ಕೋಟೆ ನಾಡಲ್ಲಿ ರಸ್ತೆ ಗುಂಡಿ ಮುಚ್ಚೋಕೆ ದುಡ್ಡಿಲ್ಲ,ಗುಂಡಿಗೊಂದು ಬ್ಯಾರಿಕೇಡ್, ಕಣ್ಮುಚ್ಚಿ ಕುಳಿತ ‌ಅಧಿಕಾರಿಗಳು

 

ಚಿತ್ರದುರ್ಗ: ತಗ್ಗು ಗುಂಡಿಗಳನ್ನು ನೋಡಬೇಕಾ ಬಾರಣ್ಣ ದುರ್ಗಕ್ಕೆ , ಇಲ್ಲಿ ನೀವುಗಳು ಯುಜಿಡಿ ಗುಂಡಿಗಳಿಗೆ ಗುಡ್ಡಕಟ್ಟಿ ಪ್ಲೆಟ್ ಮಾಡಿದ್ದಾರೆ. ಸರ್ಕಾರ ಮತ್ತು ಅಧಿಕಾರಿಗಳಿಗೆ ರಸ್ತೆಯ ಗುಂಡಿ ಮುಚ್ಚೋಕೆ ದುಡ್ಡಿಲ್ವೋ, ಏನ್ ಅಧಿಕಾರಿಗಳ ನಮಗೇನು ಆಗಬೇಕು ಅಂತ ಮಲಗಿದ್ದಿರಾ ಜನಗಳಿಗೆ ಅಂತೂ ಗೊತ್ತಿಲ್ಲ.

ಇದನ್ನೂ ಓದಿ: ನ್ಯೂಜಿಲೆಂಡ್ ತಂಡ ಸೋಲಿಸಿ ಭರ್ಜರಿ ಗೆಲುವು ಪಡೆದ ಭಾರತ ಫೈನಲ್ ಗೆ

ಹೌದು ಚಿತ್ರದುರ್ಗ ( chitradurga)ನಗರದ ಚಳ್ಳಕೆರೆ ಗೇಟ್ ನಲ್ಲಿ ಕಳೆದೆರಡು ತಿಂಗಳಿನಿಂದ ಗುಂಡಿ ಬಿದ್ದು ದಿನ ಕಳೆದಂತೆ ಸಣ್ಣ ತಟ್ಟಿಯಾದಂತೆ ಆಗುತ್ತಿದೆ. ಜೋಗಿಮಟ್ಟಿ ರಸ್ತೆಯಲ್ಲಿನ ಕೈಗಾರಿಕಾ ಕಚೇರಿ ಮುಂಭಾಗ ಯುಜಿಡಿ ಪ್ಲೆಟ್ ಒಡೆದಿದ್ದು ಅಲ್ಲಿ ಸಹ ಬ್ಯಾರೊಕೇಟ್ ಹಾಕಲಾಗಿದೆ. ಹೀಗೆ ಹಲವು ಕಡೆ ಗುಂಡಿ ಬಿದ್ದರು ಸಹ   ಸಂಬಂಧಿಸಿದ ಅಧಿಕಾರಿಗಳು ಮಾತ್ರ ನಮಗೆ ಸಂಬಂಧ ಇಲ್ಲ ಎಂಬಂತೆ ಕಣ್ಮುಚ್ಚಿ ಕುಳಿತಿದ್ದಾರೆ. ಹೈವೇ ಪಕ್ಕದಲ್ಲಿ ಸರ್ವಿಸ್ ರಸ್ತೆ ಸಂಪರ್ಕ ಕಲ್ಪಿಸಬೇಕಿದ್ದ ಸರ್ಕಲ್ ರಸ್ತೆಯಲ್ಲಿ ಗುಂಡಿ ದೊಡ್ಡದಾಗಿದೆ.ನಗರದ ಪ್ರವೇಶ ದ್ವಾರ ಜೊತೆಗೆ ಅತ್ಯಂತ ಹೆಚ್ಚಿನ ಜನಸಂದಣಿಯಿAದ ಕೂಡಿರುವ ರಸ್ತೆಯಾಗಿದ್ದರು ಅಧಿಕಾರಿಗಳು ಮತ್ತು ನಗರಸಭೆಯವರು ಸಹ ಅ ಒಂದಿಷ್ಟು ಮಣ್ಣು ಹಾಕುವ ಕೆಲಸ ಕೈ ಹಾಕದಿರುವುದು ಅವರಲ್ಲಿರುವ ನಿರ್ಲಕ್ಷ್ಯತನ ಕಾರಣ ಎಂದರೆ ತಪ್ಪಗಲಾರದು.

