ನ್ಯೂಜಿಲೆಂಡ್ ತಂಡ ಸೋಲಿಸಿ ಭರ್ಜರಿ ಗೆಲುವು ಪಡೆದ ಭಾರತ ಫೈನಲ್ ಗೆ

 

ಭಾರತ v/s ನ್ಯೂಜಿಲೆಂಡ್  ಸೆಮಿಫೈನಲ್ಸ್ ಮ್ಯಾಚ್ : ಟಾಸ್ ಗೆದ್ದ ತಕ್ಷಣ ಭಾರತದ ಗುರಿ ಸ್ಪಷ್ಟವಾಗಿತ್ತು. ಆರಂಭಿಕವಾಗಿ ಅಖಾಡಕ್ಕೆ ಇಳಿದ  ನಾಯಕ ರೋಹಿತ್ ಶರ್ಮಾ (Rohit Sharma)ಗ್ರೌಂಡ್‌ಗೆ ಇಳಿದು ಸಿಕ್ಸ್‌ರ್‌ಗಳ ಮಳೆ ಸುರಿಸಿ, ಆಟ ಈಗ ಶುರು ಅಂತ ಅಂತ ದೊಡ್ಡ ಮುನ್ಸೂಚನೆ ನೀಡಿದರು. ಮೊದಲ ವಿಕೆಟ್‌ಗೆ ರೋಹಿತ್ ಶರ್ಮಾ ಮತ್ತು ಶುಭಮನ್ ಗಿಲ್ 8.2 ಓವರ್‌ಗಳಲ್ಲಿ 71 ರನ್ ಕಲೆಹಾಕಿದರು.

ರೋಹಿತ್ ಶರ್ಮಾ 29 ಎಸೆತಗಳಲ್ಲಿ 4 ಬೌಂಡರಿ ಹಾಗೂ 4 ಸಿಕ್ಸರ್ ನೆರವಿನಿಂದ 47 ರನ್ ಗಳಿಸಿದರು. ರೋಹಿತ್ ಔಟಾದ ನಂತರ ಗಿಲ್ ದಾಳಿಯ ಜವಾಬ್ದಾರಿಯನ್ನು ವಹಿಸಿಕೊಂಡರು. ಆದರೆ ಅವರ ವೈಯಕ್ತಿಕ ಸ್ಕೋರ್ 77 ರನ್ ಆಗಿರುವಾಗ, ಗಿಲ್ ಗಾಯದಿಂದ ನಿರ್ಗಮಿಸಬೇಕಾಯಿತು. ನಂತರ ಕ್ರೀಸ್‌ನಲ್ಲಿದ್ದ ವಿರಾಟ್ ಕೊಹ್ಲಿ ಮತ್ತು ಶ್ರೇಯಸ್ ಅಯ್ಯರ್ ಅಬ್ಬರ ಶುರುವಾಯಿತು. ಇಬ್ಬರು ತಲಾ ಒಂದೊಂದು ಶತಕ ಬಾರಿಸಿದರು.

ಏಕದಿನ ಕ್ರಿಕೆಟ್ ನಲ್ಲಿ ಇತಿಹಾಸ ನಿರ್ಮಿಸಿದ ಕೊಹ್ಲಿ ತಮ್ಮ ವೃತ್ತಿ ಜೀವನದಲ್ಲಿ 50ನೇ ಶತಕ ದಾಖಲಿಸಿದರು. ಈ ಮೂಲಕ ಸಚಿನ್ ತೆಂಡೂಲ್ಕರ್ ದಾಖಲೆಯನ್ನು ಕೊಹ್ಲಿ ಹಿಂದಿಕ್ಕಿದರು. 113 ಎಸೆತಗಳಲ್ಲಿ 9 ಬೌಂಡರಿ ಮತ್ತು 2 ಸಿಕ್ಸರ್‌ಗಳೊಂದಿಗೆ 117 ರನ್ ಗಳಿಸಿದರು.

