ಸಚಿವ ಸುಧಾಕರ್ ಅವರಿಗಿಂತ ಪತ್ನಿ ಹೆಚ್ಚು ಶ್ರೀಮಂತೆ

 

ಕೆ. ಸುಧಾಕರ್ ಮುಂದಾಗಿದ್ದಾರೆ. ಈಗಾಗಲೇ ಕಮಲ ಪಾಳಯದಿಂದ ಟಿಕೆಟ್​ ಪಡೆದಿರುವ ಸುಧಾಕರ್ ನಿನ್ನೆಯೇ ತಮ್ಮ ನಾಮಪತ್ರ ಸಲ್ಲಿಸಿದ್ದಾರೆ.


ಇನ್ನು ಸಚಿವರು ಸಲ್ಲಿಸಿರುವ ಅಫಿಡವಿಟ್​ ಅನ್ವಯ 2.79 ಕೋಟಿ ರೂ. ಮೌಲ್ಯದ ಚರಾಸ್ತಿ ಮತ್ತು 2.65 ಕೋಟಿ ರೂ. ಸ್ಥಿರಾಸ್ತಿ ಹೊಂದಿದ್ದು, 1.60 ಕೋಟಿ ರೂ. ಸಾಲ ತೋರಿಸಿದ್ದಾರೆ.


ಸುಧಾಕರ್ ಪತ್ನಿ ಡಾ. ಜಿ.ಎ. ಪ್ರೀತಿ 6.59 ಕೋಟಿ ರೂ.ಮೌಲ್ಯದ ಚರಾಸ್ತಿ, 16.10 ಕೋಟಿ ರೂ.ಮೌಲ್ಯದ ಸ್ಥಿರಾಸ್ತಿ, ಜತೆಗೆ 19.08 ಕೋಟಿ ರೂ. ಸಾಲ ಹೊಂದಿದ್ದಾರೆ. ಇಬ್ಬರ ಆದಾಯ ಪ್ರಮಾಣವು 5 ವರ್ಷದಲ್ಲಿ ಏರಿಕೆಯಾಗಿದೆ.


ಇನ್ನು 2017-18 ನೇ ಸಾಲಿನಲ್ಲಿ ಸಚಿವರ ಆದಾಯ 14.37 ಲಕ್ಷ ರೂ.ಇತ್ತು. 2021-22ನೇ ಸಾಲಿನಲ್ಲಿ 33.47 ಲಕ್ಷ ರೂ. ಆಗಿದೆ ಎಂಬುವುದು ಉಲ್ಲೇಖನೀಯ. ಇತ್ತ ಅವರ ಪತ್ನಿ ಪ್ರೀತಿ 2017-18ನೇ ಸಾಲಿನಲ್ಲಿ 32.79 ಲಕ್ಷ ರೂ. ಹಾಗೂ 2021-22 ನೇ ಸಾಲಿನಲ್ಲಿ 61.91 ಲಕ್ಷ ರೂ.ಆದಾಯ ತೋರಿಸಿದ್ದಾರೆ.


ಸಚಿವ ಸುಧಾಕರ್ 160 ಗ್ರಾಂ ಚಿನ್ನ ಹಾಗೂ 9 ಕೆಜಿ ಬೆಳ್ಳಿ ಹೊಂದಿದ್ದರೆ, ಪತ್ನಿ ಪ್ರೀತಿ ಬಳಿ 1 ಕೆಜಿ ಚಿನ್ನ, 4 ವಜ್ರದ ಹರಳು, 21 ಕೆಜಿ ಬೆಳ್ಳಿ ಇದೆ. ಇನ್ನು ಸಚಿವರು ತನ್ನ ಪತ್ನಿಯಿಂದ ಸಾಲ ಪಡೆದಿರುವುದಾಗಿಯೂ ಅಫಿಡವಿಟ್​ನಲ್ಲಿ ತಿಳಿಸಿದ್ದಾರೆ.

[t4b-ticker]

You May Also Like

More From Author

+ There are no comments

Add yours