ಗುಂಡಿ ಬಿದ್ದ ಕಡೆ ಎಲ್ಲಾ ಬ್ಯಾರಿಕೇಡ್ ಹಿಡತ್ತಿರಾ

ರಸ್ತೆಗಳಲ್ಲಿ ಗುಂಡಿಗಳು ಬಿದ್ದಾಗ ಒಂದೆರಡು ದಿನ ಬ್ಯಾರಿಕೇಡ್ ಇಟ್ಟು ತುರ್ತಾಗಿ ಅಂತಹ ಅಪಯಕಾರಿ ಗುಂಡಿಗಳ ರಸ್ತೆಯನ್ನು ರಿಪೇರಿ ಮಾಡಿರುವುದು ಎಲ್ಲಾ ಕಡೆ ನೋಡಬಹುದು.ಆದರೆ ರಿಪೇರಿ ಗೋಜಿಗೆ ಹೋಗದೇ ಬ್ಯಾರಿಕೇಡ್ ಇಟ್ಟು ಕೈ ತೊಳೆದುಕೊಂಡಿದ್ದಾರೆ. ಆದರೆ ರಾತ್ರಿ ಸಮಯದಲ್ಲಿ ಬ್ಯಾರಿಕೇಡ್ ಸರಿಯಾಗಿ ಕಾಣದೇ ಅಪಘಾತಕ್ಕೆವಾದರೇ ಸರ್ಕಾರ ಪರಿಹಾರ ಕೊಡುತ್ತಾ ಅಥವಾ ನಗರಸಭೆ ಅವರ ಕುಟುಂಬಕ್ಕೆ ಪರಿಹಾರ ಕೊಡುತ್ತಾ ಎಂಬುದು ಮೊದಲು ಬಹಿರಂಗ ಮಾಡಲಿ. ರಸ್ತೆ ಗುಂಡಿ ಮುಚ್ಚೋಕೆ ಏನ್ ಪ್ರಾಬ್ಲಂ ಅಂತ ಹೇಳದೇ ಸುಮ್ಮನೆ ಕಣ್ಮುಚ್ಚಿ ಕಂಡು ಕಾಣದಂತೆ ಇದ್ದಾರೆ.

ಇಲಾಖೆಗಳಲ್ಲಿ ಸರ್ಕಾರದಿಂದ ಹಣ ಬಂದಿಲ್ವ , ರಸ್ತೆ ರಿಪೇರಿ ಮಾಡೋಕೆ ಇಷ್ಟ ಇಲ್ವ.

ರಾಜ್ಯ ಸರ್ಕಾರದಿಂದ ಎಲ್ಲಾ ಇಲಾಖೆಗಳಿಗೆ ಹಣ ಬಿಡುಗಡೆ ಆಗುತ್ತದೆ. ಇದರಲ್ಲಿ ಹಲವು ಇಲಾಖೆಗೆ ರಸ್ತೆ ರಿಪೇರಿಗೆ ನಗರಸಭೆ ಸೇರಿ ಸಂಬAಧಿಸಿದ ಇಲಾಖೆಗೆ ಹಣ ಬರುತ್ತದೆ. ಆದರೆ ನಗರಸ ಒಳ ಭಾಗದಲ್ಲಿ ಹೆಚ್ಚು ಕಡಿಮೆ ಆದರೆ ಸ್ವಲ್ಪ ದಿನ ಸುಧಾರಿಸಿಕೊಳ್ಳೋಣ ಅನ್ನಬಹುದು. ಮುಖ್ಯ ರಸ್ತೆಗಳಲ್ಲಿ ಸಮಸ್ಯೆಗಳನ್ನು ಸಹ ಬಗೆಹರಿಸಲಾಗದ ಪರಿಸ್ಥಿತಿ ಸರ್ಕಾರಕ್ಕೆ ಬಂದಿದೆಯಾ ಎಂಬ ಮಾತು ಸಾರ್ವಜನಿಕರ ವಲಯದಲ್ಲಿ ಕೇಳಿ ಬರುತ್ತಿದೆ.

