ಕೇಂದ್ರ ಭದ್ರಾ ಯೋಜನೆಗೆ ಶೀಘ್ರ 5300 ಕೋಟಿ ಬಿಡುಗಡೆ ಮಾಡಲಿ:ಶಾಸಕ ಟಿ.ರಘುಮೂರ್ತಿ ಆಗ್ರಹ

 

ಚಿತ್ರದುರ್ಗ:  ಮಧ್ಯ ಕರ್ನಾಟಕದ ಬಯಲು ಸೀಮೆಯ ಪ್ರದೇಶಗಳಿಗೆ ನೀರೊದಗಿಸುವ ಮಹತ್ವದ ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರ ರಾಷ್ಟ್ರೀಯ ಯೋಜನೆ ಎಂದು ಘೋಷಿಸಿ 5300 ಕೋಟಿ  ಹಣ ಒದಗಿಸುವುದಾಗಿ ಭರವಸೆ ನೀಡಿದ್ದ ಕೇಂದ್ರ ಸರ್ಕಾರ ಇನ್ನು ಒಂದು ಪೈಸೆ ಹಣ ನೀಡಿಲ್ಲ. ಈ‌ ಕೂಡಲೇ  ಎಚ್ಚೆತ್ತುಕೊಂಡ  ಅನುದಾನ  ಬಿಡುಗಡೆ ಮಾಡಬೇಕು ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ ಕೇಂದ್ರ ಸರ್ಕಾರಕ್ಕೆ  ಒತ್ತಾಯಿಸಿದರು.
ಇಂದು ಜಿಲ್ಲಾ ನೀರಾವರಿ ಅನುಷ್ಠಾನ ಹೋರಟ ಸಮಿತಿ ಹಮ್ಮಿಕೊಂಡಿದ್ದ ಚಿತ್ರದುರ್ಗ ಬಂದ್ ಗೆ ಬೆಂಬಲ ಸೂಚಿಸುವ ಜೊತೆಗೆ ಭಾಗವಹಿಸಿ ಮಾತನಾಡಿ  ಕೇಂದ್ರ ಸರ್ಕಾರ ಭದ್ರಾ ಮೇಲ್ದಂಡೆ ಯೋಜನೆಯನ್ನು  ರಾಷ್ಟ್ರೀಯ ಯೋಜನೆ  ವ್ಯಾಪ್ತಿಗೆ ಪಡೆದು ಹಲವು ವರ್ಷ ಕಳೆದರು ಸಹ ಯಾವುದೇ ಹಣ ಬಿಡುಗಡೆ ಮಾಡಿಲ್ಲ‌. ಅಭಿವೃದ್ಧಿ ವಿಚಾರದಲ್ಲಿ ರಾಜಕರಣ ಮಾಡಬಾರದು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಮಗೆ ಭದ್ರಾ ಯೋಜನೆ ತ್ವರಿತ ಕಾಮಗಾರಿಗೆ ಹಣ ಒದಗಿಸಬೇಕು.

ಭದ್ರಾ ಯೋಜನೆ ಪಡೆಯುವ ಜಿಲ್ಲೆಗಳು 

ಭದ್ರಾ ಹೋರಟ ಚಿತ್ರದುರ್ಗ, ದಾವಣಗೆರೆ, ತುಮಕೂರು, ಚಿಕ್ಕ ಮಂಗಳೂರು ಜಿಲ್ಲೆಗೆ ಭದ್ರಾ ಯೋಜನೆ ಅನುಕೂಲ ಪಡೆಯಲಿವೆ. ನಾಲ್ಕು ಜಿಲ್ಲೆ 12 ತಾಲೂಕು 367 ಕೆರೆ ತುಂಬಿಸುವ ಯೋಜನೆಯಾಗಿದೆ. 
2022 ರಲ್ಲಿ 21647 ಕೋಟಿಗೆ ಪರಿಷ್ಕೃತಗೊಳಿಸಿ ರಾಷ್ಟ್ರೀಯ ಯೋಜನೆ ಮಾಡಬೇಕು ಎಂದು  ಕೇಂದ್ರ ಸರ್ಕಾರಕ್ಕೆ ರಾಜ್ಯ ಬಿಜೆಪಿ ಸರ್ಕಾರ 2023 ರಲ್ಲಿ ಕೇಂದ್ರಕ್ಕೆ  ಕಳಿಸಿ ಅಗತ್ಯವಾದ ಎಲ್ಲಾ ಮಾಹಿತಿ ರಾಜ್ಯ ಸರ್ಕಾರ ನೀಡಿದೆ ಎಂದರು.
ಕೇಂದ್ರ ಸರ್ಕಾರ 16500 ಕೋಟಿಗೆ ಈ ಯೋಜನೆ ಮೊತ್ತ ನಿಗದಿ ಮಾಡಲಾಯಿತು‌. ಹನಿ ನೀರಾವರಿಗೆ ಯೋಜನೆ ಒಳಪಡಿಸಿ ರಾಷ್ಟ್ರೀಯ ಯೋಜನೆ ಎಂದು ಘೋಷಿಸಿ ರಾಜ್ಯದ  ಪಾಲು 60%  ಮತ್ತು ಕೇಂದ್ರ ಪಾಲು 40 % ನಂತೆ ನಿಗದಿ ಮಾಡಿದರು‌. 5300 ಕೋಟಿ ನಿಗದಿ ಮಾಡಿ ರಾಷ್ಟ್ರೀಯ ಯೋಜನೆ ಎಂದು ಘೋಷಿಸಿದರು ಒಂದು ಪೈಸೆ  ಬಿಡುಗಡೆ ಮಾಡಿಲ್ಲ ಎಂದು ಕೇಂದ್ರ ಸರ್ಕಾರದ ಗುಡುಗಿದರು.

