ರಾಹುಲ್ ಕೈ ಸೇರಿದೆಯಾ ಕೋಟೆ ನಾಡಿನ ವಿಧಾ‌ನ ಸಭಾ ಕ್ಷೇತ್ರಗಳ‌ ಮಾಹಿತಿ, ಏನಿದೆ ಗೊತ್ತೆ?

 

ಚಿತ್ರದುರ್ಗ:(chitrdaurga) ಚಿತ್ರದುರ್ಗ ಜಿಲ್ಲೆಗೆ ಇಂದು ರಾಹುಲ್ ಗಾಂಧಿ ನೇತೃತ್ವದ  ಭಾರತ್ ಜೋಡೋ‌ ಯಾತ್ರೆ ಕೋಟೆ ನಾಡು ಚಿತ್ರದುರ್ಗ ಜಿಲ್ಲೆಯನ್ನು ಇಂದು ಪ್ರದರ್ಶಿಸಲಿದೆ. ರಾಜ್ಯ ವಿಧಾನ ಸಭಾ ಚುನಾವಣೆ ಹೊತ್ತಿನಲ್ಲಿ ಭಾರಿ ಸಂಚಲನ ಮೂಡಿಸಿರುವ ಈ ಯಾತ್ರೆಯಿಂದ ಕಾಂಗ್ರೆಸ್ ಕಾರ್ಯಕರ್ತರಿಗೆ ಮತ್ತು ನಾಯಕರಿಗೆ ಹೊಸ ಬೂಸ್ಟ್ ನೀಡಿದಂತೆ ಆಗಿದೆ.

ಚಿತ್ರದುರ್ಗ ಜಿಲ್ಲೆ‌ (Chitradurga District Congress)ಒಂದು ಕಾಲದಲ್ಲಿ‌ ಕಾಂಗ್ರೆಸ್ ಪಕ್ಷದ ಭದ್ರಕೋಟೆ ಕಳೆದ ಬಾರಿ ಭದ್ರ‌ಕೋಟೆ ಛಿತ್ರವಾಗಿತ್ತು.      ಚಿತ್ರದುರ್ಗ ಜಿಲ್ಲೆಯ ಆರು ವಿಧಾನ ಸಭಾ ಕ್ಷೇತ್ರದಲ್ಲಿ ಚಳ್ಳಕೆರೆ ವಿಧಾನ ಸಭಾ ಕ್ಷೇತ್ರ ಮಾತ್ರ ಕಾಂಗ್ರೆಸ್ ವಶದಲ್ಲಿದೆ. ಉಳಿ‌ದ ಐದು ಜನ ಶಾಸಕರು ಬಿಜೆಪಿ ಗೆಲುವು ಕಂಡಿದ್ದಾರೆ.ಹೊಸದುರ್ಗ, ಮೊಳಕಾಲ್ಮುರು, ಹೊಳಲ್ಕೆರೆ, ಚಿತ್ರದುರ್ಗ ನಗರಸಭೆ ಮತ್ತು ಪಟ್ಟಣ ಪಂಚಾಯಿತಿ‌ ಸ್ಥಳೀಯ ಅಧಿಕಾರ ಸಹ ಬಿಜೆಪಿ ಕೈ ಯಲ್ಲಿದೆ.  ಚಳ್ಳಕೆರೆ ನಗರಸಭೆ ಮತ್ತು ಹಿರಿಯೂರು ನಗರಸಭೆ ಕಾಂಗ್ರೆಸ್ ಹಿಡಿತದಲ್ಲಿದೆ. ದಿನದಿಂದ ದಿನಕ್ಕೆ ಹಾವು ಏಣಿ ಆಟ ನಡೆಯುತ್ತಿವೆ.( Rahul Gandhi)

ಕಾಂಗ್ರೆಸ್ ಪಕ್ಷಕ್ಕೆ  ಹೊಳಲ್ಕೆರೆ, ಮೊಳಕಾಲ್ಮುರು, ಹಿರಿಯೂರು, ಚಿತ್ರದುರ್ಗ ಕ್ಷೇತ್ರಗಳು   ಅಭ್ಯರ್ಥಿಗಳ‌ ನಡುವೆ ಭರ್ಜರಿ  ಪೈಪೋಟಿ ನಡೆಯುತ್ತಿದೆ. ಚಳ್ಳಕೆರೆ  ಮತ್ತು ಹೊಸದುರ್ಗ ಒಬ್ಬರು ಅಭ್ಯರ್ಥಿಗಳಲ್ಲಿ ಯಾವುದು ಗೊಂದಲ್ಲ ಇಲ್ಲವಾಗಿದೆ.

