ಡಾ.ಬಿ.ಆರ್.ಅಂಬೇಡ್ಕರ್ ಪರಿಶ್ರಮ ಎಂದಿಗೂ ಯಾರು ಮರೆಯುವಂತಿಲ್ಲ: ಶಾಸಕ ಟಿ.ರಘುಮೂರ್ತಿ

 

ಚಳ್ಳಕೆರೆ-01 ನಾಡಿಗೆ ಸಂವಿಧಾನ ನೀಡಿ ದಲಿತರ ಏಳಿಗೆಗೆ ಶ್ರಮಿಸಿದ ಡಾ.ಬಿ.ಆರ್.ಅಂಬೇಡ್ಕರ್ ಪರಿಶ್ರಮ ಎಂದಿಗೂ ಯಾರು ಮರೆಯುವಂತಹದ್ದಲ್ಲ ಎಂದು ಶಾಸಕ ಟಿ.ರಘುಮೂರ್ತಿ ಹೇಳಿದರು.

ಅವರು, ನಗರದ ಬಿಸಿನೀರು ಮುದ್ದಪ್ಪ ಪ್ರೌಢಶಾಲಾ ಆವರಣದಲ್ಲಿ ಸಾಮಾಜಿಕ ಸಂಘರ್ಷ ಸಮಿತಿ ಆಯೋಜಿಸಿದ್ದ ಭೀಮಾ ಕೋರೆಗಾಂವ್ ವಿಜಯೋತ್ಸವ ದಿನದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಪೇಶ್ವೆ- ಮೇಲ್ಜಾತಿ ದಬ್ಬಾಳಿಕೆಯ ವಿರುದ್ಧ ದಲಿತರ ಸ್ವಾಭಿಮಾನಕ್ಕಾಗಿ ನಡೆದ ಭೀಮಾ ಕೋರೆಗಾಂವ್ ಕದನದಲ್ಲಿ ವಿಜಯ ಸಾಧಿಸಿದ ದಿನದ ಅಂಗವಾಗಿ, ಸಾಮಾಜಿಕ ಸಂಘರ್ಷ ಸಮಿತಿ ಆಯೋಜಿಸಿದ್ದ ಭೀಮಾ ಕೋರೆಂಗಾವ್ ವಿಜಯೋತ್ಸವದ ಪ್ರತಿಯೊಂದು ಘಟನೆಯನ್ನು ಚಿತ್ರಪಟಗಳ ಮೂಲಕ ಪ್ರದರ್ಶಿಸುವ ಮೂಲಕ ಕದನದ ಚಿತ್ರಣ ಅನಾವರಣ ಮಾಡಲಾಗಿದೆ. ವಿಧ್ಯಾರ್ಥಿಗಳು, ದಲಿತ ನಾಯಕರು, ಸಾರ್ವಜನಿಕರು, ಪ್ರತಿಯೊಬ್ಬ ತಿಳಿಯಬೇಕಾದ ಅಂಶ ಆಯೋಜನೆ ಮಾಡಿರುವುದು ಉತ್ತಮ ಕಾರ್ಯ ಎಂದರು.
ನಿವೃತ್ತ ಪ್ರೊ.ಸಿ.ಕೆ.ಮಹೇಶ್ ಮಾತನಾಡಿ, ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ಎಲ್ಲಾ ಸಮುದಾಯದವರು ಸ್ಮರಿಸಬೇಕಿದೆ. ಸಮಾಜದ ಪ್ರತಿಯೊಬ್ಬ ಅವರ ಪರಿಶ್ರಮವನ್ನು ತಿಳಿಯಬೇಕು. ಅವರ ಸಾಧನೆಗೆ ಪ್ರತಿ ಮನುಷ್ಯನ್ನು ನಮನ ಸಲ್ಲಿಸಬೇಕು ಎಂದರು.

ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷೆ ಸುಮಕ್ಕ ಅಂಜಿನಪ್ಪ, ನಗರಸಭೆ ಸದಸ್ಯರಾದ ವೀರಭದ್ರಯ್ಯ, ರಮೇಶಗೌಡ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಪ್ರಕಾಶ್ ಮೂರ್ತಿ, ದಲಿತ ಸಂಘರ್ಷ ಸಮಿತಿಯ ಅಧ್ಯಕ್ಷ ಉಮೇಶ್ ಬ್ಯಾನರ್ಜಿ ಮುಖಂಡರಾದ ಕೃಷ್ಣಮೂರ್ತಿ, ಬಸವರಾಜು, ಟಿ. ವಿಜಯಕುಮಾರ, ಮುತ್ತುರಾಜು, ದ್ಯಾಮಣ್ಣ, ಭೀಮನಕೆರೆ ಶಿವಮೂರ್ತಿ, ವೀರಭದ್ರಪ್ಪ, ಅಂಚಿನಪ್ಪ, ವಿನೋದ್ ಕುಮಾರ್, ವಿಶ್ವಕರ್ಮ ರಾಜ್ಯ ಅಧ್ಯಕ್ಷರಾದ ಪ್ರಸನ್ನ ಕುಮಾರ್ ಮುಂತಾದವರು ಉಪಸ್ಥಿತರಿದ್ದರು.

[t4b-ticker]

You May Also Like

More From Author

+ There are no comments

Add yours