೇರುದ್ರಸ್ವಾಮಿ ಮಾತ್ರೆಯ ಮುಕ್ತಿ ಭಾವಟ ಬರೋಬ್ಬರಿ 61 ಲಕ್ಷ ರೂ.ಗಳಿಗೆ ಹರಾಜಾಯಿತು.

ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವರಾದ ಡಿ.ಸುಧಾಕರ್ 61 ಲಕ್ಷ ರೂ.ಗಳಿಗೆ ಮುಕ್ತಿ ಭಾವುಟವನ್ನು ಹರಾಜಿನಲ್ಲಿ ಪಡೆದುಕೊಂಡಿದ್ದಾರೆ.

ವಿಶೇಷವೆಂದರೆ ಕಳೆದ ವರ್ಷ ಕೂಡಾ ಸಚಿವ ಡಿ.ಸುಧಾಕರ್ 55 ಲಕ್ಷ ರೂ.ಗಳಿಗೆ ಮುಕ್ತಿ ಭಾವುಟವನ್ನು ಹರಾಜಿನಲ್ಲಿ ಪಡೆದುಕೊಂಡಿದ್ದರು.

ಮುಕ್ತಿ ಭಾವುಟ ಹರಾಜಿನ ನಂತರ ನಾಯಕನಹಟ್ಟಿಯ ತೇರು ಬೀದಿಯಲ್ಲಿ ಶ್ರೀ ತಿಪ್ಪೇರುದ್ರಸ್ವಾಮಿಯ ಬೃಹತ್ ಗಾತ್ರದ ತೇರನ್ನು ಲಕ್ಷಾಂತರ ಭಕ್ತರು ಎಳೆದು ಪುನೀತರಾದರು. ಈ ವೇಳೆ ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ ಸೇರಿ ಹಲವರು ಜಾತ್ರೆಯಲ್ಲಿ ಭಾಗವಹಿಸಿದ್ದರು.

[t4b-ticker]

You May Also Like

More From Author

+ There are no comments

Add yours