ಶಾಸಕ ಟಿ.ರಘುಮೂರ್ತಿ ಗೆಲುವಿಗಾಗಿ ನಾಯಕನಹಟ್ಟಿಗೆ ಬೊಮ್ಮಕ್ಕನಹಳ್ಳಿ ಗ್ರಾಮಸ್ಥರಿಂದ ಪಾದಯಾತ್ರೆ

 

ಚಿತ್ರದುರ್ಗ: ಏ:10: ಶಾಸಕ ಟಿ.ರಘುಮೂರ್ತಿ ಅವರು ಮತ್ತೊಮ್ಮೆ ಗೆಲುವು ಸಾಧಿಸಿ ಶಾಸಕರಾಗಿ ಆಯ್ಕೆ ಆಗಬೇಕೆಂದು ಹರಕೆ ಹೊತ್ತು ಚಳ್ಳಕೆರೆ ವಿಧಾನಸಭಾ ಕ್ಷೇತ್ರದ ತುರುವನೂರು ಹೋಬಳಿಯ ಬೊಮ್ಮಕ್ಕನಹಳ್ಳಿ ಗ್ರಾಮದ 150 ಕ್ಕೂ ಹೆಚ್ಚು ಮುಖಂಡರು, ಯುವಕರು, ಅಭಿಮಾನಿಗಳು ಕಾಲ್ನಡಿಗೆಯ ಮೂಲಕ ಬೊಮ್ಮಕ್ಕನಹಳ್ಳಿ ಯಿಂದ ಶ್ರೀ ಕ್ಷೇತ್ರ ನಾಯಕನಹಟ್ಟಿ ತಿಪ್ಪೇಸ್ವಾಮಿ ಸನ್ನಿಧಿವರೆಗೆ ಸೋಮವಾರದಂದು ಪಾದಯಾತ್ರೆಯಲ್ಲಿ ಆಗಮಿಸಿ ಪೂಜೆ ನೇರವೇರಿಸಿ ಪ್ರಾರ್ಥನೆ ಸಲ್ಲಿಸಿದರು.

ಇದೇ ಸಂದರ್ಭದಲ್ಲಿ ಶಾಸಕ ಟಿ‌.ರಘುಮೂರ್ತಿ ಸಹ ತಿಪ್ಪೇಸ್ವಾಮಿ ಸನ್ನಿಧಿಯಲ್ಲಿ ಪೂಜೆ ಸಲ್ಲಿಸಿ ಮಾತನಾಡಿ ನಮ್ಮ ಕ್ಷೇತ್ರದ ಬೊಮ್ಮಕ್ಕನಹಳ್ಳಿ ಗ್ರಾಮದ ಜನರು ಹತ್ತಾರು ಕಿಲೋ ಮೀಟರ್ ಪಾದಯಾತ್ರೆಯಲ್ಲಿ ಬಂದು ಪೂಜೆ ಸಲ್ಲಿಸಿ ನನ್ನ ಗೆಲುವುಗೆ ಪ್ರಾರ್ಥನೆ ಸಲ್ಲಿಸಿರುವುದ್ದು ಅವರ ಪ್ರೀತಿಗೆ ನಾನು ಬೆಲೆ ಕಟ್ಟಲು ಆಗಲ್ಲ. ಕ್ಷೇತ್ರದಲ್ಲಿ ಕಾಂಗ್ರೆಸ್ ಪರವಾದ ಉತ್ತಮ ವಾತವರಣವಿದೆ. ಜನರು ಕಾಂಗ್ರೆಸ್ ಪಕ್ಷವನ್ನು ಬಯಸುತ್ತಿದ್ದಾರೆ. ಕಳೆದ ಹತ್ತು ವರ್ಷಗಳಿಂದ ಕ್ಷೇತ್ರದ ಜನರ ಕಷ್ಟ ಸುಖಗಳನ್ನು ಆಲಿಸಿ ಎಲ್ಲಾ ಸಂದರ್ಭದಲ್ಲಿ ಜನರ ಜೊತೆಗೆ ಇದ್ದೇನೆ ಎಂದರು.

ಚಳ್ಳಕೆರೆ ಕ್ಷೇತ್ರದ ಭವಿಷ್ಯದ ದೃಷ್ಟಿಯಿಂದ ಶಕ್ತಿ ಮೀರಿ ನಮ್ಮ ಸರ್ಕಾರದಲ್ಲಿ ಶಿಕ್ಷಣ, ಕೃಷಿ,ಭವನಗಳು, ರಸ್ತೆ , ಚಕ್ ಡ್ಯಾಂ ನಿರ್ಮಾಣ ಸೇರಿ ಮೂಲಭೂತ ಸೌಲಭ್ಯಗಳ ಅಭಿವೃದ್ಧಿಗೆ ಒತ್ತು ನೀಡಿದ್ದೇನೆ. ಕಳೆದ ಐದು ವರ್ಷಗಳ ಕಾಲ ಜನರ ಕಷ್ಟವನ್ನು ಕೇಳದೇ ಚುನಾವಣೆ ಸಮದಲ್ಲಿ ಜನರ ಬಳಿಗೆ ಬರುವವರಿಗೆ ಜನರು ಎಂದು ಮತ ಹಾಕಲ್ಲ. ದೇಶದಲ್ಲಿ ಕೋವಿಡ್ ಮಾಹಾಮಾರಿ ಅಪ್ಪಳಿಸಿದ ಸಂದರ್ಭದಲ್ಲಿ ಒಂದಿಷ್ಟು ಜನರ ಕಷ್ಟವನ್ನು ಆಲಿಸದೇ ಮನೆಯಲ್ಲಿ ಇದ್ದು ಈಗ ಮತ ಕೇಳಲು ಅವರಿಗೆ ನೈತಿಕತೆ ಇಲ್ಲ ಎಂದು ವಾಗ್ದಾಳಿ ನಡೆಸಿದರು.

