“ಭೂಮಿಯ ಉಳಿವಿಗಾಗಿ ನಾವೆಲ್ಲರೂ ಶ್ರಮಿಸೋಣ” ವಿಶೇಷ ಲೇಖನ

 

*ಭೂಮಿಯ ಉಳಿವಿಗಾಗಿ ನಾವೆಲ್ಲರೂ ಶ್ರಮಿಸೋಣ*
ಜೀವಿಗಳಿರುವ ಅನನ್ಯ ಕಾಯ ಈ ಭೂಮಿ. ನಮಗೆ ಬದುಕು ಕಟ್ಟಿಕೊಟ್ಟಿರುವ ಆಶ್ರಯ ತಾಣ. ಭೂಮಿ ತಾಯಿಯ ಪ್ರೀತಿಯ ಮಗನಾದ ಮನುಷ್ಯ ತನ್ನ ಬುದ್ಧಿ ಶಕ್ತಿಯನ್ನು ಬಳಸಿಕೊಂಡು ತಂತ್ರಜ್ಞಾನದ ನಾಗಾಲೋಟದಲ್ಲಿ ಭೂತಾಯಿಯ ಒಡಲಿಗೆ ಕೊಳ್ಳಿಯಿಟ್ಟು ಕ್ರೂರ ನಗೆ ಬೀರುತ್ತಾ ಅಟ್ಟಹಾಸ ಮೆರೆಯುತ್ತಿದ್ದಾನೆ. ಭೂಮಿಯನ್ನು ಹೊರತು ಪಡಿಸಿ ಬೇರಾವ ಗ್ರಹದಲ್ಲಿ ನಾನು ಬದುಕಬಹುದು ಎಂದು ನಿರಂತರವಾಗಿ ಅನ್ವೇಷಿಸುತ್ತಲೇ ಭೂಮಿಯ ಒಡಲನ್ನು ಕಬಳಿ ಸುತ್ತಿದ್ದಾನೆ. ಮಾನವನ ದುರದೃಷ್ಟವಶಾತ್ ಇದುವರೆಗೂ ಭೂಮಿಯಂತೆ ಆಸೆ ತಾಣ ಇದುವರೆಗೂ ಸಿಕ್ಕಿಲ್ಲ ಸಿಗುವುದು ಇಲ್ಲ. ಹೀಗಿದ್ದರೂ ಸಹ ನಮ್ಮ ವಸುಂಧರೆಯನ್ನು ಜೋಪಾನವಾಗಿ ಕಾಪಾಡಿ ಕೊಳ್ಳುತ್ತಿದ್ದೇವೆಯಾ? ಎಂಬುದನ್ನು ಗಮನಿಸಿದರೆ ಭೂಮಿತಾಯಿಯ ಕಂಗಳಲ್ಲಿ ರಕ್ತದ ಕೋಡಿಯೇ ಹರಿಯುತ್ತಿದೆ.
ಹೆಚ್ಚುತ್ತಿರುವ ಜನಸಂಖ್ಯೆಯಿಂದ ಭಾರವಾಗಿದೆ ಭೂಮಿಯ ಒಡಲು ಜಾಗತಿಕ ತಾಪಮಾನದ ಏರಿಕೆಯಿಂದ ವಸುಂಧರೆಯ ತಾಪ ಕೆಂಡ ವಾಗುತ್ತಿದೆ ಅರಣ್ಯನಾಶದಿಂದ ಆದರೆ ಅಳಿವಿನ ಅಂಚಿಗೆ ಬಂದು ನಿಂತಿದೆ. ಪರಿಸರದ ಜೀವಿ ಸಂಕುಲಗಳು ಕಳೆದು ಹೋಗುತ್ತಿದ್ದು ಪರಿಸರದ ಅಸಮತೋಲನಕ್ಕೆ ಕಾರಣವಾಗಿದೆ. ಇದೆ ಪರಿಸ್ಥಿತಿ ಮುಂದುವರೆದರೆ ಭೂಮಿಯ ಅಳಿವು ನಮ್ಮೆಲ್ಲರ ಅವಸಾನ ಬೀಭತ್ಸ ರೀತಿಯಲ್ಲಿ ಅಂತ್ಯವಾಗುವ ದಲ್ಲಿ ಸಂಶಯವಿಲ್ಲ.
ವಸುಂದರೆಯ ಪ್ರೀತಿಯ ಮಕ್ಕಳು ನಾವು ಈಗಲಾದರೂ ಭೂತಾಯಿಯನ್ನು ಕಾಪಾಡಿಕೊಳ್ಳುವುದು ನಮ್ಮೆಲ್ಲರ ಉಳಿವಿಗಾಗಿ ಅತ್ಯಗತ್ಯ.
ನಮ್ಮನ್ನೆಲ್ಲಾ ಭೂತಾಯಿಯ ಉಳಿವಿಗಾಗಿ ಜಾಗೃತಿ ಮೂಡಿಸುವ ಜಾಗೃತಿ ಮೂಡಿಸುವ ವಿಶೇಷ ದಿನವೇ ವಿಶ್ವಭೂದಿನ
ಪ್ರತಿವರ್ಷವೂ ಎಪ್ರಿಲ್ 22ರಂದು ವಿಶ್ವ ಭೂ ದಿನ ಎಂದು ಆಲಿಸಲಾಗುತ್ತಿದೆ ವಿಶ್ವದ ಜನಸಾಮಾನ್ಯರಿಗೆ ಭೂಮಿಯ ಪ್ರಾಮುಖ್ಯತೆ, ಭೂ ಸಂರಕ್ಷಣೆಯಲ್ಲಿ ನಮ್ಮ ಪಾತ್ರ, ಭೂತಾಯಿಯ ಉಳಿವಿಗಾಗಿ ನಾಗರಿಕರಾಗಿ ನಮ್ಮ ಜವಾಬ್ದಾರಿ, ಪರಿಸರಸ್ನೇಹಿ ಜೀವನಶೈಲಿಯನ್ನು ರೂಪಿಸಿಕೊಳ್ಳುವ ಬಗ್ಗೆ ಜಾಗೃತಿ ಮೂಡಿಸುವ ದಿನವೇ ವಿಶ್ವಭೂದಿನ.
1970 ಏಪ್ರಿಲ್ 22ರಿಂದ ಆರಂಭವಾದ ಭೂ ದಿನದ ಪರಿಕಲ್ಪನೆ ವಿಭಿನ್ನ ಚಿಂತನೆಗಳೊಂದಿಗೆ ಜನಸಾಮಾನ್ಯರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ
2022ರ ಭೂ ದಿನದ ಚಿಂತನೆ ” ನಮ್ಮ ಗ್ರಹದಲ್ಲಿ (ಭೂಮಿ) ಹೂಡಿಕೆ ಮಾಡಿ ” ಎಂಬುದಾಗಿದೆ. ಭೂಮಿಗೆ ಹಾನಿಕಾರಕವಾಗಿರುವ ಮಾನವನ ಚಟುವಟಿಕೆಗಳಿಂದ ದೂರ ಮಾಡಿ ಭೂಮಿಯನ್ನು ಸಂರಕ್ಷಿಸುವುದರ ಬಗ್ಗೆ ದಿಟ್ಟ ಕ್ರಮಗಳನ್ನು ದಿಟ್ಟ ಹೆಜ್ಜೆಗಳನ್ನು ಇಡುವುದು ಆಗಿದೆ.

