ಚೌಳೂರು ಗೋಶಾಲೆಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದ ಶಾಸಕ ಟಿ.ರಘುಮೂರ್ತಿ.

 

ಚಳ್ಳಕೆರೆ-೨೫ ಸರ್ಕಾರ ಚಳ್ಳಕೆರೆ ತಾಲ್ಲೂಕನ್ನು ಬರಗಾಲಪೀಡಿತ ಪ್ರದೇಶವೆಂದು ಘೋಷಿಸಿದ ಬೆನ್ನಲೆ ಪರಶುರಾಮಪುರ, ಕಸಬಾ ಮತ್ತು ತುರುವನೂರು ಹೋಬಳಿಯಲ್ಲಿ ಗೋಶಾಲೆಗಳನ್ನು ತಕ್ಷಣವೇ ಆರಂಭಿಸಲು ಸರ್ಕಾರ ಸೂಚಿಸಿದ್ದು, ಚೌಳೂರು ಗ್ರಾಮದಲ್ಲಿ ಗೋಶಾಲೆ ಆರಂಭವಾಗಿ ಸುಮಾರು ೩೦೦ಕ್ಕೂ ಹೆಚ್ಚು ಜಾನುವಾರುಗಳಿಗೆ ಪ್ರತಿನಿತ್ಯ ಮೇವು ಹಾಗೂ ನೀರಿನ ವ್ಯವಸ್ಥೆ ಸಮರ್ಪಕವಾಗಿ ಇದೆ ಎಂದು ರಾಜ್ಯ ಸಣ್ಣ ಕೈಗಾರಿಕೆ ಅಭಿವೃದ್ಧಿ ನಿಗಮದ ಅಧ್ಯಕ್ಷ, ಶಾಸಕ ಟಿ.ರಘುಮೂರ್ತಿ ತಿಳಿಸಿದರು.

ಅವರು, ಭಾನುವಾರ ಮಧ್ಯಾಹ್ನ ಚೌಳೂರು ಗ್ರಾಮದ ಗೋಶಾಲೆಗೆ ಭೇಟಿ ನೀಡಿ ಮೇವು ವಿತರಣೆ ಹಾಗೂ ಸೌಲಭ್ಯಗಳ ಬಗ್ಗೆ ರೈತರೊಂದಿಗೆ ಚರ್ಚೆ ನಡೆಸಿದರು. ಪ್ರತಿನಿತ್ಯವೂ ಜಾನುವಾರುಗಳಿಗೆ ಸಮಪರ್ಕವಾಗಿ ಮೇವು ದೊರೆಯುತ್ತಿದ್ದು, ನೀರಿನ ಸೌಲಭ್ಯವೂ ಉತ್ತಮವಾಗಿ ಎಂದು ರೈತರು ತಿಳಿಸಿದರು. ಗೋಶಾಲೆಯನ್ನು ಆರಂಭಿಸಿ ಜಾನುವಾರುಗಳನ್ನು ರಕ್ಷಣೆ ಮಾಡುವ ಕಾರ್ಯ ಮುಂದುವರೆಯಲಿದೆ. ಕಸಬಾ ಹೋಬಳಿ ಮಟ್ಟದಲ್ಲಿ ಅಜ್ಜಯ್ಯನಗುಡಿ ಹತ್ತಿರ ಗೋಶಾಲೆ ಆರಂಭಿಸಿದ್ದು, ಕುರುಡಿಹಳ್ಳಿ ಗ್ರಾಮದ ಬಳಿ ಈಗಾಗಲೇ ಸರ್ಕಾರದಿಂದಲೇ ಶಾಶ್ವತ ಗೋಶಾಲೆ ಯಶಸ್ವಿಯಾಗಿ ನಡೆಯುತ್ತಿದೆ ಎಂದರು. ಈ ಭಾಗದಲ್ಲಿ ಉತ್ತಮ ಮಳೆಯಾಗುವ ತನಕ ಗೋಶಾಲೆಯನ್ನು ಮುಂದುವರೆಸುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿರುವುದಾಗಿ ತಿಳಿಸಿದರು.

ಇದನ್ನೂ ಓದಿ: ತೇರುಮಲ್ಲೇಶ್ವರ ಮುಕ್ತಿ ಬಾವುಟ ಪಡೆದ ಡಿ.ಸುಧಾಕರ್ ,ಎಷ್ಟು ಲಕ್ಷಕ್ಕೆ?

ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ವೀರಭದ್ರಪ್ಪ, ಪರಶುರಾಮಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಿ.ಟಿ.ಶಶಿಧರ, ನಗರಸಭಾ ಸದಸ್ಯ ಬಿ.ಟಿ.ರಮೇಶ್‌ಗೌಡ, ಮುಖಂಡರಾದ ಬಸವರಾಜು, ನರಸಿಂಹಮೂರ್ತಿ, ದೇವರಾಜ್ ಮುಂತಾದವರು ಉಪಸ್ಥಿತರಿದ್ದರು.

[t4b-ticker]

You May Also Like

More From Author

+ There are no comments

Add yours