ಹೆಗ್ಗೆರೆ ಗ್ರಾಮದ ಎಂ.ರಾಗಿಣಿ ಅವರಿಗೆ ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ ಪಿಎಚ್ ಡಿ ಪದವಿ

 

ಭರಮಸಾಗರ: ಸಮೀಪದ
ಹೆಗ್ಗೆರೆ ಗ್ರಾಮದ ಎಂ.ರಾಗಿಣಿ ರವರು ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ ಪಿಎಚ್ ಡಿ ಪದವಿಯನ್ನು ಪಡೆದಿದ್ದಾರೆ.
ಹೆಗ್ಗೆರೆ ಗ್ರಾಮದ ಮಂಜುನಾಥಸ್ವಾಮಿ ಮತ್ತು ರತ್ನಮ್ಮ ದಂಪತಿಗಳ ಮಗಳಾದ ಎಂ.ರಾಗಿಣಿ ಯವರು ಅಭಿವೃದ್ಧಿ ಅಧ್ಯಯನ ವಿಭಾಗಕ್ಕಾಗಿ ಕೃಷಿ ವಲಯದಲ್ಲಿ ಮಹಿಳಾ ಕಾರ್ಮಿಕರ ಪಾತ್ರ – ಚಿತ್ರದುರ್ಗ ಜಿಲ್ಲೆಯನ್ನು ಅನುಲಕ್ಷಿಸಿ ಎಂಬ ವಿಷಯ ಕುರಿತು ಸಲ್ಲಿಸಿದ ಪಿಎಚ್  ಡಿ
ಮಹಾಪ್ರಬಂಧಕ್ಕೆ ಹಂಪಿ
ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ಪದವಿಯನ್ನು ಘೋಷಿಸಿದೆ. ಹರಿಹರದ ಎಸ್ ಜೆವಿಪಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕರಾಗಿರುವ ಡಾ.ಪರಮೇಶ್ವರ ನಾಯ್ಕ್ ರವರ ಮಾರ್ಗದರ್ಶನದಲ್ಲಿ ಪ್ರೌಢ ಪ್ರಬಂಧ ವನ್ನು ಮಂಡಿಸಿದ್ದರು.
ಇದರೊಂದಿಗೆ  ಹೆಗ್ಗೆರೆ ಗ್ರಾಮದಲ್ಲಿ ಮೊದಲ ಮಹಿಳಾ ಪಿಎಚ್ ಡಿ ಪದವೀಧರೆ ಎಂಬ ಗೌರವಕ್ಕೆ ಎಂ.ರಾಗಿಣಿ ಪಾತ್ರರಾಗಿದ್ದಾರೆ.
[t4b-ticker]

You May Also Like

More From Author

+ There are no comments

Add yours