ಕೊಹ್ಲಿ ಔಟಾದ ಬಳಿಕ ಶ್ರೇಯಸ್ ಅಯ್ಯರ್ ಆರ್ಭಟಕ್ಕೆ ವಾಂಖೆಡೆ ನಡುಗಿತು. 70 ಎಸೆತಗಳಲ್ಲಿ 4 ಬೌಂಡರಿ ಹಾಗೂ 8 ಸಿಕ್ಸರ್ ಸಿಡಿಸಿದ ಶ್ರೇಯಸ್ 105 ರನ್ ಗಳಿಸಿ ಔಟಾದರು. ನ್ಯೂಜಿಲೆಂಡ್ ಪರ ಟಿಮ್ ಸೌಥಿ 10 ಓವರ್‌ಗಳಲ್ಲಿ 100 ರನ್ ನೀಡಿ 3 ವಿಕೆಟ್ ಪಡೆದರು. ಟ್ರೆಂಡ್ ಬೌಲ್ಟ್ 10 ಓವರ್‌ಗಳಲ್ಲಿ 86 ರನ್ ನೀಡಿ 1 ವಿಕೆಟ್ ಪಡೆದರು. ಭಾರತ ವಾಂಖೆಡೆಯಲ್ಲಿ ಭಾರತದ ಬ್ಯಾಟಿಂಗ್ ಅಬ್ಬರ : ಕಿವೀಸ್‌ಗೆ 398 ರನ್‌ಗಳ ಬೃಹತ್‌ ಗುರಿ ನ್ಯೂಜಿಲೆಂಡ್ ತಂಡಕ್ಕೆ ನೀಡಿತು.

ಭಾರತದ ಬೃಹತ್ ಟಾರ್ಗೆಟ್‌ಗೆ ಉತ್ತರವಾಗಿ ನ್ಯೂಜಿಲೆಂಡ್ ಕೂಡ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದೆ. ಆರಂಭಿಕ 2 ವಿಕೆಟ್ ಬಹುಬೇಗನೆ ಪತನಗೊಂಡರೂ ನಾಯಕ ಕೇನ್ ವಿಲಿಯಮ್ಸನ್ ಹಾಗೂ ಡರಿಲ್ ಮಿಚೆಲ್ ದಾಖಲೆಯ ಜೊತೆಯಾಟ ಭಾರತದ ತಲೆನೋವು ಹೆಚ್ಚಿಸಿತ್ತು.

ಇದನ್ನೂ ಓದಿ: ಮುರುಘಾ ಮಠದ ಶಿವಮೂರ್ತಿ ಶರಣರಿಗೆ ಬಿಡುಗಡೆ ಆದೇಶ

ಆದರೆ ಮತ್ತೆ ಮೊಹಮ್ಮದ್ ಶಮಿ ದಾಳಿ ಸಂಘಟಿಸುವ ಮೂಲಕ ನ್ಯೂಜಿಲೆಂಡ್ ಲೆಕ್ಕಾಚಾರ ಉಲ್ಟಾ ಮಾಡಿದ್ದರೆ. ಅಬ್ಬರದ ಬ್ಯಾಟಿಂಗ್‌ಗೆ ಬ್ರೇಕ್ ಬಿದ್ದಿದೆ. ಇಷ್ಟೇ ಅಲ್ಲ ವಿಶ್ವಕಪ್ ಟೂರ್ನಿಯಲ್ಲಿ ಅತೀ ಕಡಿಮೆ ಇನ್ನಿಂಗ್ಸ್‌ನಲ್ಲಿ 50 ವಿಕೆಟ್ ಕಬಳಿಸಿದ ಬೌಲರ್ ಅನ್ನೋ ದಾಖಲೆ ಮೊಹಮ್ಮದ್ ಶಮಿ ಹೆಸರಿಗೆ ದಾಖಲಾಗಿದೆ.

