ಚಿತ್ರದುರ್ಗದ ಇಬ್ಬರು ಅಧಿಕಾರಿಗಳ ಮೇಲೆ ಲೋಕಯುಕ್ತ ರೈಡ್

 

  • ಚಿತ್ರದುರ್ಗ ಹಿರಿಯೂರಿನ ಎರಡು ಕಡೆ ಲೋಕಾಯುಕ್ತ ದಾಳಿ.
  • ಇಬ್ಬರು ಅಧಿಕಾರಿಗಳ ಮನೆಗಳ ಮೇಲೆ ರೈಡ್.
  • ಚಿತ್ರದುರ್ಗದ ಅರಣ್ಯಾಧಿಕಾರಿ ನಾಗೇಂದ್ರ ನಾಯ್ಕ್, ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಕೃಷ್ಣಮೂರ್ತಿ   ಎಂಬುವರ ಮನೆಗಳ ಮೇಲೆ ರೈಡ

chitradurga: ಚಿತ್ರದುರ್ಗ ಜಿಲ್ಲೆಯಲ್ಲಿ ಬೆಳ್ಳಬೆಳಗ್ಗೆ ಲೋಕಾಯುಕ್ತ   (Lokayukta)ಅಧಿಕಾರಿಗಳ ದಾಳಿ ನಡೆದಿದೆ. ಭ್ರಷ್ಟಚಾರದ ಆರೋಪ ಹೊತ್ತಿರುವ ಇಬ್ಬರು ಅಧಿಕಾರಿಗಳ ಮನೆಗಳ ಮೇಲೆ ದಾಳಿ ನಡೆಸಲಾಗಿದೆ. ಇಬ್ಬರ ಮನೆಗಳಿಗೆ ಸೂರ್ಯೋದಯಕ್ಕೂ ಮುನ್ನವೇ ವಾಹನಗಳಲ್ಲಿ  ಪ್ರತ್ಯೇಕ ತಂಡವಾಗಿ ಆಗಮಿಸಿದ ಅಧಿಕಾರಿಗಳಿಂದ ಹಲವಾರು ದಾಖಲೆಗಳನ್ನು ಪರಿಶೀಲನೆ ಮಾಡಲಾಗುತ್ತಿದೆ. ಚಿತ್ರದುರ್ಗದ ಲೋಕಾಯುಕ್ತ ಎಸ್ಪಿ ವಾಸುದೇವ ರಾವ್ ನೇತೃತ್ವದಲ್ಲಿ ಈ ಎರಡೂ ದಾಳಿ  ನಡೆಸಲಾಗಿದೆ. ಇದಲ್ಲದೆ, ಬೆಂಗಳೂರು ಗ್ರಾಮಾಂತರ, ಹಾಸನ, ಹಾವೇರಿ, ಕಲಬುರಗಿ, ದಾವಣಗೆರೆಯಲ್ಲೂ ಅ. 30ರ ಬೆಳಗಿನ ಜಾವ ಲೋಕಾಯುಕ್ತ ದಾಳಿ ನಡೆಸಲಾಗಿದೆ.

ಇದನ್ನೂ ಓದಿ:ಪರಿಷತ್ ಚುನಾವಣೆಯ ಐವರು ಕಾಂಗ್ರೆಸ್ ಅಭ್ಯರ್ಥಿ ಫೈನಲ್

ಅರಣ್ಯ ಇಲಾಖೆ ಎಸಿಎಫ್ ನಾಗೇಂದ್ರ ನಾಯ್ಕ್ ಅವರಿಗೆ ಸೇರಿದ ಹಿರಿಯೂರು ನಗರದ ಚಂದ್ರಾ ಲೇಔಟ್ ನಲ್ಲಿರುವ ಮನೆಗೆ ಒಂದು ತಂಡ ಆಗಮಿಸಿದ್ದರೆ, ನಾಯ್ಕ್ ಅವರಿಗೆ ಸೇರಿದ್ದೆನ್ನಲಾಗಿರುವ ತವಂದಿ ಗ್ರಾಮದ ಬಳಿಯ ಫಾರ್ಮ್ ಹೌಸ್ ಗೆ ಎರಡನೇ ತಂಡ ಹೋಗಿದೆ.

ಅಧಿಕಾರಿಗಳ ಮತ್ತೊಂದು ತಂಡ, ಸಮಾಜ ಕಲ್ಯಾಣ ಇಲಾಖೆಯ ಅಸಿಸ್ಟೆಂಟ್ ಡೈರೆಕ್ಟರ್ ಕೃಷ್ಣಮೂರ್ತಿ ಮನೆ ಮೇಲೆ ದಾಳಿ ನಡೆಸಿದ್ದು, ಇದೇ ಅಧಿಕಾರಿಗೆ ಸೇರಿದ್ದೆನ್ನಲಾಗಿರುವ ಹಿರಿಯೂರು ನಗರದ ಕುವೆಂಪು ನಗರದ ಮನೆ ಮೇಲೆ ದಾಳಿ ನಡೆಸಲಾಗಿದೆ. ಕೃಷ್ಣಮೂರ್ತಿಯವರು ಚಿತ್ರದುರ್ಗದ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಇದನ್ನೂ ಓದಿ: MP ಎಲೆಕ್ಷನ್ ಎಫೆಕ್ಟ್ 20 ಶಾಸಕರಿಗೆ ನಿಗಮ ಮಂಡಳಿ ಸ್ಥಾನ?

[t4b-ticker]

You May Also Like

More From Author

+ There are no comments

Add yours