ವಿಶ್ವಕ್ಕೆ ಕಲೆಯನ್ನು ಪರಿಚಯಿಸಿದ ಜಕಣಾಚಾರಿಯವರ ಪರಿಶ್ರಮ‌ ದೊಡ್ಡದು:ಶಾಸಕ ಟಿ.ರಘುಮೂರ್ತಿ

 

ಚಳ್ಳಕೆರೆ-01 ನಾಡಿಗೆ ಶಿಲ್ಲಕಲೆಯನ್ನು ನೀಡುವ ಮೂಲಕ ವಿಶ್ವಕ್ಕೆ ಕಲೆಯನ್ನು ಪರಿಚಯಿಸಿದ ಜಕಣಾಚಾರಿಯವರ ಪರಿಶ್ರಮ‌ ದೊಡ್ಡದು ಎಂದು ಶಾಸಕ ಟಿ.ರಘುಮೂರ್ತಿ ತಿಳಿಸಿದರು.

ಅವರು ನಗರದ ತಾಲ್ಲೂಕು ಕಚೇರಿಯಲ್ಲಿ ವಿಶ್ವಕರ್ಮ ಸಮಾಜ, ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಆಯೋಜಿಸಿದ್ದ ಜಕಣಾಚಾರಿ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ನಾಡಿನ ಶಿಲ್ಪಕಲೆಯ ಶ್ತೀಮಂತಿಕೆಯನ್ನು ಹೆಚ್ಚಿಸುವಲ್ಲಿ ವಿಶ್ವಕರ್ಮ ಸಮಾಜ ಹೆಚ್ಚು ಶ್ರಮಿಸಿದೆ.‌ ನಾಡಿ ಹಲವಾರು ಕಲೆ, ಸಂಸ್ಕೃತಿ, ಆಚರಣೆ, ವಿಚಾರಗಳ ಬಗ್ಗೆ ತಮ್ಮ ಕಲೆಯ ಮೂಲಕ ಜೀವ ತುಂಬಿದ ಕೀರ್ತಿ ನಮ್ಮದು ಎಂದರು.

ತಹಶೀಲ್ದಾರ್ ಎನ್.ರಘುಮೂರ್ತಿ ಮಾತನಾಡಿ, ನಾಡು ಕಂಡ ಅಪ್ರತಿಮ ಶಿಲ್ಪಕಲಾವಿದ ಜಕಣಾಚಾರಿ. ಅವರು ಈ ನಾಡಿಗೆ ನೀಡಿದ ಸೇವೆ ಎಂದಿಗೂ ಮರೆಯಲಾಗದು, ಇಂತಹ ಮಹಾನೀಯರ ಸೇವೆ, ನಾಡಿಗೆ ನೀಡಿದ ಸೇವೆಯನ್ನು ಸಮಾಜಕ್ಕೆ ತಿಳಿಸುವ ನಿಟ್ಟಿನಲ್ಲಿ ಜಯಂತಿ ಆಚರಣೆ ಮಾಡಲಾಗುತ್ತಿದೆ ಎಂದರು.
ಇದೆ ಸಂದರ್ಭದಲ್ಲಿ ಶಾಸಕರಾದ ಟಿ.ರಘುಮೂರ್ತಿ, ತಾಲೂಕು ದಂಡಾಧಿಕಾರಿಗಳ ಸಭಾಂಗಣದಲ್ಲಿ ತಾಲೂಕು ಆಡಳಿತ ವತಿಯಿಂದ ನಡೆದ ಹೊಸ ವರ್ಷದ ಸಂಭ್ರಮಾಚರಣೆಯಲ್ಲಿ ಕೇಕ್ ಕತ್ತರಿಸಿ ಹೊಸ ವರ್ಷದ ಶುಭಾಶಯ ಕೋರಿದರು.
ನಗರಸಭೆ ಅಧ್ಯಕ್ಷೆ ಸುಮಕ್ಕ ಅಂಜನಪ್ಪ, ವಿಶ್ವಕರ್ಮ ಸಮಾಜದ ಅಧ್ಯಕ್ಷ ವೆಂಕಟೇಶ ಚಾರ್, ಮುಖಂಡರಾದ ಬ್ರಹ್ಮಚಾರ್, ಶ್ರೀನಿವಾಸ್, ಮೌನೇಶಚಾರ್ ಮುಂತಾದವರು ಉಪಸ್ಥಿತರಿದ್ದರು.

[t4b-ticker]

You May Also Like

More From Author

+ There are no comments

Add yours