ವಿಶ್ವ ಭೂ ದಿನಾಚರಣೆ ಇದು ಕೇವಲ ಪರಿಸರದ ಸಂಘಟನೆಗಳಿಗೆ ಮಾತ್ರ ಸೀಮಿತ ವಾದಂತಹ ದಿನಾಚರಣೆ ಅಲ್ಲ, ವಿಶ್ವದ ಪ್ರತಿಯೊಬ್ಬ ನಾಗರೀಕರು ಆಚರಿಸುವ ದಿನಾಚರಣೆ. ಈ ದಿನ ಕೇವಲ ಆಚರಣೆಗೆ ಸೀಮಿತವಾಗದೆ ಭೂಮಿಯ ಉಳಿವಿಗಾಗಿ ನಾವೆಲ್ಲರೂ ಕಂಕಣಬದ್ಧರಾಗಿ ಪರಿಸರ ಸ್ನೇಹಿ ಜೀವನ ಸಾಗಿಸುವ ಮೂಲಕ ಪ್ರತಿದಿನ ವಿಶ್ವ ಭೂ ದಿನಾಚರಣೆಯನ್ನು ಆಚರಿಸೋಣ.
ನಿಮಗೆಲ್ಲರಿಗೂ ವಿಶ್ವ ಭೂ ದಿನಾಚರಣೆಯ ಶುಭಾಶಯಗಳು

ಲೇಖನ
*ಡಾ.ಮಹೇಶ್ ಕೆ ಎನ್*
ಮುಖ್ಯಶಿಕ್ಷಕರು
ಶ್ರೀ ಆಂಜನೇಯ ಸ್ವಾಮಿ ಪ್ರೌಢಶಾಲೆ
ಕಡ್ಲೆಗುದ್ದು

[t4b-ticker]

You May Also Like

More From Author

+ There are no comments

Add yours