ವಿಶ್ವಕಪ್ ಟೂರ್ನಿಯಲ್ಲಿ ಅತೀ ಕಡಿಮೆ ಇನ್ನಿಂಗ್ಸ್‌ನಲ್ಲಿ 50 ವಿಕೆಟ್ ಸಾಧನೆ
ಮೊಹಮ್ಮದ್ ಶಮಿ: 17 ಇನ್ನಿಂಗ್ಸ್
ಮಿಚೆಲ್ ಸ್ಟಾರ್ಕ್: 19 ಇನ್ನಿಂಗ್ಸ್
ಲಸಿತ್ ಮಲಿಂಗ: 25 ಇನ್ನಿಂಗ್ಸ್
ಟ್ರೆಂಟ್ ಬೋಲ್ಟ್: 28 ಇನ್ನಿಂಗ್ಸ್

ಸೆಮಿಫೈನಲ್ ಪಂದ್ಯದಲ್ಲಿ ಮಿಚೆಲ್ ಹಾಗೂ ವಿಲಿಯಮ್ಸನ್ 181 ರನ್ ಜೊತೆಯಾಟ ಭಾರತದ ಆತಂಕ ಹೆಚ್ಚಿಸಿತ್ತು. ಬೌಂಡರಿ ಸಿಕ್ಸರ್ ಮೂಲಕ ನ್ಯೂಜಿಲೆಂಡ್ ಕೂಡ ದಿಟ್ಟ ಹೋರಾಟ ನೀಡಿತು. ಇದೇ ವೇಳೆ ಸ್ಟ್ರಾಟರ್ಜಿ ಬದಲಿಸಿದ ನಾಯಕ ರೋಹಿತ್ ಶರ್ಮಾ, ಮತ್ತೆ ಶಮಿ ದಾಳಿ ಸಂಘಟಿಸಿದರು. ಆರಂಭಿಕ 2 ವಿಕೆಟ್ ಕಬಳಿಸಿ ಭಾರತಕ್ಕೆ ಭರ್ಜರಿ ಮುನ್ನಡೆ ತಂದುಕೊಟ್ಟ ಮೊಹಮ್ಮದ್ ಶಮಿ, ನ್ಯೂಜಿಲೆಂಡ್ ಜೊತೆಯಾಕ್ಕೆ ಬ್ರೇಕ್ ಹಾಕಿದರು. ಕೇನ್ ವಿಲಿಯಮ್ಸನ್ 69 ರನ್ ಸಿಡಿಸಿ ನಿರ್ಗಮಿಸಿದರು. ಇತ್ತ ಮಿಚೆಲ್ ಸೆಂಚುರಿ ಸಂಭ್ರಮ ಆಚರಿಸಿದರು. ಆದರೆ ಟಾಮ್ ಲಾಥಮ್ ಖಾತೆ ತೆರೆಯಲು ಶಮಿ ಅವಕಾಶ ನೀಡಲಿಲ್ಲ.

ಹಂತ ಹಂತವಾಗಿ ವಿಕೆಟ್ ಕಳೆದುಕೊಂಡು ನ್ಯೂಜಿಲೆಂಡ್ ತಂಡವು ಒಂದು ಹಂತಕ್ಕೆ ಗೆಲುವಿನ ಮೂನ್ಸೂಚನೆ ನೀಡಿತ್ತಾದರೂ  ಒಳ್ಳೆಯ ಗೆಲುವಿನ ಹೋರಟದ ಸಮಯದಲ್ಲಿ  ವಿಕೆಟ್ ಕಿತ್ತ ಕುಲದೀಪ್ ಮತ್ತು ಬುಮ್ರ, ಶಮಿ ದಾಳಿಗೆ ನ್ಯೂಜಿಲೆಂಡ್ ನಡುಗಿತು.  48.5  ಗಳವೆರಗೂ ಹೋರಟ ನಡೆಸಿದ ನ್ಯೂಜಿಲೆಂಡ್  ಕೊನೆಯಾದಾಗಿ  327 ರನ್ ಗಳಿಸಲು ಶಕ್ತವಾಗಿ ಅಲೌಟ್ ಆಗಿ ಸೋಲಪ್ಪಿಕೊಂಡು ಫೈನಲ್ ಕನಸು ಮರೆತು ಮನೆಗೆ ನಡೆಯಿತು.

[t4b-ticker]

You May Also Like

More From Author

+ There are no comments

Add yours