Ksrtc ಬಸ್ ನಲ್ಲಿ ಇನ್ನು ಮುಂದೆ ಮೊಬೈಲ್ ಲೌಡ್ ಸ್ಪೀಕರ್ ಉಪಯೋಗ ರದ್ದು ಏಕೆ ಗೊತ್ತೆ..

 

ಬೆಂಗಳೂರು: ಇನ್ನು  ಮುಂದೆ ನೀವು ಬಸ್​ ಗಳಲ್ಲಿ ಪ್ರಯಾಣ ಮಾಡುವಾಗ  ಮೊಬೈಲ್  ಲೌಡ್​ ಸ್ಪೀಕರ್​ ನಲ್ಲಿ ಹಾಡನ್ನು ಕೇಳುವಂತಿಲ್ಲ, ವಿಡಿಯೋ ನೋಡುವಂತಿಲ್ಲ. ಒಂದು ವೇಳೆ ಹಾಡು ಕೇಳಲೇ ಬೇಕು ವಿಡಿಯೋ ನೋಡಲೇಬೇಕು ಎಂದರೆ ಇಯರ್ ಫೋನ್ ಬಳಸಬೇಕು ಎಂದು ರಾಜ್ಯ ಹೈಕೋರ್ಟ್ ಹೊಸ ಆದೇಶವೊಂದನ್ನು ಜಾರಿಗೆ ತಂದಿದೆ.

ರಾಜ್ಯ ಹೈಕೋರ್ಟ್ ನೀಡಿರುವ ಆದೇಶದ ಪ್ರಕಾರ ಕೆಎಸ್​ಆರ್​ ಟಿಸಿ ಬಸ್​ ಗಳಲ್ಲಿ ಪ್ರಯಾಣಿಸುವ ವೇಳೆಯಲ್ಲಿ ಜೋರಾಗಿ ಮೊಬೈಲ್​ನಲ್ಲಿ ಹಾಡನ್ನು ಕೇಳಲು ಅವಕಾಶವನ್ನು ನಿರಾಕರಿಸಲಾಗಿದೆ. ಏಕೆಂದರೆ ಈ ರೀತಿಯಲ್ಲಿ ಜೋರಾಗಿ ಹಾಡು ಹಚ್ಚುವುದರಿಂದ ಇತರ ಪ್ರಯಾಣಿಕರಿಗೆ ತೊಂದರೆ ಆಗುತ್ತೆ ಹಾಗಾಗಿ ಇತರರಿಗೆ ತೊಂದರೆ ತಪ್ಪಿಸುವ ಉದ್ದೇಶದಿಂದ ರಾಜ್ಯ ಹೈಕೋರ್ಟ್​ನ ಈ ಆದೇಶ ನೀಡಿದೆ.

ಈ ಹಿಂದೆ ನ್ಯಾಯಾಲಯಕ್ಕೆ ಕೆಎಸ್​ಆರ್​ಟಿಸಿ ಬಸ್​ಗಳಲ್ಲಿ ನಿರ್ಬಂಧ ಹೇರುವಂತೆ ಕೋರಿ ಅರ್ಜಿ ಸಲ್ಲಿಕೆ ಮಾಡಲಾಗಿತ್ತು. ಅರ್ಜಿ ವಿಚಾರಣೆ ನಡೆಸಿದ ರಾಜ್ಯ ಹೈಕೋರ್ಟ್​ ಕೆಎಸ್​ ಆರ್​ ಟಿಸಿ ಬಸ್​ ನಲ್ಲಿ ಯಾರಾದರೂ ಜೋರಾದ ಧ್ವನಿಯಲ್ಲಿ ಹಾಡನ್ನು ಕೇಳುವುದು ಅಥವಾ ವಿಡಿಯೋಗಳನ್ನು ನೋಡುತ್ತಿದ್ದರೆ ಕೂಡಲೇ ಅವರಿಗೆ ಅದನ್ನು ನಿಲ್ಲಿಸುವಂತೆ ಸೂಚನೆ ನೀಡಬೇಕು. ಪ್ರಯಾಣಿಕ ಮಾತಿಗೆ ಬಗ್ಗದೇ ಇದ್ದಲ್ಲಿ ಅಂತವರನ್ನು ಬಸ್​ ನಿಂದ ಕೆಳಗೆ ಇಳಿಸಬಹುದು ಎಂದು ಹೈಕೋರ್ಟ್ ಹೇಳಿದೆ.

 

[t4b-ticker]

You May Also Like

More From Author

+ There are no comments

Add yours