ರೈತರ ಸಾಲ ಮನ್ನಾ ಮಾಡಲು ಕಾಂಗ್ರೆಸ್ ಕಾರಣ:
ಕಾಂಗ್ರೆಸ್ ಬೆಂಬಲ ನೀಡಿದ್ದರಿಂದ ಕಾಂಗ್ರೆಸ್ ಮತ್ತು ಜೆಡಿಎಸ್ ಸಮ್ಮಿಶ್ರ ಸರ್ಕಾರ ರಚನೆಯಾಗಿ ಸಾಲ ಮನ್ನಾ ಮಾಡಲು ಸಾಧ್ಯವಾಯಿತು. ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದು ಸಂದರ್ಭದಲ್ಲಿ ಸಾಲ ಮನ್ನಾ ಮಾಡುವುದರಲ್ಲಿ ಕಾಂಗ್ರೆಸ್ ಪಾತ್ರ ದೊಡ್ಡದು. ಅದನ್ನು ಮರೆತು ಜೆಡಿಎಸ್ ಸಾಲ ಮನ್ನಾ ಮಾಡಿದೇ ಎಂದು ಜನರ ದಾರಿ ತಪ್ಪಿಸುವ ಕೆಲಸ ಮಾಡಬೇಡಿ ಎಂದು ವಿರೋಧಿಗಳಿಗೆ ಟಾಂಗ್ ನೀಡಿದರು.

ಪ್ರತಿ ಹಳ್ಳಿಯಲ್ಲಿ ಕಾಂಗ್ರೆಸ್ ಪರ ಅಲೆ ಎದ್ದಿದೆ. ಬಿಜೆಪಿ ಸರ್ಕಾದ ಬೆಲೆ ಏರಿಕೆಯಿಂದ ಜನರ ಬೇಸತ್ತು ಕಾಂಗ್ರೆಸ್ ಪಕ್ಷಕ್ಕೆ ಕಡೆ ಜನರು ವಾಲುತ್ತಿದ್ದಾರೆ. ಕಾಂಗ್ರೆಸ್ ಪಕ್ಷ ಗ್ಯಾರೆಂಟಿ ಕಾರ್ಡ್ ನೀಡುತ್ತಿದ್ದು 200 ಯುನಿಟ್ ವಿದ್ಯುತ್, ಅಕ್ಕಿ, ಮನೆ ಒಡತಿಗೆ 2000 ಹಣ ನೀಡುವ ಮೂಲಕ‌ ಎಲ್ಲಾ ವರ್ಗಕ್ಕೆ ಭದ್ರತೆ ಒದಗಿಸುವ ಕೆಲಸ ಕಾಂಗ್ರೆಸ್ ಸರ್ಕಾರದಿಂದ ಮಾತ್ರ ಮಾಡಲು ಸಾಧ್ಯ. ರಾಜ್ಯದಲ್ಲಿ ನುಡಿದಂತೆ ನಡೆಯುವ ಏಕೈಕ ಪಕ್ಷ ಕಾಂಗ್ರೆಸ್ ಆಗಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಪರುಶುರಾಂಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಶಶಿಧರ್ , ಗ್ರಾ.ಪಂ ಅಧ್ಯಕ್ಷರ ಪಿ ರಂಗಸ್ವಾಮಿ, ಕಾಂಗ್ರೆಸ್ ಮುಖಂಡರಾದ ಮಾಜಿ ತಾ ಪಂ ಸದಸ್ಯ ಮಹಂತೇಶ್, ಮುಖಂಡರಾದ ಬೋರಯ್ಯ, ಮೈಲಾರಪ್ಪ ,ಮಹಾಂತೇಶ್, ಮೂರ್ತಿ ,ವೆಂಕಟೇಶ್ , ಉಮೇಶ್,ರವಿ, ಜೈಕುಮಾರ್, ಚಂದ್ರಶೇಖರ್,ಬೀರಲಿಂಗಪ್ಪ, ಶಿವಕುಮಾರ್, ನಾಗೇಶ್ ,ಮಂಜುನಾಥ ,ವೀರೇಶ್, ಅಭಿನಶ್ ಬಸವರಾಜ್ ಇದ್ದರು.

[t4b-ticker]

You May Also Like

More From Author

+ There are no comments

Add yours