ಧೂಳನ್ನು ಸ್ವಚ್ಚಗೊಳಿಸದೇ ಮದಕರಿನಾಯಕನಿಗೆ ಲೈಟಿಂಗ್ ಮತ್ತು ಹಾರ

 

ಚಿತ್ರದುರ್ಗ: ನಗರದ ಕನಕ ಜಯಂತಿ ಮತ್ತು ಒನಕೆ ಒಬವ್ವ ಜಯಂತಿ  ಅಂಗವಾಗಿ  ಎಲ್ಲಾ  ಪ್ರತಿಮೆಗಳಿಗೆ ಲೈಟಿಂಗ್ ವ್ಯವಸ್ಥೆ ಮತ್ತು  ಹೂವಿನ ಹಾರ ಹಾಕುವುದು ಸಾಮಾನ್ಯವಾಗಿದೆ.ಆದರೆ  ಜಿಲ್ಲಾಡಳಿತ ಮತ್ತು  ನಗರಸಭೆ ವತಿಯಿಂದ ಪ್ರತಿಮೆಗಳನ್ನು ಸ್ವಚ್ಚತೆ ಮಾಡದೇ ಅಲಂಕಾರ ಮಾಡಿದರೆ ಉಪಯೋಗ ಏನು? ಎಂಬ ಮಾತು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.

ನಗರದ ಹೃದಯ ಭಾಗದಲ್ಲಿರುವ ಮದಕರಿನಾಯಕ ಪ್ರತಿಮೆಗೆ ಒಂದೆರಡು ಚಿಕ್ಕ ಹೂವಿನ ಹಾಕಿದ್ದಾರೆ. ಆದರೆ ಪ್ರತಿಮೆಯ ಮೇಲೆ ಒಂದು ಅಡಿ ಧೂಳು ಸಹ ರಾರಾಜಿಸುತ್ತಿದ್ದು  ಹೂವಿನ ಹಾಕುವವರಿಗೆ ಮನಸ್ಸು  ಹೇಗೆ ಬಂತು, ಕಾಟಚಾರಕ್ಕೆ ಅಲಂಕಾರ ಮಾಡುವುದನ್ನು ಬಿಟ್ಟು ಕನಿಷ್ಠ ಪಕ್ಷ ತಿಂಗಳಿಗೊಮ್ಮೆ  ಆದರು ಸಹ  ಎಲ್ಲಾ ಪ್ರತಿಮೆಗೆ ನೀರಿನ ಮೂಲ ಸ್ವಚ್ಚಗೊಳಿಸುವ ಕೆಲಸ ನಗರಸಭೆಯಿಂದ ಆಗಲಿ ಎಂದು ಸಾರ್ವಜನಿಕ ಕಿಡಿಕಾರುತ್ತಿದ್ದಾರೆ.

[t4b-ticker]

You May Also Like

More From Author

+ There are no comments

Add yours