ರಾಜ್ಯದಿಂದ ಎಲ್ಲಾ ಮಹಿತಿ ಕೇಂದ್ರಕ್ಕೆ 

ಹೊಸ ಸರ್ಕಾರ ಬಂದ ನಂತರ ಕೇಂದ್ರ ಸರ್ಕಾರ ಕೇಳಿದ ಎಲ್ಲಾ ಮಾಹಿತಿ
ನೀಡಿದರು ಹಣ ನೀಡಲು ಮನಸ್ಸು ಮಾಡಿಲ್ಲ. ಇಲ್ಲಿಯವರೆಗೂ ಸಹ ಎಂಟು ಸಾವಿರ ಕೋಟಿ ಹಣ ಭದ್ರಾ ಮೇಲ್ದಂಡೆ ಯೋಜನೆಗೆ ವ್ಯಯ ಮಾಡಿದ್ದು ಅದರಲ್ಲಿ 1700 ಕೋಟಿ ಮಾಡಿರುವ ಕಾಮಗಾರಿ ವೆಚ್ಚ ಸರ್ಕಾರ ನೀಡಬೇಕಿದೆ. ನಮ್ಮ  ಸರ್ಕಾರ ಬಂದ ಮೇಲೆ 1200 ಕೋಟಿ ಹಣ ಬಿಡುಗಡೆ ಮಾಡಿದೆ. ಕೇಂದ್ರ ಸರ್ಕಾರ 5300   ಕೋಟಿ ಹಣ ಬಿಡುಗಡೆ ಮಾಡದಿದ್ದ ಕಾರಣದಿಂದ ಯೋಜನೆ ಕುಂಠಿತವಾಗಿದೆ ಎಂದು ನೇರವಾಗಿ ಕೇಂದ್ರ ಸರ್ಕಾರ ವಿರುದ್ದ ಹರಿಹಾಯ್ದರು.
 
ಕೇಂದ್ರ ಸರ್ಕಾರ 21500 ಕೋಟಿಯನ್ನು ಕಡಿಮೆ ಮಾಡದೇ ಹನಿನೀರಾವರಿ ಯೋಜನೆ ಮಾಡಬೇಕು. ಚಿತ್ರದುರ್ಗ ಜಿಲ್ಲೆಗೆ ಯಾವ ನೀರಾವರಿ ಯೋಜನೆ ಇಲ್ಲ.16500 ಕೋಟಿ ಅನುದಾನ ಕಡಿತಗೊಳಿಸಬೇಡಿ ಎಂದು ನಮ್ಮ ಜಿಲ್ಲೆಯ ಸಚಿವರು ಮತ್ತು  ಶಾಸಕರು ಸಭೆಯಲ್ಲಿ ಸಿಎಂ ,ಡಿಸಿಎಂ ಅವರ ಗಮನಕ್ಕೆ ಎಲ್ಲಾ ಮಾಹಿತಿ ನೀಡಿದ್ದು ನೂರಕ್ಕೆ ನೂರರಷ್ಟು ನಮ್ಮ ಸರ್ಕಾರ ಅನುದಾನ ಒದಗಿಸಲು ಬದ್ದವಾಗಿದೆ.ಬಜೆಟ್ ಸಂದರ್ಭದಲ್ಲಿ ಸಹ ನಾವು ಸಿಎಂ ಬಳಿ ಮತ್ತೆ ಮನವಿ ಮಾಡುತ್ತೇವೆ ಮತ್ತು 2025 ನೀರಾವರಿ ಯೋಜನೆ ಎಂದು ಘೋಷಣೆ ಮಾಡಿದ್ದು ಹೆಚ್ಚಿನ ಹಣಕ್ಕೆ ಬೇಡಿಕೆ ಸಲ್ಲಿಸುತ್ತೇವೆ. ಇದೇ ವರ್ಷ ಅಕ್ಟೋಬರ್ 2 ಕ್ಕೆ ನೀರು ನಮ್ಮ ಜಿಲ್ಲೆಯ ಹರಿಯಲಿದೆ ಮತ್ತು ತರೀಕೆರೆ ಬಳಿ ರೈತರ ಸಮಸ್ಯೆ ಬಗೆಹರಿದಿದ್ದು ಯಾವುದೇ ಅಡ್ಡಿ ಆತಂಕ ಇಲ್ಲ. ಇಲಾಖೆ  ಡಿಸಿಎಂ  ಡಿ.ಕೆ.ಶಿವಕುಮಾರ್ ಅವರು ಸಹ ಶೀಘ್ರವಾಗಿ  ಆಗಮಿಸಲಿದ್ದು ಭದ್ರಾ ಕಾಮಗಾರಿ ಪರಿಶೀಲನೆ  ನಡೆಸಲಿದ್ದಾರೆ ಎಂದು ರೈತರಿಗೆ ಅಭಯ ನೀಡಿದರು‌.

ಇದನ್ನೂ ಓದಿ: 500 ಶಾಲೆಗಳು ಕರ್ನಾಟಕ ಪಬ್ಲಿಕ್ ಶಾಲೆಗಳಾಗಿ ಮೇಲ್ದರ್ಜೆಗೆ -ಸಚಿವ ಎಸ್. ಮಧು ಬಂಗಾರಪ್ಪ

[t4b-ticker]

You May Also Like

More From Author

+ There are no comments

Add yours