ಹಿರಿಯೂರು: ಇಂದು ಹಿರಿಯೂರು ಪ್ರವೇಶಸಲ್ಲಿರುವ ಭಾರತ್ ಜೋಡೋ ಪಾದಯಾತ್ರೆಗೆ ಅಲ್ಲಿ‌ ಎಂಎಲ್ಸಿ ನಿಂತು ಪರಾಭವಗೊಂಡ ಸೋಮಶೇಖರ್ ಮತ್ತು ಮಾಜಿ ಸಚಿವರ ಸುಧಾಕರ್ ನಡುವೆ ಫೈಟ್ ಏರ್ಪಟ್ಟಿದೆ.

ಮೊಳಕಾಲ್ಮುರು: ಮೊಳಕಾಲ್ಮುರು ಕ್ಷೇತ್ರದಲ್ಲಿ  ಮಾಜಿ ಶಾಸಕ‌ ತಿಪ್ಪೇಸ್ವಾಮಿ, ಮಾಜಿ‌ ಜಿಲ್ಲಾ ಪಂಚಾಯತ ‌ಸದಸ್ಯ‌ ಯೋಗೇಶ್ ಬಾಬು, ಅಚ್ಚರಿ ಅಭ್ಯರ್ಥಿ ಎಂಬಂತೆ ತಹಶೀಲ್ದಾರ್ ಒಬ್ಬರು ಸಹ ಮೊಳಕಾಲ್ಮುರು ಕ್ಷೇತ್ರದ ಮೇಲೆ ಕಣ್ಣಿಟ್ಟಿದ್ದಾರೆ. ಆದರೆ ಟಕೆಟ್ ಯಾರು ಪಡೆಯುತ್ತಾರೆ ಎಂಬುದು ಕೊನೆಯ ಕ್ಷಣದವರೆಗೂ ಹೇಳಲಾಗಲ್ಲ.

ಇದನ್ನು ಓದಿ: ಶ್ರೀ ಅಹೋಬಲ ಟವಿಎಸ್ ಕಂಪನಿಯಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

ಚಿತ್ರದುರ್ಗ: ಇನ್ನೂ ಜಿಲ್ಲಾ ಕೇಂದ್ರ ಚಿತ್ರದುರ್ಗ ವಿಧಾನ ಸಭಾ ಕ್ಷೇತ್ರದಲ್ಲಿ  ಮಾಜಿ ಎಂಎಲ್ಸಿ  ರಘು ಆಚಾರ್, ಉದ್ಯಮಿ ವೀರೇಂದ್ರ ಪಪ್ಪಿ, ಹನುಮಲಿ ಷಣ್ಮುಖಪ್ಪ ಟಕೆಟ್ ಗೆ ಯತ್ನ ನಡೆಸುತ್ತಿದ್ದಾರೆ.

ಹೊಳಲ್ಕೆರೆ: ಹೊಳಲ್ಕೆರೆ ವಿಧಾನ ಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಎರಡು ಗುಂಪುಗಳ‌ ನಡುವೆ ನಾನ‌ ನೀನಾ ಸ್ವರ್ದೆ ಏರ್ಪಟ್ಟಿದ್ದು ಮಾಜಿ ಸಚಿವ ಹೆಚ್. ಆಂಜನೇಯ ಮತ್ತು ಯುವ ಮುಖಂಡ ರಘು ಅವರ ನಡುವೆ ಹೈ ವೋಲ್ಟೇಜ್ ಕ್ಷೇತ್ರವಾಗಿ ಮಾರ್ಪಟ್ಟಿದೆ.ರಘು ಗ್ರೌಂಡ್ ಲೇವಲ್ ವರ್ಕ್ ಮಾಡುತ್ತಿದ್ದರೆ ಆಂಜನೇಯ ಹಳೆ ಟೀಮ್ ‌ನೊಂದಿಗೆ ರಂಗ ಪ್ರವೇಶಿಸಿದ್ದು ಟಿಕೆಟ್ ನಾನೇ ತರುತ್ತೇನೆ ಎಂದು ಇಬ್ಬರು ಹೇಳುತ್ತಿದ್ದಾರೆ.

