ಮಧ್ಯಪ್ರದೇಶ ಚುನಾವಣೆಯ ‘ಲೋಕ್ ಪೋಲ್’ ಸಂಸ್ಥೆ ಸಮೀಕ್ಷೆ ಬಹಿರಂಗ  ಯಾವ ಪಕ್ಷಕ್ಕೆ ಅಧಿಕಾರ?

 

ಮಧ್ಯಪ್ರದೇಶ ಚುನಾವಣೆಯ ‘ಲೋಕ್ ಪೋಲ್’ ಸಂಸ್ಥೆ ಸಮೀಕ್ಷೆ ಬಹಿರಂಗ

ಭೋಪಾಲ್: 2023ರ ಅಂತ್ಯಕ್ಕೆ ನಡೆಯಲಿರುವ ಬಹುನಿರೀಕ್ಷಿತ ಮಧ್ಯಪ್ರದೇಶ ವಿಧಾನಸಭೆ ಚುನಾವಣೆಗೆ ಕ್ಷಣಗಣನೆ ಆರಂಭವಾಗಿದೆ. ಆದರೆ ಇದೇ ಸಂದರ್ಭದಲ್ಲಿ ‘ಲೋಕ್ ಪೋಲ್’ ಸಂಸ್ಥೆ ಸಮೀಕ್ಷಾ ವರದಿಯನ್ನು ಬಿಡುಗಡೆ ಮಾಡಿದ್ದು, ಭಾರಿ ಸಂಚಲನ ಸೃಷ್ಟಿಯಾಗಿದೆ. ಹಾಗಾದರೆ 2023ರ ಮಧ್ಯಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ  ಗೆಲ್ಲೋದು ಯಾರು?

ಕಾಂಗ್ರೆಸ್ ಅಥವಾ ಬಿಜೆಪಿ? ಬನ್ನಿ ತಿಳಿಯೋಣ.

ಹೌದು, ಕರ್ನಾಟಕದ ವಿಧಾನಸಭೆ ಚುನಾವಣೆ ಫಲಿತಾಂಶ ಬಂದ ನಂತರ ದೇಶಾದ್ಯಂತ ಭಾರಿ ಸಂಚಲನ ಸೃಷ್ಟಿಯಾಗಿದೆ. ಅದರಲ್ಲೂ ಕಾಂಗ್ರೆಸ್ ಪಕ್ಷಕ್ಕೆ ಕರ್ನಾಟಕ ಚುನಾವಣೆಯ ರಿಸಲ್ಟ್ ಬೂಸ್ಟರ್ ಡೋಸ್ ಕೊಟ್ಟಿದೆ. ಈ ಹೊತ್ತಲ್ಲಿ ಮಧ್ಯಪ್ರದೇಶ ವಿಧಾನಸಭೆ ಎಲೆಕ್ಷನ್ ಕೂಡ ಹತ್ತಿರವೇ ಇದ್ದು, ಭಾರಿ ಕುತೂಹಲ ಕೆರಳಿಸಿದೆ. ಅದರಲ್ಲೂ ಕರ್ನಾಟಕದಲ್ಲಿ ಈ ಬಾರಿ ಕಾಂಗ್ರೆಸ್ ಸ್ಪಷ್ಟ ಬಹುಮತ ಪಡೆಯುತ್ತದೆ ಎಂದು ಹೇಳಿದ್ದ ‘ಲೋಕ್ ಪೋಲ್’ ಸಂಸ್ಥೆ ಮಧ್ಯಪ್ರದೇಶದ ಬಗ್ಗೆ ಭವಿಷ್ಯ ನುಡಿದಿದೆ. ಹಾಗಾದರೆ ‘ಲೋಕ್ ಪೋಲ್’ ಸಮೀಕ್ಷೆ ಪ್ರಕಾರ ಗೆಲ್ಲೋದು ಯಾರು ಗೊತ್ತಾ? ಬಿಜೆಪಿ ಎಷ್ಟು ಸ್ಥಾನ ಪಡೆಯುತ್ತೆ, ಹಾಗೇ ಕಾಂಗ್ರೆಸ್ ಎಷ್ಟು ಸ್ಥಾನ ಗೆಲ್ಲುತ್ತು? ಸಂಪೂರ್ಣ ಮಾಹಿತಿ ಇಲ್ಲಿದೆ.