ಅಧಿಕಾರಿಗಳು ಇನ್ನಾದರೂ ಎಚ್ಚೆತ್ತುಕೊಂಡು ಸಾರ್ವಜನಿಕರು ಮೇಜರ್ ಸಮಸ್ಯೆಗಳಿಗೆ ನಗರಸಭೆ ಸೇರಿ ಈ ರಸ್ತೆಗೆ ಒಳಪಡುವ ಇಲಾಖೆಯವರು ಗುಂಡಿಮುಚ್ಚಿ ಅಪಘಾತಗಳು ಸಾವು ನೋವುಗಳು ಆಗದ ರೀತಿಯಲ್ಲಿ ಕ್ರಮ ವಹಿಸುತ್ತಾರೋ, ಯಾರಾದರೂ ಬೀಳಲಿ ಏಳಲಿ ಗುಂಡಿ ಬಿದ್ದ ಕಡೆ ಎಲ್ಲಾ ಬ್ಯಾರಿಕೇಡ್ ಇಟ್ಟು ಸುಮ್ಮನೆ ಆಗೋಣ ಅಂತ ನಿರ್ಲಕ್ಷ್ಯ ವಹಿಸುತ್ತಾರಾ ಎಂಬುದು ಕಾದು ನೋಡಬೇಕಿದೆ. ಒಟ್ಟಿನಲ್ಲಿ ಜನರಿಗೆ ತೊಂದರೆ ಆಗದಂತೆ ಸಾರ್ವಜನಿಕರ ಪ್ರದೇಶದ ಸಮಸ್ಯೆಗಳಿಗೆ ತುರ್ತಾಗಿ ಕ್ರಮ ಕೈಗೊಳ್ಳುವ ಚಲ ಅಧಿಕಾರಿಗಳಿಗೆ ಯಾವಾಗ ಬರುತ್ತೋ ದೇವರಿಗೆ ಗೊತ್ತು.

ಹೈಲೆಟ್ಸ್
* ಚಳ್ಳಕೆರೆ ಗೇಟ್ ರಸ್ತೆಯಲ್ಲಿ ದೊಡ್ಡ ಗುಂಡಿ
*ವಾಹನ ಸವಾರರಿಗೆ ದೊಡ್ಡ ಚಾಲೆಂಜ್
* ರಸ್ತೆ ಗುಂಡಿ ಮುಚ್ಚದೇ ಬ್ಯಾರಿಕೇಟ್ ಇಟ್ಟವರ್ಯಾರು
* ಚಿಕ್ಕಗುಂಡಿ ಈಗ ಚಿಕ್ಕ ತೊಟ್ಟಿಯಾಗಿ ಪರಿವರ್ತನೆ
*ರಾತ್ರಿ ಅಪಘಾತ ಸಂಭವ ಹೆಚ್ಚು
* ಒನ್ ವೇ ಪ್ರಾಬ್ಲಂ ಜೊತಗೆ ಗುಂಡಿ ಪ್ರಾಬ್ಲಂ
* ಕಣ್ಮುಚ್ಚಿ ಕುಳಿತ ಅಧಿಕಾರಿಗಳು
* ಸರ್ಕಾರದಲ್ಲಿ ಗುಂಡಿ ಮುಚ್ಚಲು ಹಣವಿಲ್ವ ಎಂಬ ಅನುಮಾನ
* ಮಿಸ್ ಆದರೆ ಸೊಂಟ ಮುರಿಯೋದು ಗ್ಯಾರೆಂಟಿ 

[t4b-ticker]

You May Also Like

More From Author

+ There are no comments

Add yours