ಚಿತ್ರದುರ್ಗ ಲೋಕಸಭೆಗೆ ಗೋವಿಂದ ಕಾರಜೋಳ ಬಿಜೆಪಿ ಅಭ್ಯರ್ಥಿ| ಮತ್ತೆ ಹೊರಗಿನ ಅಭ್ಯರ್ಥಿಗೆ ಮಣೆ ಹಾಕಿದ ಬಿಜೆಪಿ

 

ಚಿತ್ರದುರ್ಗ: ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಟಿಕೆಟ್ ಫೈನಲ್ ಆಗಿದ್ದು  ಮಾಜಿ ಸಚಿವ ಯಡಿಯೂರಪ್ಪ ಅಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಗೋವಿಂದ ಕಾರಜೋಳ ಅವರಿಗೆ ಬಿಜೆಪಿ ಟಕೆಟ್ ನೀಡುವ ಮೂಲಕ ಹೊಸ ರಾಜಕೀಯ ದಾಳ ಉರುಳಿಸಿದೆ.

ಮಾಜಿ ಸಿಎಂ ಬೊಮ್ಮಾಯಿ ಅವರ ಅವಧಿಯಲ್ಲಿ ಸಚಿವರಾಗಿ ಮತ್ತು ಯಡಿಯೂರಪ್ಪ ಅವರ ಕಾಲದಲ್ಲಿ ಡಿಸಿಎಂ ಆಗಿ ಸಹ ಕಾರ್ಯ ನಿರ್ವಹಿಸಿದ್ದರು ಆದರೆ ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಸೋಲು ಅನುಭವಿಸಿದ್ದರು.

ಆದರೆ ಪಕ್ಷ ಈಗ ಎಸ್ ಸಿ ಮೀಸಲು ಕ್ಷೇತ್ರವಾದ ಚಿತ್ರದುರ್ಗ ಲೋಕಸಭಾ ಕ್ಷೇತ್ರದಿಂದ ಟಿಕೆಟ್ ನೀಡಿದ್ದು ಚಿತ್ರದುರ್ಗ ಮೀಸಲು ಕ್ಷೇತ್ರಕ್ಕೆ ಮತ್ತೊಮ್ಮೆ ವಲಸಿಗರಿಗೆ ಟಿಕೆಟ್ ಒಲಿದಿದೆ.

ಚಿತ್ರದುರ್ಗಕ್ಕೆ ಬಿಜೆಪಿ ಪಕ್ಷದಿಂದ ಲೋಕಲ್ ಅಭ್ಯರ್ಥಿ ಟಿಕೆಟ್ ನೀಡಬೇಕು ಎಂಬ ತತ್ವದಡಿಯಲ್ಲಿ  ಹೊಳಲ್ಕೆರೆ ಶಾಸಕ ಎಂ.ಚಂದ್ರಪ್ಪ ಪುತ್ರ ಎಂ.ಸಿ.ರಘುಚಂದನ್ ಟಿಕೆಟ್ ಬಯಸಿದ್ದು ರಘುಚಂದನ್ ಗೆ ಟಿಕೆಟ್ ಪಕ್ಕ ಎಂದು ಭಾವಿಸಲಾಗಿತ್ತು.  ಇವರ ಜೊತೆಗೆ ಹಾಲಿ ಸಂಸದ ನಾರಾಯಣಸ್ವಾಮಿ, ಜನಾರ್ಧನ ಸ್ವಾಮಿ ಟಿಕೆಟ್ ಬಯಸಿದ್ದರು ಆದರೆ ಕೊನೆ ಘಳಿಗೆಯಲ್ಲಿ ಬಿಜೆಪಿ ಟಿಕೆಟ್ ಕಾರಜೋಳ ಪಾಲಾಗಿದ್ದು  ಇದನ್ನು  ಲೋಕಲ್ ಅಭ್ಯರ್ಥಿಗಳು ಯಾವ ರೀತಿ ನಿಲುವು ತೆಗೆದುಕೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

[t4b-ticker]

You May Also Like

More From Author

+ There are no comments

Add yours