ಮಧ್ಯಪ್ರದೇಶ ಚುನಾವಣೆಯಲ್ಲೂ ಕಾಂಗ್ರೆಸ್ ದಿಗ್ವಿಜಯ?

ಅಂದಹಾಗೆ ಕರ್ನಾಟಕದಲ್ಲಿ ಬರೋಬ್ಬರಿ 130+ ಸ್ಥಾನಗಳಲ್ಲಿ ಗೆದ್ದು ಬೀಗಿದ್ದ ಕಾಂಗ್ರೆಸ್‌ಗೆ ಈಗ ಮಧ್ಯಪ್ರದೇಶ ವಿಧಾನಸಭೆ ಚುನಾವಣೆಯಲ್ಲೂ ಸಿಹಿಸುದ್ದಿ ಸಿಕ್ಕಿದೆ. ಲೋಕ್ ಪೋಲ್ ಸಮೀಕ್ಷೆ ಪ್ರಕಾರ ಮಧ್ಯಪ್ರದೇಶ ಚುನಾವಣೆಯಲ್ಲಿ ಕಾಂಗ್ರೆಸ್ ಬರೋಬ್ಬರಿ 130ರಿಂದ 135 ಸ್ಥಾನ ಪಡೆಯಲಿದೆಯಂತೆ. ಆದರೆ ಆಡಳಿತರೂಢ ಬಿಜೆಪಿ ಮಾತ್ರ 2ನೇ ಸ್ಥಾನಕ್ಕೆ ಕುಸಿದು, ಕೇವಲ 90ರಿಂದ 95 ಸ್ಥಾನ ಪಡೆಯಲಿದೆ ಎಂದು ಸಮೀಕ್ಷೆಯು ಹೇಳಿದೆ. ಬಿಎಸ್‌ಪಿ ಕೇವಲ ಒಂದು ಅಥವಾ ಎರಡು ಸ್ಥಾನ ಪಡೆದರೆ ಇತರರು ಐದು ಸ್ಥಾನದಲ್ಲಿ ಗೆಲ್ಲಬಹುದು ಎಂದು ‘ಲೋಕ್ ಪೋಲ್’ ಸಮೀಕ್ಷೆ ಭವಿಷ್ಯ ನುಡಿದಿದೆ.

 

ಒಟ್ನಲ್ಲಿ ಮಧ್ಯಪ್ರದೇಶ ಚುನಾವಣೆಗೆ ಕ್ಷಣಗಣನೆ ಆರಂಭವಾಗಿರುವ ಈ ಹೊತ್ತಲ್ಲೇ ಭರ್ಜರಿ ಸುದ್ದಿ ಕಾಂಗ್ರೆಸ್ ನಾಯಕರಿಗೆ ಮತ್ತಷ್ಟು ಹುರುಪು ನೀಡಿದೆ. ಒಂದು ಕಡೆ ಕೇಂದ್ರ ಕಾಂಗ್ರೆಸ್ ನಾಯಕರು ಮಧ್ಯಪ್ರದೇಶಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಇನ್ನೊಂದು ಕಡೆ ಚುನಾವಣೆ ಬಗ್ಗೆ ಸಮೀಕ್ಷೆಗಳು ಕೂಡ ಹೊರಬಿದ್ದಿದ್ದು, ಕಾಂಗ್ರೆಸ್ ಗೆಲ್ಲುವ ಬಗ್ಗೆ ಭವಿಷ್ಯ ನುಡಿದಿವೆ. ಹೀಗೆ ಕರ್ನಾಟಕದ ಬಳಿಕ ಮತ್ತೊಂದು ದೊಡ್ಡ ರಾಜ್ಯದಲ್ಲಿ ಭರ್ಜರಿ ಗೆಲುವು ಪಡೆಯೋದಕ್ಕೆ ಕಾಂಗ್ರೆಸ್ ಹುಮ್ಮಸ್ಸಿನಿಂದ ಮುಂದೆ ನುಗ್ಗಿದೆ. ಆದರೆ ಇದೆಲ್ಲವೂ ಚುನಾವಣೆ ನಂತರವಷ್ಟೇ ಪಕ್ಕಾ ಆಗಲಿದ್ದು, ಬಿಜೆಪಿ ವಿರುದ್ಧ ಕಾಂಗ್ರೆಸ್ ರಣತಂತ್ರ ಹೆಣೆಯುತ್ತಿದೆ.

[t4b-ticker]

You May Also Like

More From Author

+ There are no comments

Add yours