ಸಮಸ್ಯೆಗಳಿಗೆ ಕಾನೂನಿನ ಮೂಲಕ ಕ್ರಮ ವಹಿಸಲಾಗುವುದು: ತಹಶೀಲ್ದಾರ್ ಎನ್.ರಘುಮೂರ್ತಿ

 

ಚಿತ್ರದುರ್ಗ: ಚಿಕ್ಕಗೊಂಡನಹಳ್ಳಿ ಮತ್ತು ಮುದ್ದಾಪುರ ಗ್ರಾಮ ಪಂಚಾಯತಿಗಳಲ್ಲಿನ ಸಮಸ್ಯೆಗಳಿಗೆ ಕಾನೂನಿನ ಪ್ರಕಾರ ಕ್ರಮ ವಹಿಸಲಾಗುವುದು ಎಂದು ತಹಶೀಲ್ದಾರ್ ಎನ್.ರಘುಮೂರ್ತಿ ಹೇಳಿದರು.

ಸೋಮವಾರ  ಚಿತ್ರದುರ್ಗ ತಾಲೂಕಿನ  ಪಭಾರ  ತಹಶೀಲ್ದಾರ್ ಆಗಿ  ತಾಲೂಕ ಕಚೇರಿಗೆ ಆಗಮಿಸಿದ ಸಂದರ್ಭದಲ್ಲಿ  ಮುದ್ದಾಪುರ ಮತ್ತು  ಚಿಕ್ಕ ಗೊಂಡನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ  ಗ್ರಾಮಸ್ಥರು  ನಮ್ಮ  ಪಂಚಾಯತ ವ್ಯಾಪ್ತಿಯಲ್ಲಿ  ಸಾಕಷ್ಟು ಸಮಸ್ಯೆಗಳಿವೆ ಎಂದು ಗಮನಕ್ಕೆ ತಂದ ಹಿನ್ನಲೆಯಲ್ಲಿ ಮಾತನಾಡಿಸಿ ಚಳ್ಳಕೆರೆ ತಾಲೂಕಿನ ಗ್ರಾಮಗಳನ್ನು ಸಮಸ್ಯೆ ಮುಕ್ತ ಗ್ರಾಮಗಳನ್ನಾಗಿ ಮಾಡಿದ ರೀತಿಯಲ್ಲಿ ನಮ್ಮ ಪಂಚಾಯಿತಿಯನ್ನು ಕೂಡ ಸಮಸ್ಯೆ ಮುಕ್ತ ಗ್ರಾಮವನ್ನಾಗಿ ಮಾಡಲು ಮನವಿ   ಮಾಡಿದರು.
ಸ್ಮಶಾನ ಮತ್ತು ದಾರಿಯ ಸಮಸ್ಯೆಗಳು ತುಂಬಾ  ಗಂಭೀರವಾಗಿದ್ದು ಇವುಗಳನ್ನು ಬಗೆಹರಿಸುವಂತೆ  ಮನವಿ ಮಾಡಿದಾಗ  ತಹಶೀಲ್ದಾರ್  ರಘುಮೂರ್ತಿ  ಅವರು   ಸ್ಥಳೀಯ ಕಂದಾಯ ಪರಿ ವೀಕ್ಷಕರು, ಗ್ರಾಮ ಲೆಕ್ಕಾಧಿಕಾರಿ ಮತ್ತು ಉಪ ತಹಶೀಲ್ದಾರ್ ಅವರ ತಂಡ  ಮುದ್ದಾಪುರ ಗ್ರಾಮಕ್ಕೆ ಭೇಟಿ ನೀಡಿ  ಮುದ್ದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ 5 ಗ್ರಾಮಗಳನ್ನು ಆಯ್ಕೆ ಮಾಡಿಕೊಂಡು ಈ ಗ್ರಾಮಗಳಲ್ಲಿ ಇರುವಂತ ಸಮಸ್ಯೆಗಳಾದಂತಹ ಸ್ಮಶಾನ ಒತ್ತುವರಿ ತೆರವು, ದಾರಿ ವಿವಾದ , ಜಮೀನಿನ ಪೋಡಿ ಸೇರಿದಂತೆ ಕಂದಾಯ ಇಲಾಖೆಯ ಎಲ್ಲಾ ಸಮಸ್ಯೆಗಳನ್ನು ಕೂಡ  ನಾಲ್ಕು ದಿನಗಳೊಳಗೆ ಬಗೆಹರಿಸುವಂತೆ ಉಪ ತಹಶೀಲ್ದಾರ್  ರಾಜಸ್ವ ವೀಕ್ಷಕರು ಮತ್ತು ಗ್ರಾಮ ಲೆಕ್ಕಾಧಿಕಾರಿಗಳಿಗೆ ತಹಶೀಲ್ದಾರ್ ಸೂಚಿಸಿದರು.
 ಸಮಸ್ಯೆಗಳ ಕುರಿತು ಎಲ್ಲಾ ತಾಲೂಕಿನ ತಹಶೀಲ್ದಾರ್ ಅವರಿಗೆ ಗ್ರಾಮೀಣ ಭಾಗದ  ಸಮಸ್ಯೆಗಳ ಕುರಿತು ಗಮನ ಹರಿಸಲು  ಜಿಲ್ಲಾಧಿಕಾರಿಗಳು ಸೂಚಿಸಿದ್ದಾರೆ ಮತ್ತು ಸರ್ಕಾರದ ನಿರ್ದೇಶನ  ಹಾಗೂ ಸರ್ಕಾರದ  ಆಶಯವಾಗಿದೆ.‌
ಯಾವುದೇ ಸಾರ್ವಜನಿಕರು ಕಂದಾಯ ಇಲಾಖೆಯ ಎಂತಹ ಸಮಸ್ಯೆಗಳು ಇದ್ದರೂ ಕೂಡ ಆತಂಕ ಪಡುವ ಅಗತ್ಯವಿಲ್ಲ ಇಲಾಖೆಯಿಂದ ಕೂಡ ಮಾಡುವಂತಹ ಎಲ್ಲ ಸವಲತ್ತುಗಳನ್ನು ಕೂಡ  ರೈತರ ಮನೆ ಬಾಗಿಲಿಗೆ ತಲುಪಿಸಲಾಗುವುದು. ಗಂಭೀರವಾದ ಸಮಸ್ಯೆಗಳಿದ್ದಲ್ಲಿ ತಕ್ಷಣ ಇಲಾಖೆಯ ಗಮನಕ್ಕೆ ತರುವಂತೆ ಪಂಚಾಯಿತಿಯ ಪ್ರತಿನಿಧಿಗಳಿಗೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಗ್ರಾಮ ಅಧ್ಯಕ್ಷ ಉಪಾಧ್ಯಕ್ಷ ಸಂತೋಷ್ , ಗ್ರಾಮ ಪಂಚಾಯತಿ ಸದಸ್ಯ ಲಿಂಗರಾಜು ರಾಜಶೇಖರ್   ರೂಮಗಟ್ಟೆ ಮಂಜು ಕಪ್ಪನಹಳ್ಳಿ ಸಂತೋಷ ರೈತ ಸಂಘದ ರುದ್ರಸ್ವಾಮಿ   ಉಪ ತಹಶೀಲ್ದಾರ್ ಪ್ರಕಾಶ್, ರಾಜಸ್ಥ ನಿರೀಕ್ಷಕ ಯೋಗೀಶ್ ಮತ್ತು ಗ್ರಾಮಸ್ಥರುಗಳು  ಉಪಸ್ಥಿತರಿದ್ದರು.
[t4b-ticker]

You May Also Like

More From Author

+ There are no comments

Add yours