ಚಿತ್ರದುರ್ಗ: ಒಂದೇ ಕುಟುಂಬದ ನಾಲ್ವರು ಕಾಣೆ

 

ಚಿತ್ರದುರ್ಗ(ಕರ್ನಾಟಕ ವಾರ್ತೆ)ಜನವರಿ03:
ಚಿತ್ರದುರ್ಗ ನಗರದ ಹೊಳಲ್ಕೆರೆ ರಸ್ತೆಯ ಜಯನಗರದ ಒಂದೇ ಕುಟುಂಬದ ನಾಲ್ವರು ಕಾಣೆಯಾದ ಕುರಿತು ಚಿತ್ರದುರ್ಗ ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
2022ರ ಡಿಸೆಂಬರ್ 9ರಂದು ರಂದು ರೋಹಿತ್.ಎಂ.ಬಿ (33) ಹಾಗೂ ರೇಣುಕಶ್ಯಪ್ (34) ಮಕ್ಕಳಾದ  ಆರ್ಯನ್ (12) ರಿಷಿ (6) ಇವರನ್ನು ಶಾಲೆಯಿಂದ ಕರೆತರುವುದಾಗಿ ಹೇಳಿ ಮನೆಯಿಂದ ಹೋದವರು ಮಕ್ಕಳೊಂದಿಗೆ ಕಾಣೆಯಾಗಿದ್ದಾರೆ.
ರೋಹಿತ್.ಎಂ.ಬಿ. ಚಹರೆ ಇಂತಿದೆ: ದುಂಡುಮುಖ, ಎಣ್ಣೆಗೆಂಪು ಮೈಬಣ್ಣ, ಸಾಧಾರಣ ಮೈಕಟ್ಟು ಹೊಂದಿರುತ್ತಾರೆ. ಎಡಗೈ ಮೇಲೆ ಸಿಂಹದ ಮಚ್ಚೆ ಇರುತ್ತದೆ. ಸುಮಾರು 5 ಅಡಿ ಎತ್ತರವಿದ್ದು ಕನ್ನಡ ಮತ್ತು ಹಿಂದಿ ಭಾಷೆ ಮಾತನಾಡುತ್ತಾರೆ.  ಕಾಣೆಯಾದ ಸಮಯದಲ್ಲಿ ನೀಲಿ ಬಣ್ಣದ ಶರ್ಟ್ ಹಾಗೂ ನೀಲಿ ಬಣ್ಣದ ಜೀನ್ಸ್ ಫ್ಯಾಂಟ್ ಧರಿಸಿರುತ್ತಾರೆ.
ರೇಣುಕಶ್ಯಪ್ ಚಹರೆ ಇಂತಿದೆ:   ಕೋಲುಮುಖ, ಕೆಂಪು ಮೈಬಣ್ಣ, ಸಾಧಾರಣ ಮೈಕಟ್ಟು ಹೊಂದಿರುತ್ತಾರೆ. ಮೂಗಿನ ಕೆಳಗೆ ಜೋಳದಾಕಾರದ  ಮಚ್ಚೆಯಿರುತ್ತದೆ. ಸುಮಾರು 5 ಅಡಿ ಎತ್ತರವಿದ್ದು, ಕನ್ನಡ ಮತ್ತು ಹಿಂದಿ ಭಾಷೆ ಮಾತನಾಡುತ್ತಾರೆ. ಕಾಣೆಯಾದ ಸಮಯದಲ್ಲಿ ಕೆಂಪು ಬಣ್ಣದ ಚೂಡಿದಾರ್  ಧರಿಸಿರುತ್ತಾರೆ.
ಆರ್ಯನ್ ಚಹರೆ ಇಂತಿದೆ: ಕೋಲುಮುಖ, ಕೆಂಪು ಮೈಬಣ್ಣ ಸಾಧಾರಣ ಮೈಕಟ್ಟು ಹೊಂದಿರುತ್ತಾರೆ, ಹಣೆಯ ಮೇಲೆ ಮೊಡವೆಗಳು ಗುರುತು ಇರುತ್ತದೆ. ಸುಮಾರು 5 ಅಡಿ ಎತ್ತರವಿದ್ದು, ಕನ್ನಡ ಮತ್ತು ಹಿಂದಿ ಭಾಷೆ ಮಾತನಾಡುತ್ತಾರೆ. ಕಾಣೆಯಾದ ಸಮಯದಲ್ಲಿ ನೀಲಿ ಬಣ್ಣದ ಶರ್ಟ್ ಹಾಗೂ ಕಪ್ಪು ಬಣ್ಣದ ಫ್ಯಾಂಟ್ ಧರಿಸಿರುತ್ತಾರೆ.
ರಿಷಿ ಚಹರೆ ಇಂತಿದೆ: ದುಂಡು ಮುಖ, ಎಣ್ಣೆಗೆಪು ಮೈಬಣ್ಣ ಸಾಧಾರಣ ಮೈಕಟ್ಟು ಹೊಂದಿರುತ್ತಾರೆ, ಎಡಕಿವಿ ದೊಡ್ಡದಾಗಿರುತ್ತದೆ. ಸುಮಾರು 3.5 ಅಡಿ ಎತ್ತರವಿದ್ದು, ಕನ್ನಡ ಮತ್ತು ಹಿಂದಿ ಭಾಷೆ ಮಾತನಾಡುತ್ತಾರೆ. ಕಾಣೆಯಾದ ಸಮಯದಲ್ಲಿ ನೀಲಿ ಬಣ್ಣದ ಶರ್ಟ್ ಹಾಗೂ ಕಪ್ಪು ಬಣ್ಣದ ಫ್ಯಾಂಟ್ ಧರಿಸಿರುತ್ತಾರೆ.
ಇವರ ಕುರಿತು ಮಾಹಿತಿ ದೊರೆತವರು ಕೂಡಲೇ ಚಿತ್ರದುರ್ಗ ಕೋಟೆ ಪೊಲೀಸ್ ಠಾಣೆ ಪೊಲೀಸ್ ನಿರೀಕ್ಷಕರ ದೂರವಾಣಿ ಸಂಖ್ಯೆ 08194-222933, 9480803145, ಪೊಲೀಸ್ ಉಪಾಧೀಕ್ಷಕರು ದೂರವಾಣಿ ಸಂಖ್ಯೆ 08194-222430, 9480803120 ಹಾಗೂ ಪೊಲೀಸ್ ಕಂಟ್ರೋಲ್ ರೂಂ ಸಂಖ್ಯೆ 08194-222782 ಸಂಪರ್ಕಿಸಬೇಕು ಎಂದು ಪ್ರಕಟಣೆ ತಿಳಿಸಿದೆ.
[t4b-ticker]

You May Also Like

More From Author

+ There are no comments

Add yours