ಚಳ್ಳಕೆರೆ: ಸದ್ಯ ಚಳ್ಳಕೆರೆ ಕಾಂಯ ಪಕ್ಷದಲ್ಲಿ ಗೊಂಡಲವಿಲ್ಲ. ಪೈಪೋಟಿ ಇಲ್ಲ. ಹಾಲಿ ಶಾಸಕ ಟಿ.ರಘುಮೂರ್ತಿ ಅವರಿಗೆ ಟಿಕೆಟ್ ಖಾತ್ರಿಯಾಗಿದೆ.

ಹೊಸದುರ್ಗ: ಹೊಸದುರ್ಗ ಕ್ಷೇತ್ರದಲ್ಲಿ  ಮಾಜಿ ಶಾಸಕ‌ ಗೋವಿಂದಪ್ಪ ಅವರಿಗೆ ಟಿಕೆಟ್ ಫಿಕ್ಸ್ ಅಂತ ಹೇಳುತ್ತಿದ್ದಾರೆ. ಇಲ್ಲಿ ಚಿಕ್ಕ ಪುಟ್ಟ ಸಮಸ್ಯೆ ಬಿಟ್ಟರೆ ಟಿಕೆಟ್ ಮಾತ್ರ ಫಿಕ್ಸ್ ಆಗಿದೆ.

ಈ‌ ಎಲ್ಲಾ  ವರದಿಯನ್ನು ರಾಹುಲ್ ತರಸಿಕೊಂಡಿದ್ದು ಯಾರ ಶಕ್ತಿ‌ ಏನು ಎಂಬುದನ್ನು  ಎಲ್ಲಾವನ್ನು ರಾಹುಲ್ ವಿಕ್ಷಣೆ ಮಾಡಲಿದ್ದಾರೆ ಎಂಬುದು ತಿಳಿದಿದೆ.

ಚಿತ್ರದುರ್ಗ ಜಿಲ್ಲೆಯಲ್ಲಿ ಭಾರತ್ ಜೋಡೋ ಯಾತ್ರೆ  ಸಂಚರಿಸುವ ಮೂಲಕ‌ ಶಕ್ತಿ ತುಂಬುತ್ತದೆ ಎಂಬ ಅಭಿಲಾಷೆಯಲ್ಲಿ ಕಾರ್ಯಕರ್ತರಿದ್ದಾರೆ. ಜಿಲ್ಲೆಯ ಎಲ್ಲಾ ವಿಧಾನ ಸಭಾ ಕ್ಷೇತ್ರದಲ್ಲಿ  ಕೈ ಗೆಲುವು ಕಾಣಬೇಕು.‌ಅದರ ನಿಟ್ಟಿನಲ್ಲಿ ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಬೇಕು. ರಾಜ್ಯ ನಾಯಕರು ಸಹ ಪಕ್ಷದ ಗೆಲುವಿಗೆ ಶ್ರಮಿಸಬೇಕು.ಸ್ವ ಪ್ರತಿಷ್ಠೆ ಬಿಟ್ಟು ಪಕ್ಷಕ್ಕೆ ದುಡಿದರೆ ಪಕ್ಷ ಅಧಿಕಾರಕ್ಕೆ ಬರುತ್ತದೆ ಎಂಬ ಸಂದೇಶ ರವಾನಿಸುವ ಜೊತೆಗೆ ಪಕ್ಷ ಸಂಘಟನೆ ಮಾಡುವವರಿಗೆ ಟಿಕೆಟ್ ಫಾರ್ಮೂಲ ಇದೆ.ಅದಕ್ಕಾಗಿ ರಾಜ್ಯದ ಮತ್ತು ಕೋಟೆ ನಾಡಿನ ಎಲ್ಲಾ ಟಿಕೆಟ್ ಆಕಾಂಕ್ಷಿಗಳು ಫುಲ್ ಆ್ಯಕ್ಟಿವ್ ಆಗಿದ್ದು ಪಾದಯಾತ್ರೆಯಿಂದ ಕೋಟೆ ನಾಡಿನಲ್ಲಿ‌ ಕಾಂಗ್ರೆಸ್  ಪಕ್ಷ ಯಾವ ರೀತಿ‌ ಸುಧಾರಣೆ ಕಾಣಲಿದೆ ಎಂಬುದು ಕಾದು ನೋಡಬೇಕಿದೆ.

[t4b-ticker]

You May Also Like

More From Author

+ There are no comments

Add yours